ಘಟಪ್ರಭಾ ಪ್ರವಾಹ ಭೀತಿ: ಆತಂಕದಿಂದ ದೇವರ ಮೊರೆ ಹೋದ ಮಹಿಳೆಯರು

Published : Jul 30, 2025, 07:46 PM IST
malaprabha water flow

ಸಾರಾಂಶ

ಬಾಗಲಕೋಟೆ ಜಿಲ್ಲೆಯಲ್ಲಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಅಂತಾಪುರ ಗ್ರಾಮದ ಜನರಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಸೇತುವೆಗಳು ಜಲಾವೃತಗೊಂಡಿದ್ದು, ಜನರು ಸುತ್ತುವರಿಯುವ ಅನಿವಾರ್ಯತೆ ಎದುರಾಗಿದೆ. ಮಹಿಳೆಯರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

ಬಾಗಲಕೋಟೆ: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸಂಭವಿಸಿರುವ ಭಾರಿ ಮಳೆಯ ಪರಿಣಾಮ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಅಂತಾಪುರ ಗ್ರಾಮದಲ್ಲಿ ಘಟಪ್ರಭಾ ನದಿಯ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಈ ಪ್ರವಾಹ ಭೀತಿಯಿಂದ ನದಿ ತೀರದ ಗ್ರಾಮಸ್ಥರಲ್ಲಿ ಭಯವನ್ನುಂಟು ಮಾಡಿದ್ದು, ಆತಂಕದಿಂದ ಮಹಿಳೆಯರು ದೇವರ ಮೊರೆ ಹೋಗಿದ್ದಾರೆ.

ಅಂತಾಪುರ ಮತ್ತು ಕೆಡಿ ಜಂಬಗಿ ಎಂಬ ನಾಡಿನ ಹತ್ತಿರದ ಎರಡು ಗ್ರಾಮಗಳ ನಡುವಿನ ಕೇವಲ 1 ಕಿಲೋಮೀಟರ್ ದೂರದ ಸೇತುವೆ ಜಲಾವೃತಗೊಂಡಿದೆ. ಇದರಿಂದಾಗಿ ಗ್ರಾಮಸ್ಥರು ಪ್ರಯಾಣಿಸಿ ಹೋಗಲು ಸುಮಾರು 20 ಕಿಲೋಮೀಟರ್ ಸುತ್ತುವರೆಯುವ ಅನಿವಾರ್ಯತೆಗೆ ಎದುರಾಗಿದೆ. ಘಟಪ್ರಭಾ ನದಿ ದಡದ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆ ನಾಶದ ಅಪಾಯವೂ ತೀವ್ರವಾಗಿದೆ. ಈ ಭೀತಿಯ ನಡುವೆ, ಗ್ರಾಮದಲ್ಲಿನ ಮಹಿಳೆಯರು ಭಾಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಿದ್ದು, ನದಿ ಭಕ್ತಿಯ ತವಕ ಹಾಗೂ ಪ್ರವಾಹ ಬಾರದಿರಲೆಂದು ಮನವಿ ಮಾಡುತ್ತಿದ್ದಾರೆ.

ಚಿಕ್ಕೋಡಿಯಲ್ಲಿ ಕೃಷ್ಣಾ ನದಿಯ ಪ್ರವಾಹ ತೀವ್ರತೆ 

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮುಂದುವರಿದ ಮಳೆಯ ಪರಿಣಾಮ ಕೃಷ್ಣಾ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ 1.4 ಲಕ್ಷ ಕ್ಯೂಸೆಕ್ ನೀರಿನ ಒಳಹರಿವು ಸಂಭವಿಸಿದೆ. ಇದರ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗದ 10 ಸೇತುವೆಗಳು ಜಲಾವೃತಗೊಂಡಿವೆ.

ಜಮಖಂಡಿ-ಮೀರಜ ರಾಜ್ಯ ಹೆದ್ದಾರಿ ಸಂಪೂರ್ಣವಾಗಿ ಬಂದ್ ಆಗಿದ್ದು, ಕುಡಚಿ-ಉಗಾರ ಸೇತುವೆಯು ನೀರಿನಲ್ಲಿ ಮುಳುಗಿದ ಕಾರಣ ವಾಹನಗಳು ಸುಮಾರು 60 ಕಿಲೋಮೀಟರ್ ದೂರ ಸುತ್ತುವರೆಯುತ್ತಿವೆ. ರಾಯಬಾಗ ತಾಲೂಕಿನ ಕುಡಚಿ ಸೇತುವೆ ಸಂಪೂರ್ಣ ಜಲಾವೃತವಾಗಿದೆ.

ದುರದೃಷ್ಟವಶಾತ್, ನದಿ ತೀರದ ಪ್ರದೇಶಗಳಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಉಲೇಕನೀಯವಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಗಮನಿಸಿ ಮುನ್ನೆಚ್ಚರಿಕೆ ವಹಿಸಬೇಕಾದ ನಿರ್ವಾಹಕರು ಬ್ಯಾರಿಕೇಡ್ ಹಾಕಿಸಿ ಮನೆಯಲ್ಲಿ ಕುಳಿತಂತಾಗಿದ್ದಾರೆ. ಜನರು ನದಿಯ ದಡದಲ್ಲಿ ಬಟ್ಟೆ ಒಗೆತ ಹಾಗೂ ಮೀನುಗಾರಿಕೆಯಲ್ಲಿ ತೊಡಗಿರುವ ದೃಶ್ಯಗಳು ಆತಂಕ ಕೆರಳಿಸುತ್ತಿವೆ. ಪ್ರಸಕ್ತ ಪ್ರವಾಹ ಪರಿಸ್ಥಿತಿಗೆ ಜಿಲ್ಲಾಡಳಿತದಿಂದ ತುರ್ತು ಮತ್ತು ಸಮರ್ಪಿತ ಕ್ರಮಗಳು ಬೇಕಾಗಿವೆ. ಕೇವಲ ಹೆಸರಿಗೆ ಅಧಿಕಾರ ನಿಯೋಜನೆ ಮಾಡದೇ, ನೈಜದಾಗಿ ಕೆಲಸ ಮಾಡುವ ನೌಡಲ್ ಅಧಿಕಾರಿಗಳ ನೇಮಕ ಅಗತ್ಯವಾಗಿದೆ.

ಗ್ರಾಮಸ್ಥರ ಆಕ್ರೋಶ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಸೇತುವೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಈ ಎಲ್ಲ ಸಂದರ್ಭಗಳ ನಡುವೆ ಜಿಲ್ಲಾಡಳಿತದಿಂದ ಸರಿಯಾದ ಕ್ರಮಗಳು ಕೈಗೊಳ್ಳದಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ನದಿ ತೀರದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ, ಆದರೆ ಅಧಿಕಾರಿಗಳು ಸ್ಥಳಕ್ಕೆ ಬರುವ ಬದಲು ಮನೆಯಲ್ಲೇ ಕುಳಿತಿದ್ದಾರೆ ಎಂಬ ಆರೋಪಗಳು ಉದ್ಭವವಾಗಿವೆ.

ನದಿ ದಡದ ಜನರು, ತಾವು ಎಚ್ಚರಿಕೆಯಿಂದ ಇರಬೇಕೆಂಬ ಸಂದೇಶವಿದ್ದರೂ ಸಹ, ಅಲ್ಲಿ ಬಟ್ಟೆ ಒಗೆದು, ಮೀನು ಹಿಡಿಯುವಂತಹ ಕಾರ್ಯಗಳಲ್ಲಿ ತೊಡಗಿರುವುದು ಆತಂಕ ಹೆಚ್ಚಿಸುತ್ತಿದೆ. ಇಂತಹ ಗಂಭೀರ ಪರಿಸ್ಥಿತಿಯಲ್ಲೂ ಕೂಡ, ಜಿಲ್ಲಾಡಳಿತವು ಹೆಸರಕ್ಕೆ ಮಾತ್ರ ನೌಡಲ್ ಅಧಿಕಾರಿಗಳನ್ನು ನೇಮಕ ಮಾಡಿರುವುದು, ಆದರೆ ಯಾವುದೇ ನೈಜ ತಪಾಸಣೆ ಅಥವಾ ಕ್ರಮ ಕೈಗೊಳ್ಳದಿರುವುದು ಖಂಡನಾರ್ಹ.

ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲಾಡಳಿತವು ತಕ್ಷಣ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕಾಗಿದೆ. ಇಲ್ಲವಾದರೆ, ಜನಜೀವನದ ಮೇಲೆ ಇನ್ನಷ್ಟು ಭಾರೀ ಪರಿಣಾಮ ಬೀರುವ ಸಾಧ್ಯತೆ ಇದೆ.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ