* ಶಿವಮೊಗ್ಗದ ಅನುಪಿನ ಕಟ್ಟೆ ಖಾಸಗಿ ಶಾಲೆಯಲ್ಲಿ ನಡೆದ ಘಟನೆ
* ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದ ಶಾಲೆಯ ಸಿಬ್ಬಂದಿ
* ತಪ್ಪಿದ ಭಾರೀ ದುರಂತ
ಶಿವಮೊಗ್ಗ(ಮಾ.19): ವಸತಿ ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಲೀಕ್ ಆದ ಪರಿಣಾಮ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿಗಳೆಲ್ಲ ಹೊರಗೆ ಓಡಿ ಬಂದ ಘಟನೆ ಶಿವಮೊಗ್ಗದ(Shivamogga) ಅನುಪಿನ ಕಟ್ಟೆ ಖಾಸಗಿ ಶಾಲೆಯಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ. ಶಾಲೆಯ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.
ನಿನ್ನೆ ಸುಮಾರು 5 ಗಂಟೆಗೆ ಅಡುಗೆ ಮುಗಿಸಿ ಅಲ್ಲಿನ ಸಿಬ್ಬಂದಿ ಒಲೆಯ ಸ್ವಿಚ್ ಬಂದ್ ಮಾಡಿ ಹೊರಗೆ ಹೋಗಿದ್ದರು. ಆದರೆ ಸಿಲಿಂಡರ್‌ನ ರೆಗ್ಯೂಲೇಟರ್ ಬಂದ್ ಮಾಡಿರಲಿಲ್ಲ ಅಂತ ತಿಳಿದು ಬಂದಿದೆ. ಹೊರಗೆ ಹೋದ ವೇಳೆ ಒತ್ತಡಕ್ಕೋ ಅಥವಾ ಪೈಪ್ ಲಿಕೇಜ್‌ನಿಂದಾಗಿಯೋ ಗ್ಯಾಸ್ ಹೊರಗಡೆ ಬಂದಿದೆ.
ಮನೆಯಲ್ಲಿ ಗ್ಯಾಸ್ ಲೀಕ್ ಆಗುತ್ತಿದ್ದರೆ, ಕೂಡಲೇ ಹೀಗ್ ಮಾಡಿ
ಇದರ ಶಬ್ದ ಮತ್ತು ಗ್ಯಾಸ್ ವಾಸನೆಯಿಂದಾಗಿ ಶಾಲೆಯ ಸಿಬ್ಬಂದಿಗಳು ತಕ್ಷವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ. ಅಗ್ನಿಶಾಮಕ ದಳದವರು ಬಂದು ಸಿಲಿಂಡರ್‌ನ ರೆಗ್ಯೂಲೇಟರ್ ಬಂದ್ ಮಾಡಿ ಅನಾಹುತ ತಪ್ಪಿಸಿದ್ದಾರೆ. ಅಗ್ನಿಶಾಮಕದಳ ಕಾರ್ಯಾಚರಣೆ ಮೂಲಕ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ತಪ್ಪಿದ ಭಾರೀ ಅನಾಹುತವೊಂದು ತಪ್ಪಿದೆ.
ಗ್ಯಾಸ್ ಲೀಕ್ ಆಗಲು ಸಿಲಿಂಡರ್‌ನಿಂದ ಒಲೆಗೆ ಇರುವ ಪೈಪ್‌ನ ರೆಗ್ಯೂಲೇಟರ್ ಬಂದ್ ಮಾಡದೆ ಇದ್ದದ್ದೇ ಘಟನೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ದೊಡ್ಡ ಪ್ರಮಾಣದಲ್ಲಿ ಗ್ಯಾಸ್ ಲೀಕ್ ಆಗಿತ್ತು ಎಂದು ತಿಳಿದು ಬಂದಿದೆ.
ಅನಿಲ ಸೋರಿಕೆ: 13 ಮಕ್ಕಳು ಸೇರಿ 40 ಮಂದಿ ಅಸ್ವಸ್ಥ
ಮೈಸೂರು: ಕ್ಲೋರಿನ್ ಸಿಲಿಂಡರ್‌ನಲ್ಲಿದ್ದ(Chlorine Cylinder) ಅನಿಲ ಸೋರಿಕೆಯಾಗಿ 40 ಮಂದಿ ಅಸ್ವಸ್ಥರಾಗಿರುವ ಘಟನೆ ಮೈಸೂರಿನ(Mysuru) ಯಾದವಗಿರಿಯ ರೈಲ್ವೆ ಕ್ವಾಟ್ರಸ್‌ನಲ್ಲಿ ಮಾ.08 ರಂದು ನಡೆದಿತ್ತು.
ನೀರು ಶುದ್ಧೀಕರಣಕ್ಕಾಗಿ ಬಳಸುತ್ತಿದ್ದ ಕ್ಲೋರಿನ್ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ(Gas Leakage) 13 ಮಕ್ಕಳು ಸೇರಿದಂತೆ 40 ಮಂದಿ ಅಸ್ವಸ್ಥರಾಗಿದ್ದು, ಇವರನ್ನು ಕೆ.ಆರ್. ಆಸ್ಪತ್ರೆ, ಮಕ್ಕಳನ್ನು ಚೆಲುವಾಂಬ ಆಸ್ಪತ್ರೆಗೆ ದಾಖಲಿಸಿ ಆಕ್ಸಿಜನ್(Oxygen) ನೀಡಲಾಗಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದ್ದು, 24 ಗಂಟೆ ಪರಿವೀಕ್ಷಣೆಯಲ್ಲಿ ಇರಿಸಲಾಗಿತ್ತು.
ಯಾದವಗಿರಿಯಲ್ಲಿರುವ ರೈಲ್ವೆ ಕ್ವಾಟ್ರಸ್‌ನಲ್ಲಿ ಮಧ್ಯಾಹ್ನ 3ಕ್ಕೆ ನೀರು ಶುದ್ಧೀಕರಣಕ್ಕಾಗಿ ಕೊಠಡಿಯೊಂದರಲ್ಲಿ ಇರಿಸಲಾಗಿದ್ದ ಕ್ಲೋರಿನ್ ಸಿಲಿಂಡರ್ ವಾಲ್‌ವನಲ್ಲಿ ಸೋರಿಕೆ ಆಗಿದೆ. ಈ ಅನಿಲವು ವಾತಾವರಣದಲ್ಲಿ ಬೆರೆತು ಅಕ್ಕಪಕ್ಕದ ಮನೆಯಲ್ಲಿದ್ದ ಮಕ್ಕಳು(Children), ವಯಸ್ಕರು ಸೇರಿದಂತೆ 40 ಮಂದಿ ಅಸ್ವಸ್ಥರಾಗಿದ್ದು, ತಕ್ಷಣ ಅವರನ್ನು ಆಂಬ್ಯುಲೆನ್ಸ್‌ಗಳ ಮೂಲಕ ರೈಲ್ವೆ ಆಸ್ಪತ್ರೆಗಳಿಗೆ ದಾಖಲಿಸಿ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಯಿತು. ನಂತರ ಮಕ್ಕಳನ್ನು ಚೆಲುವಾಂಬ, ವಯಸ್ಕರನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅನಿಲ ಸೋರಿಕೆ ತಡೆಯಲು ಅಗ್ನಿಶಾಮಕ ದಳ(Fire Department) ಮತ್ತು ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಪ್ರಯತ್ನ ಮುಂದುವರೆಸಿದ್ದು, ಘಟನಾ ಸ್ಥಳದ ಸುತ್ತಮುತ್ತಾ 200 ಮೀಟರ್‌ವರೆಗೂ ಸೀಲ್ ಮಾಡಲಾಗಿದೆ. ಅಲ್ಲದೆ, ಮುನ್ನೆಚ್ಚರಿಕೆ ಕ್ರಮವಾಗಿ ದಾಸಪ್ಪ ವೃತ್ತದಿಂದ ಆಕಾಶವಾಣಿವರೆಗೆ ಕೆಆರ್‌ಎಸ್ ರಸ್ತೆಯನ್ನು ಬಂದ್ ಮಾಡಲಾಗಿದೆ. ರೈಲ್ವೆ ಕ್ವಾಟ್ರಸ್‌ಗೆ ತಜ್ಞರು ತಂಡವು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರೈಲ್ವೆ ಕ್ವಾಟ್ರಸ್ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅನಿಲ ಸೋರಿಕೆಯಾದ ಸ್ಥಳದ ಅಕ್ಕಪಕ್ಕದಲ್ಲಿರುವ ಕೆಲವು ಮನೆಯಲ್ಲಿದ್ದವರನ್ನು ಖಾಲಿ ಮಾಡಿಸಲಾಗಿತ್ತು.
ಕೊಪ್ಪಳ: ಅಡುಗೆ ಅನಿಲ ಸೋರಿಕೆ, ತಪ್ಪಿದ ಭಾರಿ ಅನಾಹುತ
ಏನಾಯಿತು?
ಕೆಆರ್‌ಎಸ್ ರಸ್ತೆ ಯಾದವಗಿರಿ ವಾಣಿ ವಿಲಾಸ ಕಾರ್ಯಾಗಾರ ಮುಂಭಾಗದ ರಸ್ತೆಯಲ್ಲಿರುವ ರೈಲ್ವೆ ಕ್ವಾಟ್ರಸ್‌ನ ಆವರಣದಲ್ಲಿ ಮಧ್ಯಾಹ್ನ 3ಕ್ಕೆ ಕೊಠಡಿಯೊಂದರಲ್ಲಿ ಇರಿಸಿದ್ದ ಕ್ಲೋರಿನ್ ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿದೆ. ಇದೇ ವೇಳೆಗೆ ಶಾಲೆ ಮುಗಿಸಿ ಆಟೋದಲ್ಲಿ ಮನೆಗೆ ಬಂದ ಮಕ್ಕಳಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡು ಅಸ್ವಸ್ಥರಾಗಿದ್ದರು.
ನಂತರ ಕ್ವಾಟ್ರಸ್‌ನಲ್ಲಿದ್ದ ಮಹಿಳೆಯರು(Women), ಪುರುಷರು ಸಹ ಅಸ್ವಸ್ಥರಾಗಿದ್ದಾರೆ. ಈ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಅಗ್ನಿಶಾಮಕ ವಾಹನ ಬಳಸಿ ಅನಿಲ ಸೋರಿಕೆಯಾಗುತ್ತಿದ್ದ ಸ್ಥಳಕ್ಕೆ ನೀರನ್ನು ಪ್ರೋಕ್ಷಣೆ ಮಾಡಿದರು. ಈ ವೇಳೆ ಕೆಲವು ಅಗ್ನಿಶಾಮಕ ದಳದ ಸಿಬ್ಬಂದಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು.