ಗಂಗಾವತಿ: ಭೋಗಾಪುರೇಶ ನೂತನ ಕೆರೆಗೆ ಗವಿಶ್ರೀ, ಮಂತ್ರಾಲಯ ಶ್ರೀಗಳಿಂದ ಬಾಗಿನ ಅರ್ಪಣೆ

By Girish Goudar  |  First Published Mar 30, 2023, 12:05 PM IST

ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಚಾಲನೆ ನೀಡಲಿರುವ ಮಂತ್ರಾಲಯ ಮಠಾಧೀಶರಾದ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ


ರಾಮಮೂರ್ತಿ ನವಲಿ

ಗಂಗಾವತಿ(ಮಾ.30):  ಸಮೀಪದ ನವಲಿ ಐತಿಹಾಸಿ ಪ್ರಸಿದ್ದ ಶ್ರೀ ಭೋಗಾಪುರೇಶ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣಗೊಂಡ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಇಂದು(ಗುರುವಾರ) ಸಂಜೆ 5 ಗಂಟೆಗೆ ಜರುಗಲಿದೆ. ಮಂತ್ರಾಲಯ ಮಠಾಧೀಶರಾದ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಹಾಗೂ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಅವರು ಕೆರೆಗೆ ಬಾಗಿನ ಅರ್ಪಿಸುವ ಮೂಲಕ ಚಾಲನೆ ನೀಡಲಿದ್ದಾರೆ.

Tap to resize

Latest Videos

undefined

ಧರ್ಮಸ್ಥಳ ಗ್ರಾಮಭಿವೃದ್ದಿ ಸಂಸ್ಥೆ ಹಾಗೂ ಶ್ರೀ ಭೋಗಾಪುರೇಶ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮ ಪಂಚಾಯತಿ ಗ್ರಾಮಸ್ಥರ ನೇತೃತ್ವದಲ್ಲಿ ಕೆರೆ ಅಭಿವೃದ್ಧಿ ಪಡಿಸಲಾಗಿದ್ದು, ಈ ಕೆರೆ ಈಗ ಪುಷ್ಕರಣೆಯಾಗಿದೆ. ಸಂಜೆ 5 ಗಂಟೆಗೆ ದೇವಸ್ಥಾನದ ಕರಡೋಣೆ ರಸ್ತೆಯ ಆವರಣದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಗವಿಶ್ರೀಗಳಿಂದ ಪ್ರವಚನ ನಡೆಯಲಿದೆ. 

ಕೆ.ಆರ್‌.ಪೇಟೆಯಲ್ಲಿ ಅದ್ಧೂರಿ ಮಹಾಕುಂಭ: ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಣೆ

ಈ ಸಂದರ್ಭದಲ್ಲಿ ಗಾಯಕಿ ಡಾ.ಸಿ.ಮಹಾಲಕ್ಮೀ ಕೇಸರಹಟ್ಟಿ ಸಂಗಡಿಗರಿಂದ ದಾಸವಾಣಿ ಹಾಗೂ ವಚನ ಗಾಯನ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೆಕೇಂದು ಶ್ರೀ ಭೋಗಾಪುರೇಶ ಕೆರೆ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳು ಕೋರಿದ್ದಾರೆ.

click me!