Gangavathi: ಮನೆಯ ಕಸ ಬೇರ್ಪಡಿಸಿ ಎಂದ ಸಿಬ್ಬಂದಿ ಮೇಲೆ ಹಲ್ಲೆ: ಆರೋಪಿಯ ಮನೆ ಮುಂದೆ ಕಸ ಸುರಿದು ಪ್ರತಿಭಟನೆ

Published : Jun 23, 2026, 06:45 PM IST
Gangavathi

ಸಾರಾಂಶ

Gangavathi ಕಿಲ್ಲಾ ಏರಿಯಾದಲ್ಲಿ ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ಹಾಕುವಂತೆ ಸೂಚಿಸಿದ ನಗರಸಭೆ ಸಿಬ್ಬಂದಿ ಅಬ್ದುಲ್ ನಬಿಸಾಬ್ ಮೇಲೆ ಹಲ್ಲೆ ನಡೆದಿದೆ. ಘಟನೆಯನ್ನು ಖಂಡಿಸಿ ನಗರಸಭೆ ಸಿಬ್ಬಂದಿಗಳು ಆರೋಪಿಯ ಮನೆ ಮುಂದೆ ಕಸ ಸುರಿದು ಪ್ರತಿಭಟನೆ ನಡೆಸಿದ್ದಾರೆ.

ಗಂಗಾವತಿ (ಜೂ.23): ಮನೆಯೊಳಗಿನ ಕಸ ಹಾಕುವ ವಿಚಾರವಾಗಿ ನಗರಸಭೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಘಟನೆ ನಗರದ ಕಿಲ್ಲಾ ಏರಿಯಾದ 6ನೇ ವಾರ್ಡಿನಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ. ನಗರಸಭೆಯ ವಾಹನದಲ್ಲಿ ಕಸ ತುಂಬಿಕೊಂಡು ಹೋಗುವ ಸಿಬ್ಬಂದಿ ಅಬ್ದುಲ್ ನಬಿಸಾಬ ಎನ್ನುವಾತನ ಮೇಲೆ ಹಲ್ಲೆ ನಡೆದಿದೆ.

ಕಿಲ್ಲಾ ಏರಿಯಾದಲ್ಲಿ ಮನೆ ಮನೆಗೆ ತೆರಳಿ ಕಸ ತುಂಬಿಕೊಂಡು ವಾಹನದಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹಸಿ ಕಸ ಮತ್ತು ಒಣ ಕಸ ಬೇರೆ ಬೇರೆ ಹಾಕಿರಿ ಎಂದು ಸಿಬ್ಬಂದಿ ಅಬ್ದುಲ್ ನಬಿ ಹೇಳಿತ್ತಿದ್ದಂತಯೇ ಕಿಲ್ಲಾ ಏರಿಯಾದ ನಿವಾಸಿ ಇಸಾಕ್ ಎನ್ನುವಾತ ವಾಗ್ವಾದ ನಡೆಸಿ ಹಲ್ಲೆ ನಡೆಸಿದ್ದಾನೆ. ಇದಕ್ಕೆ ವಿರೋಧಿಸಿದ ನಗರಸಭೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹಲ್ಲೆಗೊಳಗಾದ ಸಿಬ್ಬಂದಿಗೆ ಬೆಂಬಲಿಸಿ ಇಸಾಕ್ ಮನೆಯ ಮುಂಭಾಗದಲ್ಲಿ ಕಸ ಸುರಿದು ಪ್ರತಿಭಟನೆ ನಡೆಸಿದ್ದಾರೆ. ತೀವ್ರ ಗಾಯಗೊಂಡ ಸಿಬ್ಬಂದಿ ಅಬ್ದುಲ್ ನಬಿಸಾಬ ಅವರನ್ನು ಗಂಗಾವತಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

ಪ್ರತಿಭಟನೆ

ಸಿಬ್ಬಂದಿ ಅಬ್ದುಲ್ ನಬಿಸಾಬ ಮೇಲೆ ಹಲ್ಲೆ ಮಾಡಿದ ಇಸಾಕ್ ನಿವಾಸದ ಮುಂದೆ ಕಸ ಹಾಕಿ ಪ್ರತಿಭಟನೆ ನಡೆಸಿದ ನಗರಸಭೆ ಸಿಬ್ಬಂದಿಗಳು ಪೊಲೀಸ್ ಠಾಣೆಗೆ ಕಸದ ವಾಹನಗಳ ಮೂಲಕ ತೆರಳಿ ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆ ಮಾಡಿದ ಇಸಾಕ್ ನನ್ನು ಕೂಡಲೆ ಬಂಧಿಸಬೇಕೆಂದು ಆಗ್ರಹಿಸಿದರು. ನಗರದ ಕಸ ಮತ್ತು ನಿವಾಸಿಗಳ ಮನೆಯ ಕಸವನ್ನು ವಿಲೇವಾರಿ ಮಾಡಿ ಹೊರ ಹಾಕುವ ಕೆಲಸ ಸಿಬ್ಬಂದಿಗಳು ಮಾಡುತ್ತಿದ್ದಾರೆ. ಇಂತಹ ಸಿಬ್ಬಂದಿಗಳ ಮೇಲೆ ಪದೆ ಪದೆ ಹಲ್ಲೆ ನಡೆಯುತ್ತಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ರಾಜಿ ಸಂಧಾನಕ್ಕೆ ಯತ್ನ

ನಗರಸಭೆಯ ಸಿಬ್ಬಂದಿ ಅಬ್ದುಲ್ ನಬಿಸಾಬ ಮೇಲೆ ಹಲ್ಲೆ ನಡೆಸಿದ ಇಸಾಕ್ ಸಂಬಂದಿಗಳು ನಗರ ಪೊಲೀಸ್ ಠಾಣೆಗೆ ಆಗಮಿಸಿ ರಾಜಿ ಸಂಧಾನ ಮಾಡುವಂತೆ ಕೋರಿದ್ದಾರೆ. ಆದರೆ ಸಿಬ್ಬಂದಿಗಳು ರಾಜಿಗೆ ಒಪ್ಪದೆ ಕ್ರಮ ಕೈಗೊಳ್ಳಬೇಕು ಮತ್ತು ಬಂಧಿಸಲೇಬೇಕೆಂದು ಜಿದ್ದು ಹಿಡಿದಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದ್ದು, ತನಿಖೆ ಮುಂದುವರಿದಿದೆ.

PREV
Read more Articles on
click me!

Recommended Stories

ಕರ್ನಾಟಕದಲ್ಲಿ ಮಳೆಯಿಲ್ಲದಿದ್ರೂ ಕಾವೇರಿ ನೀರಿಗಾಗಿ ಕ್ಯಾತೆ; ಸಿಎಂ ಬದಲಾದ್ರೂ ಹಳೆ ಚಾಳಿ ಬಿಡದ ತಮಿಳುನಾಡು!
ಚಿಕ್ಕ ಹುಡುಗ ಬೇಡಿಕೊಂಡರೂ ರೂಲ್ಸ್ ನೆಪದಲ್ಲಿ ನಿರ್ಜನ ಪ್ರದೇಶದಲ್ಲಿ ಇಳಿಸಿದ ಬಸ್! ಕಂಡಕ್ಟರ್ ಅಮಾನತಿಗೆ ಶಾಸಕ ಅಶೋಕ್ ರೈ ಆದೇಶ