ಕೊಪ್ಪಳ: ಗಬ್ಬು ನಾರುತ್ತಿದೆ ತುಂಗಭದ್ರೆಯ ಒಡಲು..!

Published : Jun 15, 2022, 04:20 AM IST
ಕೊಪ್ಪಳ: ಗಬ್ಬು ನಾರುತ್ತಿದೆ ತುಂಗಭದ್ರೆಯ ಒಡಲು..!

ಸಾರಾಂಶ

*  ಗಂಗಾ ಸ್ನಾನ, ತುಂಗಾಪಾನ ಮಾತನ್ನು ಅಣಕಿಸುತ್ತಿದೆ *  ಗಂಗಾ ನದಿ ಶುದ್ಧೀಕರಣದಂತೆ ಇಲ್ಲಿಯೂ ಆಗಲಿ *  ಕಸದ ರಾಶಿಯೇ ನದಿಯುದ್ದಕ್ಕೂ ಬಿದ್ದಿದೆ  

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜೂ.15):  ಈ ನೆಲದ ಜೀವನದಿ ತುಂಗಭದ್ರಾ ಮಲೀನಗೊಂಡು ಗಬ್ಬು ನಾರುತ್ತಿದೆ. ಈ ನದಿಯನ್ನು ಈ ಭಾಗದ ಜನ ಪವಿತ್ರ ತೀರ್ಥದಂತೆ ಆರಾಧಿಸುತ್ತಾರೆ. ಆದರೆ ಇದೀಗ ಯಾವುದಕ್ಕೂ ಪ್ರಯೋಜನಕ್ಕೆ ಬರುತ್ತಿಲ್ಲ. ತುಂಗೆಯ ಒಡಲು ದುರ್ನಾತದ ಕಡಲಾಗಿದೆ!

‘ಗಂಗಾ ಸ್ನಾನ, ತುಂಗಾ ಪಾನ’ ಎನ್ನುವ ಗಾದೆ ಮಾತೊಂದು ತುಂಗಭದ್ರಾ ನದಿಯ ಪಾವಿತ್ರ್ಯತೆ ಮತ್ತು ಸ್ವಚ್ಛತೆಗೆ ಸಾಕ್ಷಿಯೆಂಬಂತೆ ಇತ್ತು. ಈ ನೀರು ಯಾವುದೇ ಶುದ್ಧೀಕರಣವಿಲ್ಲದೇ ಕುಡಿಯಬಹುದಾದಷ್ಟು ಶುದ್ಧವಾಗಿದೆ ಎಂಬರ್ಥದ ಗಾದೆ ಇದು. ಆದರೆ ಇಂದು ನೀರು ಕಂಡರೆ ಜನ ಮಾರು ದೂರ ಓಡುವಂತಾಗಿದೆ.

ಸಂಚಾರ ನಿಯಮ ಉಲ್ಲಂಘಿಸಿದರ ಮನೆ ಬಾಗಿಲಿಗೆ ಬರುತ್ತೆ ನೋಟಿಸ್‌..!

ಈಗ ಈ ನೀರು ಕುಡಿಯುವುದಕ್ಕಲ್ಲ, ಸ್ನಾನಕ್ಕೂ ಯೋಗ್ಯವಿಲ್ಲದಂತಾಗಿದೆ. ಇದರ ಸ್ವಚ್ಛತಾ ಅಭಿಯಾನ ಪ್ರಾರಂಭವಾಗಬೇಕಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಜನಿಸಿ ಹರಿಯುವ ತುಂಗಭದ್ರಾ ಕೊಪ್ಪಳ, ರಾಯಚೂರು ಜಿಲ್ಲೆ, ಮಂತ್ರಾಲಯ ಮಾರ್ಗವಾಗಿ ಕೃಷ್ಣಾ ನದಿ ಸೇರುತ್ತದೆ. ಹೀಗೆ ಸೇರುವ ನದಿ ಸಾವಿರಾರು ಗ್ರಾಮಗಳ ಜನ- ಜಾನುವಾರುಗಳ ದಾಹ ನೀಗಿಸುತ್ತದೆ. ಲಕ್ಷಾಂತರ ಎಕರೆ ಭೂಮಿ ನೀರಾವರಿಗೆ ಕಾರಣವಾಗಿದೆ.

ಇಂಥ ಮಹತ್ವದ ಮತ್ತು ಪುಣ್ಯಕ್ಷೇತ್ರದಂತಿರುವ ತುಂಗಭದ್ರಾ ನದಿ ಮಾತ್ರ ವ್ಯಾಪಕವಾಗಿ ಮಲೀನಗೊಳ್ಳುತ್ತಿದೆ. ಕೊಪ್ಪಳ ತಾಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದ ಬಳಿಯೇ ಹರಿದು ಹೋಗಿರುವ ತುಂಗಭದ್ರೆಯ ಮಡಿಲು ಕಸದ ರಾಶಿಯಿಂದ ತುಂಬಿದೆ. ಹುಲಿಗೆಮ್ಮ ದೇವಿ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರು ತುಂಗಭದ್ರಾ ನದಿಯನ್ನು ಕಸದ ಡಬ್ಬಿಯಂತೆ ಬಳಕೆ ಮಾಡುತ್ತಾರೆ. ಅಲ್ಲದೇ ಸ್ಥಳೀಯ ಗ್ರಾಮ ಪಂಚಾಯಿತಿ ಮತ್ತು ಸುತ್ತಮುತ್ತಲ ಅಂಗಡಿಯವರು ರಾಶಿ ರಾಶಿ ಕಸವನ್ನು ನದಿಗೆ ಎಸೆಯುತ್ತಾರೆ.

ದಳಪತಿಗಳಿಗೆ ಮತ್ತೊಂದು ಶಾಕ್, ಜೆಡಿಎಸ್‌ಗೆ ರಾಜೀನಾಮೆ ನೀಡಿ ಸಿದ್ದರಾಮಯ್ಯ ಮನೆಗೆ ಹೋದ ಮಾಜಿ MLC

ಹುಲಿಗೆಮ್ಮ ದೇವಿ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ಸರಿಯಾದ ವ್ಯವಸ್ಥೆ ಇಲ್ಲ. ಸ್ನಾನ ಮಾಡಿ, ತಮ್ಮ ಬಟ್ಟೆಗಳನ್ನು ನದಿಗೆ ಎಸೆಯುತ್ತಾರೆ. ಮನೆಯಲ್ಲಿ ಪೂಜೆ, ಪುನಸ್ಕಾರ, ಮದುವೆ ಬಾಸಿಂಗ್‌ವನ್ನೂ ನದಿಗೆ ಎಸೆಯುತ್ತಾರೆ. ಇದರಿಂದ ನದಿ ಮಲೀನಗೊಂಡು ಗಬ್ಬು ನಾರುತ್ತಿದೆ.

ಸ್ವಚ್ಛತಾ ಅಭಿಯಾನ ಬೇಕು:

ಗಂಗಾ ನದಿಯನ್ನು ಸ್ವಚ್ಛ ಮಾಡಿದಂತೆ ಜಿಲ್ಲೆಯಲ್ಲಿ ತುಂಗಭದ್ರೆಯಲ್ಲೂ ಸ್ವಚ್ಛತಾ ಅಭಿಯಾನ ಪ್ರಾರಂಭಿಸಬೇಕಿದೆ. ಜನರು, ಸರ್ಕಾರ ಹಾಗೂ ಸ್ಥಳೀಯ ಜಿಲ್ಲಾಡಳಿತ ಈ ದಿಸೆಯಲ್ಲಿ ಎಚ್ಚರ ವಹಿಸದಿದ್ದರೆ ಮುಂದೊಂದು ದಿನ ಇಡೀ ನದಿ ಚರಂಡಿಯಂತಾಗಲಿದೆ.

ತುಂಗಭದ್ರಾ ನದಿ ಗಬ್ಬು ನಾರುತ್ತಿದೆ. ಕಸದ ರಾಶಿಯಿಂದ ತುಂಬಿದೆ. ಸರಿಯಾಗಿ ನಿರ್ವಹಣೆ ಮಾಡದಿದ್ದರೆ ಇಡೀ ನದಿ ಮಲೀನವಾಗುವುದರಲ್ಲಿ ಅನುಮಾನ ಇಲ್ಲ ಅಂತ ಹೋರಾಟಗಾರ ಪಂಪಾಪತಿ ರಾಟಿ ತಿಳಿಸಿದ್ದಾರೆ. 

ತುಂಗಭದ್ರಾ ನದಿಗೆ ಜನರು ಹಾಕುತ್ತಿರುವ ಕಸದ ರಾಶಿಯಿಂದ ನದಿ ಮಲೀನವಾಗುತ್ತಿದ್ದು, ಇದನ್ನು ತಡೆದು ಕಸ ವಿಲೇವಾರಿ ಮಾಡುವ ಅಗತ್ಯವಿದೆ ಅಂತ ಜಿಪಂ ಮಾಜಿ ಅಧ್ಯಕ್ಷ ಟಿ. ಜನಾರ್ದನ ಹುಲಿಗಿನ ಹೇಳಿದ್ದಾರೆ. 
 

PREV
Read more Articles on
click me!

Recommended Stories

ಬೆಂಗಳೂರಿನ ಹಲವೆಡೆ ಡಿ.6, 8ಕ್ಕೆ ಪವರ್ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?
ಈಶ್ವರನ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; ಸಾಸ್ವೆಹಳ್ಳಿ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ