Tumakur : ಮನೆ ಚಾವಣಿ ಮೇಲೆ ವಿದ್ಯುತ್‌ ಉತ್ಪಾದಿಸಿ!

By Kannadaprabha NewsFirst Published Dec 12, 2022, 5:48 AM IST
Highlights

ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯು (ಬೆಸ್ಕಾಂ) ಎರಡನೇ ಹಂತದ ಸೌರ ಗೃಹ ಯೋಜನೆಗೆ ಚಾಲನೆ ನೀಡಿದ್ದು, ‘ಚಾವಣಿ ಸೌರ ವಿದ್ಯುತ್‌’ ಘಟಕ ಸ್ಥಾಪಿಸುವ ಗ್ರಾಹಕರಿಗೆ ಶೇ.40 ರಿಂದ 60ರವರೆಗೆ ಸಹಾಯಧನ ನೀಡುವುದಾಗಿ ಘೋಷಿಸಿದೆ. ಸ್ವಂತ ಬಳಕೆ ಬಳಿಕ ಉಳಿದ ಹೆಚ್ಚುವರಿ ಸೌರ ವಿದ್ಯುತ್‌ನ್ನು ನೆಟ್‌ ಮೀಟರ್‌ ಮೂಲಕ ಬೆಸ್ಕಾಂಗೆ ಮಾರುವ ಅವಕಾಶವನ್ನೂ ಕಲ್ಪಿಸಿದೆ.

  ಬೆಂಗಳೂರು (ಡಿ.12):  ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿಯು (ಬೆಸ್ಕಾಂ) ಎರಡನೇ ಹಂತದ ಸೌರ ಗೃಹ ಯೋಜನೆಗೆ ಚಾಲನೆ ನೀಡಿದ್ದು, ‘ಚಾವಣಿ ಸೌರ ವಿದ್ಯುತ್‌’ ಘಟಕ ಸ್ಥಾಪಿಸುವ ಗ್ರಾಹಕರಿಗೆ ಶೇ.40 ರಿಂದ 60ರವರೆಗೆ ಸಹಾಯಧನ ನೀಡುವುದಾಗಿ ಘೋಷಿಸಿದೆ. ಸ್ವಂತ ಬಳಕೆ ಬಳಿಕ ಉಳಿದ ಹೆಚ್ಚುವರಿ ಸೌರ ವಿದ್ಯುತ್‌ನ್ನು ನೆಟ್‌ ಮೀಟರ್‌ ಮೂಲಕ ಬೆಸ್ಕಾಂಗೆ ಮಾರುವ ಅವಕಾಶವನ್ನೂ ಕಲ್ಪಿಸಿದೆ.

ಕೇಂದ್ರ ಸರ್ಕಾರದ ‘ಸೋಲಾರ್‌ ರೂಫ್‌ ಟಾಪ್‌ ಹಂತ-2’ ಯೋಜನೆಯಡಿ ಬೆಸ್ಕಾಂ ಸಂಸ್ಥೆಯು ಮನೆಗಳ ಮೇಲೆ ಸೌರ ವಿದ್ಯುತ್‌ ಘಟಕ ಅಳವಡಿಸಿಕೊಳ್ಳುವ ಗ್ರಾಹಕರಿಗೆ ಗರಿಷ್ಟ3 ಕಿ.ವ್ಯಾ. ಸಾಮರ್ಥ್ಯದ ಘಟಕಗಳಿಗೆ ಶೇ. 40 ಸಹಾಯಧನ, 3 ಕಿ.ವ್ಯಾ -10 ಕಿ.ವ್ಯಾ. ಸಾಮಾರ್ಥ್ಯದವರೆಗಿನ ಸೋಲಾರ್‌ ಘಟಕಗಳಿಗೆ ಶೇ. 40 ಜತೆಗೆ ಶೇ.20 ರಷ್ಟುಹೆಚ್ಚುವರಿ ಸಹಾಯಧನವನ್ನು ಕೇಂದ್ರ ಸರ್ಕಾರದಿಂದ ಕೊಡಿಸುವುದಾಗಿ ತಿಳಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ, ಗ್ರಾಹಕರು ಸೌರ ವಿದ್ಯುತ್‌ನ್ನು ಬಳಸಿ ತಮಗೆ ಅಗತ್ಯವಿಲ್ಲದ ಸೌರ ವಿದ್ಯುತ್‌ನ್ನು ನೆಟ್‌ ಮೀಟರ್‌ ಮೂಲಕ ಗ್ರಿಡ್‌ಗೆ ಮಾರಾಟ ಮಾಡಬಹುದು. ಈ ಹಣವನ್ನು ಬೆಸ್ಕಾಂ ಗ್ರಾಹಕರಿಗೆ ಪಾವತಿಸುತ್ತದೆ. ಈಗಾಗಲೇ ಘಟಕ ಅಳವಡಿಕೆಗೆ 1,500 ಅರ್ಜಿ ಸಲ್ಲಿಕೆ ಮಾಡಿದ್ದು, ಆಸಕ್ತರು ಕೂಡಲೇ ಬೆಸ್ಕಾಂ ವೆಬ್‌ಸೈಟ್‌ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ.

ಅರ್ಜಿ ಸಲ್ಲಿಕೆ ಹೇಗೆ?

ಆಸಕ್ತರು ಕೇಂದ್ರ ನವೀಕರಿಸಬಹುದಾದ ಇಂಧನ ಇಲಾಖೆಯ ವೆಬ… ಪೊರ್ಟಲ… hಠಿಠಿps://sಟ್ಝa್ಟ್ಟಟಟ್ಛಠಿಟp.ಜಟv.ಜ್ಞಿ ಮುಖಾಂತರ ಅರ್ಜಿ ಸಲ್ಲಿಸಬಹುದು. ಸಹಾಯಧನ ನೇರವಾಗಿ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತದೆ. ಇಲಾಖೆಯಲ್ಲಿ ಎಂಪ್ಯಾನಲ್‌ (ನೋಂದಾಯಿತ) ಆಗಿರುವ ಏಜೆನ್ಸಿಗಳನ್ನು ಸಂಪರ್ಕಿಸಿ ಸೋಲಾರ್‌ ಪ್ಯಾನೆಲ್‌ಗಳನ್ನು ಗ್ರಾಹಕರು ತಮ್ಮ ಮನೆಯ ಮೇಲ್ಛಾವಣಿಗಳಲ್ಲಿ ಅಳವಡಿಸಿಕೊಳ್ಳಬದು.

ಜತೆಗೆ ಬೆಸ್ಕಾಂ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಬೆಸ್ಕಾಂನಲ್ಲಿ ನೋಂದಣಿಗೊಂಡಿರುವ ಏಜೆನ್ಸಿಗಳ ಮೂಲಕ ಸೋಲಾರ್‌ ಫಲಕಗಳನ್ನು ಅಳವಡಿಸಿಕೊಳ್ಳಲು  ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಬೆಸ್ಕಾಂ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಿ ಸೋಲಾರ್‌ ಪ್ಯಾನಲ್‌ಗಳನ್ನು ನೆಟ್‌ ಮೀಟರ್‌ ಅಡಿಯಲ್ಲಿ ಅಳವಡಿಸಿಕೊಂಡರೆ, ಕೇಂದ್ರ ಸರ್ಕಾರದಿಂದ ಬರುವ ಸಹಾಯಧನವನ್ನು ಬೆಸ್ಕಾಂ ನೇರವಾಗಿ ಸೋಲಾರ್‌ ಘಟಕ ಅಳವಡಿಸಿದ ಏಜೆನ್ಸಿಗೆ ಪಾವತಿಸುತ್ತದೆ. ಉಳಿದ ಹಣ ಫಲಾನುಭವಿ ಪಾವತಿಸಬೇಕು.

click me!