ಕೊಪ್ಪಳ ಜಿಲ್ಲೆಯಲ್ಲಿ ಕೊರೋನಾ ರೋಗಿಗಳು ಗುಣಮುಖವಾಗುತ್ತಿರುವ ಪ್ರಮಾಣ ಹೆಚ್ಚಾಗಿದ್ದು, ಸಂತಸದ ವಿಷಯ| ಕೊರೋನಾ ರೋಗವು ಕಂಡುಬಂದರೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಸಾಮಾನ್ಯವಾಗಿ ಮರಣ ಸಂಭವಿಸುವುದೇ ಇಲ್ಲ: ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು
ಕೊಪ್ಪಳ(ಆ.27): ರೋಗಿಗಳನ್ನು ನಿರ್ಲಕ್ಷ್ಯ ವಹಿಸದೆ ಅಥವಾ ಹೆದರದೆ ರೋಗಿಗಳಿಗೆ ಆತ್ಮ ಬಲ, ಮನೋಸ್ಥೈರ್ಯ ತುಂಬುವುದು ಕುಟುಂಬ, ನೆರೆಹೊರೆ, ಸ್ನೇಹಿತರು ಹಾಗೂ ಸಮುದಾಯದ ಕರ್ತವ್ಯವಾಗಿದೆ ಎಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದ್ದಾರೆ.
ಈ ಕುರಿತು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಜಗತ್ತನ್ನೇ ಕಾಡುತ್ತಿರುವ ಕೋವಿಡ್-19 ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ತನ್ನ ಜಗತ್ತಿನ ಜನರ ದೈಹಿಕ, ಮಾನಸಿಕ ಸ್ಥಿತಿಯನ್ನು ಕುಗ್ಗಿಸಿ ಜನರ ಮರಣಕ್ಕೆ ಕಾರಣವಾಗಿದೆ. ಈ ರೋಗವು ಮಾರಣಾಂತಿಕ ರೋಗವಾದರೂ ನಮ್ಮ ವೈಯಕ್ತಿಕ ಜಾಗೃತಿಯಿಂದ ಸಂರಕ್ಷಿಸಿಕೊಳ್ಳಲು ಸಾಧ್ಯವಿದೆ. ಕಾರಣ ಯಾವುದೇ ವ್ಯಕ್ತಿ ಈ ರೋಗಕ್ಕೆ ಹೆದರದೆ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡರೆ ಈ ರೋಗದಿಂದ ನಾವು ದೂರ ಉಳಿಯುವುದರೊಂದಿಗೆ ಈ ರೋಗವನ್ನು ಮುಕ್ತವಾಗಿಸಬಹುದು. ಆದ್ದರಿಂದ ನಾವುಗಳು ಈ ರೋಗದ ಬಗ್ಗೆ ಇರುವ ಹಲವಾರು ವದಂತಿಗಳಿಗೆ ಕಿವಿಗೊಡದೆ ಅಗತ್ಯ ಸುರಕ್ಷಾ ಕ್ರಮಗಳನ್ನು ನಾವೆಲ್ಲಾ ಪಾಲಿಸಿ ರೋಗ ಹರಡದಂತೆ ತಡೆದು ರೋಗ ಮುಕ್ತ ವಾತಾವರಣ ನಿರ್ಮಿಸೋಣ ಎಂದು ಸಲಹೆ ನೀಡಿದ್ದಾರೆ.
ಚೇಂಬರ್‌ಲ್ಲೇ ಸಹೋದ್ಯೋಗಿಯೊಂದಿಗೆ ರೊಮ್ಯಾನ್ಸ್, ತಹಶೀಲ್ದಾರ್ ಕಿಸ್ಸಿಂಗ್ ವಿಡಿಯೋ ವೈರಲ್
ನಾವು ಅನುಸರಿಸಬೇಕಾದ ಕ್ರಮಗಳು
* ಕೊರೋನಾ ಕುರಿತು ಭಯ ಬೇಡ, ಜಾಗೃತಿ ಮತ್ತು ಎಚ್ಚರಿಕೆ ಇರಲಿ
* ಇದರ ಕುರಿತು ತಪ್ಪು ಕಲ್ಪನೆ, ಅಪಪ್ರಚಾರಗಳಿಂದ ದೂರವಿರಬೇಕು.
* ಸಾಮಾಜಿಕ ಸುರಕ್ಷಾ ಕ್ರಮಗಳನ್ನು ನಾವೆಲ್ಲರೂ ಕಡ್ಡಾಯವಾಗಿ ಅನುಸರಿಸಬೇಕು.
ಜಿಲ್ಲೆಯ ಪ್ರತಿ ತಾಲೂಕು ಸಮುದಾಯ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ತಪಸಣಾ ಕೇಂದ್ರಗಳಿದ್ದು ಮತ್ತು ರಾರಯಪಿಡ್ ಆಂಟಿಜನ್ ಟೆಸ್ಟಗಳನ್ನು ಮೊಬೈಲ್ ಯೂನಿಟ್‌ಗಳ ಮೂಲಕ ತಪಾಸಣೆ ಮಾಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಯಾವುದೇ ವ್ಯಕ್ತಿಗೆ ರೋಗದ ಲಕ್ಷಣ ಕಂಡುಬಂದರೆ ಅದನ್ನು ಮುಚ್ಚಿಡದೆ ಪರೀಕ್ಷೆಯನ್ನು ಮಾಡಿಸುವುದು ನಮ್ಮೆಲ್ಲರ ಪ್ರಮುಖ ಕರ್ತವ್ಯ. ಒಂದು ವೇಳೆ ಪರೀಕ್ಷೆ ಮಾಡಿಸದೇ ಹಾಗೆ ಇದ್ದರೆ ಅದು ಇತರರಿಗೆ ಹರಡಿ ಹೆಚ್ಚಿನ ರೋಗಕ್ಕೆ ಕಾರಣವಾಗುತ್ತದೆ.
ನಮ್ಮ ಜಿಲ್ಲೆಯಲ್ಲಿ ಕೊರೋನಾಕ್ಕೆ ತುತ್ತಾದ ರೋಗಿಗಳು ಗುಣಮುಖವಾಗುತ್ತಿರುವ ಪ್ರಮಾಣ ಹೆಚ್ಚಾಗಿದ್ದು, ಸಂತಸದ ವಿಷಯ. ಕೊರೋನಾ ರೋಗವು ಕಂಡುಬಂದರೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ಸಾಮಾನ್ಯವಾಗಿ ಮರಣ ಸಂಭವಿಸುವುದೇ ಇಲ್ಲ. ರೋಗಿಗಳನ್ನು ನಿರ್ಲಕ್ಷ್ಯ ವಹಿಸದೆ ಅಥವಾ ಹೆದರದೆ ರೋಗಿಗಳಿಗೆ ಆತ್ಮ ಬಲ, ಮನೋಸ್ಥೈರ್ಯ ತುಂಬುವುದು ಕುಟುಂಬ, ನೆರೆಹೊರೆ, ಸ್ನೇಹಿತರು ಹಾಗೂ ಸಮುದಾಯದ ಕರ್ತವ್ಯವಾಗಿದೆ. ಈ ಸಕಾರಾತ್ಮಕ ಪೋತ್ಸಾಹದಿಂದ ರೋಗ ಪೀಡಿತ ಯಾವುದೇ ವ್ಯಕ್ತಿ ಬೇಗನೆ ಗುಣಮುಖರಾಗಬಹುದಾಗಿದೆ.
ನಾವು ರೋಗವನ್ನು ದೂರವಿಡಬೇಕು ಹೊರತು ರೋಗಿಯನ್ನಲ್ಲ, ಪ್ರತಿಯೋರ್ವರು ಕೊರೋನಾದ ವಿರುದ್ಧ ಮುನ್ನೆಚ್ಚರಿಕೆಯಿಂದ ಹೋರಾಡೋಣ ರೋಗವನ್ನು ತಡೆಯೋಣ, ರೋಗಮುಕ್ತ ಸಮಾಜ ನಿರ್ಮಿಸೋಣ ಎಂದು ನಾಡಿನ ಜನರಲ್ಲಿ ಕೋರಿರುತ್ತಾರೆ.