ಸಾಲವನ್ನು ವಾಪಸ್ ಕೊಡ್ತಿಲ್ಲವೆಂದು ಡೆತ್‌ನೋಟ್ ಬರೆದಿಟ್ಟು ವಿಷ ಕುಡಿದ ನಂಜುಂಡಸ್ವಾಮಿ

By Sathish Kumar KHFirst Published Feb 13, 2024, 6:19 PM IST
Highlights

ತಾನು ಕೊಟ್ಟ ಸಾಲದ ಹಣವನ್ನು ವಾಪಸ್ ಕೊಡದಿದ್ದಕ್ಕೆ ಮನನೊಂದು ಸಾಲ ಕೊಟ್ಟ ವ್ಯಕ್ತಿಯೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. 

ಬೆಂಗಳೂರು (ಫೆ.13): ನಾನು ಕೊಟ್ಟಿದ್ದ ಸಾಲವನ್ನೇ ಮರಳಿ ಕೇಳಿದರೆ ಹಣವನ್ನು ವಾಪಸ್ ಕೊಡದೇ ಸತಾಯಿಸುತ್ತಾನೆ. ಹಣ ಕೇಳಿದರೆ ಹಲ್ಲೆ ಮಾಡಲು ಬರುತ್ತಾನೆ ಎಂದು ಮನನೊಂದು ಕಾಮಾಕ್ಷಿಪಾಳ್ಯದ ಸಾಲ ಕೊಟ್ಟ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬೆಂಗಳೂರಿನಲ್ಲಿ ಬೆವರು ಸುರಿಸಿ ಕೂಡಿಟ್ಟ ಹಣವನ್ನು ಮರಳು ಮಾಡಿ ಸಾಲವಾಗಿ ಪಡೆಯುವ ಪರಿಚಯಸ್ಥರು, ಅದನ್ನು ವಾಪಸ್ ಕೊಡುವಾಗ ಮಾತ್ರ ಇನ್ನಿಲ್ಲದಂತೆ ಕಾಡಿಸುತ್ತಾರೆ. ಕಷ್ಟಪಟ್ಟು ದುಡಿದ ಹಣವನ್ನು ಸಾಲವಾಗಿ ಕೊಟ್ಟು ತಮ್ಮ ಅಗತ್ಯಕ್ಕೆ ಬೇಕಾದಾಗ ವಾಪಸ್ ಪಡೆಯಲಾಗದೇ ಹಲವರು ನೋವು ಅನುಭವಿಸಿದ್ದೂ ಇದೆ. ಆದರೆ, ಬೆಂಗಳೂರಿನಲ್ಲಿ ಕೆಲವರು ಸಾಲ ಮಾಡಿಯೇ ಶೋಕಿ ಮಾಡುವ ಖಯಾಲಿ ಉಳ್ಳವರೂ ಇದ್ದಾರೆ. ಅಂಥವರ ಹೇಳುವ ಬಣ್ಣ ಬಣ್ಣದ ಮಾತಿಗೆ ಮರುಳಾಗಿ ಹಣ ಕೊಟ್ಟರೆ, ಅದನ್ನು ದೇವರ ಹುಂಡಿಗೆ ಹಾಕಿದಂತೆಯೇ ಸರಿ..

Latest Videos

ಶಿವಮೊಗ್ಗ ಸುಂದರಿ ಸನ್ನಿಧಿಯ ರೀಲ್ಸ್ ನೋಡಿ, ಹಿಂದೆ ಬೀಳುವ ಮಲೆನಾಡು ಯುವಕರೇ ಎಚ್ಚರ!

ಮೇಲಿನ ಪ್ರಸಂಗಕ್ಕೆ ಹೊಂದಾಣಿಕೆ ಆಗುವ ರೀತಿಯಲ್ಲಿ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿಯೂ ಸಾಲ ಕೊಟ್ಟವನು ಪರದಾಡಿ, ಪ್ರಾಣವನ್ನೇ ಬಿಟ್ಟಿರುವ ಪ್ರಸಂಗ ನಡೆದಿದೆ. ಕಳೆದ ಕೆಲವು ವರ್ಷಗಳ ಹಿಂದೆ ಪರಿಚಿತವಾದ ಸ್ನೇಹಿತ ಕಷ್ಟದಲ್ಲಿದ್ದಾಗ ಸಾಲ ಕೇಳಿದ್ದಾನೆಂದು ನಂಜುಂಡಸ್ವಾಮಿ ಸಾಲವಾಗಿ ಹಣವನ್ನು ಕೊಟ್ಟಿದ್ದಾನೆ. ಆರಂಭದಲ್ಲಿ ಬಡ್ಡಿ ಕಟ್ಟಿದ ಸಾಲ ಪಡೆದ ಸ್ನೇಹಿತ ನಂತರ ಬಡ್ಡಿ, ಅಸಲು ಎರಡನ್ನೂ ಕೊಡದಂತೆ ಸುಮ್ಮನಾಗಿದ್ದಾರೆ. ಆದರೆ, ತಾನು ಕೊಟ್ಟ ಸಾಲದ ಹಣವನ್ನು ಕೊಡು ಎಂದು ಎಷ್ಟೇ ಕೇಳಿದರೂ, ಧಮ್ಕಿ ಹಾಕಿದರೂ, ಬೇಡಿಕೊಂಡರೂ ಕೊಡದ ಕಾರಣ ಸುಮ್ಮನಾಗಿದ್ದಾನೆ. 

ತುಮಕೂರು ಅತಿಥಿ ಶಿಕ್ಷಕನ ಕೊಲೆಗೆ ಸಿಕ್ತು ರೋಚಕ ತಿರುವು: ಪ್ರೀತಿಗೊಪ್ಪದ ತಂದೆ ಕೊಲೆಗೆ ಸುಪಾರಿ ಕೊಟ್ಟ ತಾಯಿ-ಮಗಳು

ನಂತರ ತನಗೆ ಹಣದ ತೀವ್ರ ಅಗತ್ಯವಿದ್ದಾಗ ಪುನಃ ಸಾಲ ಕೊಟ್ಟ ಸ್ನೇಹಿತನನ್ನೇ ನಂಬಿಕೊಂಡು ಬಂದಾಗಲೂ ಹಣವನ್ನು ವಾಪಸ್ ನೀಡಿಲ್ಲ. ಇದರಿಂದಾಗಿ ಸಾಲ ಕೊಟ್ಟ ನಂಜುಡಸ್ವಾಮಿ (40) ವಿಷ ಕುಡಿದಿದ್ದಾನೆ. ಆದರೆ, ಈತ ವಿಷ ಕುಡಿದಿದ್ದನ್ನು ಯಾರೂ ನೋಡದ ಕಾರಣ ಅಲ್ಲಿಯೇ ಒದ್ದಾಡಿ ಸಾವಪ್ಪಿದ ಘಟನೆ ಕಾಮಾಕ್ಷಿಪಾಳ್ಯ ಬಳಿಯ ಸುಂಕದಕಟ್ಟೆ ಪೈಪ್ ಲೈನ್ ಬಳಿ ನಡೆದಿದೆ. ಇನ್ನು ಸಾಲ ಪಡೆದ ವ್ಯಕ್ತಿ ನಂಜುಂಡಗೌಡನಿಗೆ ಅಲ್ಲಿಂದ ಪರಾರಿ ಆಗಿದ್ದಾನೆ. ಈ ಘಟನೆ ಕುರಿತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

click me!