
ಗಂಗಾವತಿ (ಏ.29): ನಗರದ ವಿವಿಧ ವೃತ್ತಗಳು ಮತ್ತು ರಸ್ತೆ ಪಕ್ಕದ ಚರಂಡಿಗಳ ಮೇಲೆ ನಿರ್ಮಿಸಲಾಗಿದ್ದ ಫುಟ್‌ಪಾತ್‌ಗಳಲ್ಲಿರುವ ಅಂಗಡಿಗಳನ್ನು ನಗರಸಭೆಯವರು ತೆರವು ಕಾರ್ಯಾಚರಣೆ ನಡೆಸಿದರು. ನಗರದ ಮಹಾತ್ಮಗಾಂಧಿ ವೃತ್ತ, ಮಹಾವೀರ ವೃತ್ತ, ಸಿಬಿಎಸ್ ವೃತ್ತ, ದುರಗಮ್ಮ ದೇವಸ್ಥಾನದ ರಸ್ತೆಯ ಮೇಲೆ ನಿರ್ಮಿಸಲಾಗಿದ್ದ ಫುಟ್‌ಪಾತ್‌ಗಳ ಮೇಲೆ ಅಂಗಡಿಗಳ ಮಾಲೀಕರು ಅಕ್ರಮವಾಗಿ ನಿರ್ಮಿಸಿಕೊಂಡಿದ್ದ 150ಕ್ಕು ಹೆಚ್ಚು ಅಂಗಡಿಗಳನ್ನು ಕಿತ್ತಿ ಹಾಕಿದ್ದಾರೆ.
ಮಳೆ ಬಂದರೆ ರಸ್ತೆ ಮೇಲೆ ನೀರು ಫುಟ್ ಪಾತ್‌ಗಳ ಮೇಲೆ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದರಿಂದ ಮಳೆ ಬಂದರೆ ಚರಂಡಿಗಳ ನೀರು ರಸ್ತೆ ಮೇಲೆ ನುಗ್ಗುತ್ತಿದ್ದವು, ಮಹಾವೀರ ವೃತ್ತ, ಗಣೇಶ ವೃತ್ತ, ಗಾಂಧಿ ವೃತ್ತಗಳ ಪಕ್ಕದಲ್ಲಿರುವ ಚರಂಡಿಗಳಲ್ಲಿ ನೀರು ಸರಳವಾಗಿ ಹೋಗುತ್ತಿದ್ದಿಲ್ಲ. ಅಂಗಡಿ ಮಾಲೀಕರು ಫುಟ್ ಪಾತಗಳ ಅಕ್ಕ ಪಕ್ಕದಲ್ಲಿ ಅಳವಡಿಸಲಾಗಿದ್ದ ಕಬ್ಬಿಣದ ಕಬ್ಬಿಣದ ಸಲಾಕೆಗಳನ್ನು ಅಂಗಡಿ ಮಾಲೀಕರು ಸ್ವಂತಕ್ಕೆ ಉಪಯೋಗ ಮಾಡಿಕೊಂಡಿದ್ದರು.
ಅಮೃತ ಸಿಟಿಯೋಜನೆಯಲ್ಲಿ ನಿರ್ಮಾಣ ಅಮೃತ ಸಿಟಿ ಯೋಜನೆಯಲ್ಲಿ ನಗರಸಭೆಯಿಂದ ನಗರದ ವಿವಿಧ ರಸ್ತೆಗಳಲ್ಲಿ ಸಾರ್ವಜನಿಕರು ಸುಗಮವಾಗಿ ಸಂಚರಿಸಬೇಕೆಂಬ ಕಾರಣಕ್ಕೆ ಫುಟ್ ಪಾತ್ ನಿರ್ಮಿಸಲಾಗಿತ್ತು. ಕೋಟ್ಯಾಂತರ ರುಪಾಯಿ ವೆಚ್ಚ ಮಾಡಲಾಗಿತ್ತು. ಆದರೆ ಈ ಪುಟ್ ಪಾತ್ ಗಳು ಸಾರ್ವಜನಿಕರಿಗೆ ಅನುಕೂಲವಾಗುವದಕ್ಕಿಂತ ಅಂಗಡಿ ಮಾಲೀಕರಿಗೆ ಅನುಕೂಲವಾಗಿತ್ತು. ಕೆಲ ಸ್ಥಳಗಳಲ್ಲಿ ಫುಟ್ ಪಾತ್‌ಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿದ್ದರಿಂದ ಕೆಲವರ ವಿರೋಧದಿಂದ ಕಿತ್ತಿ ಹಾಕಲಾಗಿತ್ತು.
ನಗರದ ಬಸ್ ನಿಲ್ದಾಣದ ಮುಂಭಾಗದಲ್ಲಿ ನಗರಸಭೆಯ ಮಳಿಗೆಗಳ ಮುಂಭಾಗದಲ್ಲಿ ಆಕ್ರಮವಾಗಿ ಶೆಡ್ ಹಾಕಿಕೊಂಡಿರುವದನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೆಹರು ಪಾರ್ಕ್ ಮುಂಭಾಗದಲ್ಲಿ ಕೆಲ ಅಂಗಡಿಗಳನ್ನು ನಿರ್ಮಿಸಿಕೊಂಡಿದ್ದಾರೆ. ಈ ಹಿಂದೆ ಎಚ್ಚರಿಕೆ ನೀಡಿ ನೋಟಿಸ್ ನೀಡಿದ್ದರು ಸಹ ಮತ್ತೇ ಡಬ್ಬಾ ಅಂಗಡಿ, ಬಂಡಿಗಳನ್ನು ಹಾಕಿಕೊಂಡಿದ್ದಾರೆ. ನಗರಸಭೆಯವರು ದಿಟ್ಟ ಕಾರ್ಯಚರಣೆ ನಡೆಸಿದ್ದು, ಕಾರ್ಯಾಚರಣೆ ಮುಂದುವರಿದಿದೆ.