ಎಲ್ಲಾ ಸರ್ವ ಜನಾಂಗದವರು ದರ್ಗಾಕ್ಕೆ ಪೂಜೆ ಸಲ್ಲಿಸಿ ನಡೆದುಕೊಳ್ಳುತ್ತಿದ್ದಾರೆ. ಇಂತಹ ಪೂಜನೀಯ ಸ್ಥಳವಾಗಿರುವ ದರ್ಗಾದ ಹೊರಾಂಗಣ ಪ್ರದೇಶಕ್ಕೆ ಅವಶ್ಯವಿರುವ ಸೌಲಭ್ಯಗಳನ್ನು ಸರಕಾರದಿಂದ ಅಷ್ಟೇ ಅಲ್ಲಾ ವೈಯಕ್ತಿಕವಾಗಿ ಅನುದಾನ ನೀಡುತ್ತೇನೆ ಎಂದ ಮಾತನಾಡಿದ ಜನಾರ್ದನ ರೆಡ್ಡಿ
ಗಂಗಾವತಿ(ನ.04): ನಗರದಲ್ಲಿರುವ ಕರ್ನೂಲ್ ತಾತಾ ದರ್ಗಾದ ಅಭಿವೃದ್ದಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.
ಇಂದು(ಶನಿವಾರ) ದರ್ಗಾಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮದವರರೊಂದಿಗೆ ಮಾತನಾಡಿದ ಜನಾರ್ದನ ರೆಡ್ಡಿ ಅವರು, ಎಲ್ಲಾ ಸರ್ವ ಜನಾಂಗದವರು ದರ್ಗಾಕ್ಕೆ ಪೂಜೆ ಸಲ್ಲಿಸಿ ನಡೆದುಕೊಳ್ಳುತ್ತಿದ್ದಾರೆ. ಇಂತಹ ಪೂಜನೀಯ ಸ್ಥಳವಾಗಿರುವ ದರ್ಗಾದ ಹೊರಾಂಗಣ ಪ್ರದೇಶಕ್ಕೆ ಅವಶ್ಯವಿರುವ ಸೌಲಭ್ಯಗಳನ್ನು ಸರಕಾರದಿಂದ ಅಷ್ಟೇ ಅಲ್ಲಾ ವೈಯಕ್ತಿಕವಾಗಿ ಅನುದಾನ ನೀಡುತ್ತೇನೆ ಎಂದರು.
ಬಹಿಷ್ಕಾರದಿಂದ ಬಳಲುತ್ತಿರುವ ಕಾಡಸಿದ್ದರು: ಆಧುನಿಕತೆಯಲ್ಲಿಯೂ ಇದೆಂಥಾ ಅವ್ಯವಸ್ಥೆ!
ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಮಾತನಾಡಿ, ಕರ್ನೂಲ್ ದರ್ಗಾ ಎಂದರೆ ಸರ್ವ ಜನಾಂಗದವರ ಪುಣ್ಯ ಸ್ಥಳವಾಗಿದೆ. ಎಲ್ಲರೂ ಬಂದು ಇಲ್ಲಿ ಪೂಜೆ ಸಲ್ಲಿಸುತ್ತಿದ್ದಾರೆ. ಪ್ರತಿ ವರ್ಷ ಕವ್ವಾಲಿ, ಉರಸು ಸೇರಿದಂತೆ ವಿವಿದ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದ್ದು, ಶಾಸಕರು ಸಹಕಾರ ನೀಡ ಬೇಕೆಂದರು. ಇದೇ ಸಂದರ್ಭದಲ್ಲಿ ಸೈಯದ್ ಅಲಿ ಸೇರಿದಂತೆ ಮುಸ್ಲಿಂ ಸಮಾಜದ ಮುಖಂಡರು ಭಾಗವಹಿಸಿದ್ದರು.