ವಿಜಯನಗರ: ವಿದ್ಯುತ್ ಬಿಲ್ ಕಟ್ಟದ ಹಂಪಿ ಕನ್ನಡ ವಿಶ್ವ‌ವಿದ್ಯಾಲಯಕ್ಕೆ ಕರೆಂಟ್ ಶಾಕ್..!

By Girish Goudar  |  First Published Feb 14, 2024, 12:00 PM IST

ಗೃಹ ಜ್ಯೋತಿ ಯೋಜನೆಯಡಿ ಮನೆ ಮನೆಗೂ ಉಚಿತ ಕರೆಂಟ್ ನೀಡುತ್ತಿದೆ ರಾಜ್ಯ ಸರ್ಕಾರ. ಆದರೆ, ಹಂಪಿ ವಿವಿಯ ವಿದ್ಯುತ್ ಬಾಕಿ ಬಿಲ್ ಪಾವತಿಗೆ ನೋಟಿಸ್ ಮೇಲೆ ನೋಟಿಸ್ ನೀಡ್ತಿದ್ರು ಸರ್ಕಾರ ಮಾತ್ರ ಗಮನ ಹರಿಸುತ್ತಿಲ್ಲ. 


ವಿಜಯನಗರ(ಫೆ.14):  ಹಂಪಿ ಕನ್ನಡ ವಿಶ್ವ‌ವಿದ್ಯಾಲಯಕ್ಕೆ ಮತ್ತೊಮ್ಮೆ ಕರೆಂಟ್ ಶಾಕ್ ತಟ್ಟಿದೆ. ಹೌದು, ಕನ್ನಡ ಸಂಶೋಧನೆಗಿರೋ ರಾಜ್ಯದ ಏಕೈಕ ವಿವಿಗೆ ಮತ್ತೆ ಕಗ್ಗತ್ತಲಿನ ಆತಂಕ ಎದುರಾಗಿದೆ. ಹಂಪಿ ಕನ್ನಡ ವಿಶ್ವ‌ವಿದ್ಯಾಲಯಕ್ಕೆ 1 ಕೋಟಿ 5 ಲಕ್ಷ 74 ಸಾವಿರ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. 

ಕೆಲವು ದಿನದ ಹಿಂದೆ ವಿವಿಗೆ ಸಪ್ಲೈ ಆಗುತ್ತಿದ್ದ ಕರೆಂಟ್ ಕಟ್ ಮಾಡಿದ್ದಾರೆ ಜೆಸ್ಕಾಂ ಅಧಿಕಾರಿಗಳು. ನುಡಿ ಹಬ್ಬದಲ್ಲಿ ಕರೆಟ್ ತೆಗೆದ್ರೇ ಮರ್ಯಾದೆ ಹೋಗ್ತದೆ ಎಂದು ಮನವಿ ಮಾಡಿದಾಗ ಜೆಸ್ಕಾಂ ಮತ್ತೆ ಅವಕಾಶ ನೀಡಿತ್ತು. ಇದೀಗ ಕರೆಂಟ್ ಕಟ್ ಮಾಡ್ತೇವೆ ಎಂದು ಮತ್ತೊಮ್ಮೆ ನೋಟಿಸ್ ಮೇಲೆ ನೊಟೀಸ್ ಜಾರಿ ಮಾಡಿದ್ದಾರೆ.  

Latest Videos

undefined

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆದ ನಟಿ ಪವಿತ್ರಾ ಲೋಕೇಶ್!

ಗೃಹ ಜ್ಯೋತಿ ಯೋಜನೆಯಡಿ ಮನೆ ಮನೆಗೂ ಉಚಿತ ಕರೆಂಟ್ ನೀಡುತ್ತಿದೆ ರಾಜ್ಯ ಸರ್ಕಾರ. ಆದರೆ, ಹಂಪಿ ವಿವಿಯ ವಿದ್ಯುತ್ ಬಾಕಿ ಬಿಲ್ ಪಾವತಿಗೆ ನೋಟಿಸ್ ಮೇಲೆ ನೋಟಿಸ್ ನೀಡ್ತಿದ್ರು ಸರ್ಕಾರ ಮಾತ್ರ ಗಮನ ಹರಿಸುತ್ತಿಲ್ಲ. 
ವಿದ್ಯುತ್ ಸಪ್ಲೈ ನಿಲ್ಲಿಸಿದ್ದರಿಂದ ಕನ್ನಡ ವಿವಿಯ ಎಲ್ಲಾ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಇತ್ತೀಚಿಗೆ ಹಂಪಿ ಕನ್ನಡ ವಿವಿಗೆ ಭೇಟಿ ಕೊಟ್ಟಿದ್ರು, ತಿಂಗಳೊಳಗೆ ಸಮಸ್ಯೆ ಕ್ಲೀಯರ್ ಮಾಡುತ್ತೇವೆ ಅಂತ ಹೇಳಿದ್ರು. ಸಚಿವ ಜಮೀರ್ ಬಂದೋಗಿ 15 ದಿನ ಕಳೆದಿಲ್ಲ ಬಾಕಿ ಬಿಲ್ ಪಾವತಿಗೆ ಜೆಸ್ಕಾಂನಿಂದ ನೋಟೀಸ್ ಜಾರಿ ಮಾಡಲಾಗಿದೆ.  

click me!