ಗಂಗಾವತಿಯಲ್ಲಿ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದ ಆಕಳು: 5 ಗಂಟೆಗಳ ಬಳಿಕ ಆಗಿದ್ದೇನು?

Published : May 17, 2026, 11:46 PM IST
Cow Rescued

ಸಾರಾಂಶ

ಸೆಪ್ಟಿಕ್ ಟ್ಯಾಂಕ್‌ನಲ್ಲಿ ಕುಸಿದು ಬಿದ್ದು ಆಕಳು ನರಳುತ್ತಿರುವ ಘಟನೆ ನಗರದ ಕುಮಾರರಾಮ ಬಡಾವಣೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಕುಮಾರರಾಮ ಬಡಾವಣೆಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯದ..

ಗಂಗಾವತಿ (ಮೇ.17): ಸೆಪ್ಟಿಕ್ ಟ್ಯಾಂಕ್‌ನಲ್ಲಿ ಕುಸಿದು ಬಿದ್ದು ಆಕಳು ನರಳುತ್ತಿರುವ ಘಟನೆ ನಗರದ ಕುಮಾರರಾಮ ಬಡಾವಣೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ. ಕುಮಾರರಾಮ ಬಡಾವಣೆಯಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯದ ಸೆಪ್ಟಿಕ್ ಟ್ಯಾಂಕ್ ಸರಿಯಾದ ರೀತಿಯಲ್ಲಿ ಮುಚ್ಚದೆ ಇರುವದರಿಂದ ಕಲ್ಮಠಕ್ಕೆ ಸೇರಿದ್ದ ಆಕಳು ಟ್ಯಾಂಕ್ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ಕುಸಿದಿದೆ. ಪರಿಣಾಮವಾಗಿ ಆಕಳು ಸುಮಾರು ಐದು ಗಂಟೆಗಳ ಕಾಲ ಟ್ಯಾಂಕ್‌ನಲ್ಲಿ ನರಳುತ್ತಿರುವುದು ಸಾಮಾನ್ಯವಾಗಿತ್ತು.

ಕುಮಾರರಾಮ ಬಡಾವಣೆಯ ಜನರು ನಗರಸಭೆಯವರಿಗೆ ಮಾಹಿತಿ ನೀಡುತ್ತಿದ್ದಂತೆಯೇ ಸಿಬ್ಬಂದಿಗಳು ಜೆಸಿಬಿ ಯಂತ್ರದಿಂದ ಟ್ಯಾಂಕ್ ಒಡೆದು ಹಗ್ಗದಿಂದ ಆಕಳನ್ನು ಮೇಲಕ್ಕೆ ಎತ್ತುವ ಕಾರ್ಯಾಚರಣೆ ಮಾಡಿದರು. ನಗರಸಭೆಯಿಂದ ಕೈಗೊಂಡ ಬಹುತೇಕ ಸಾರ್ವಜನಿಕ ಶೌಚಾಲಯದ ಟ್ಯಾಂಕ್‌ಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚದೆ ಇರುವುದೇ ಇಂತಹ ಅವಘಡಕ್ಕೆ ಕಾರಣವಾಗಿವೆ. ನಗರದ 3ನೇ ವಾರ್ಡಿನಲ್ಲಿಯು ಸಹ ಒಳ ಚರಂಡಿ ಮಂಡಳಿಯವರು ಕೈಗೊಂಡ ಯುಜಿಡಿ ಟ್ಯಾಂಕ್‌ಗಳು ಬಹುತೇಕವಾಗಿ ತೆರೆದಿವೆ.

ರಸ್ತೆಗಳು ಸಹ ಅಧೋಗತಿಯತ್ತ

ಎಷ್ಟೋ ಜನರು ಬೈಕ್‌ಗಳಲ್ಲಿ ಚರಂಡಿಯಲ್ಲಿ ಬಿದ್ದು ಗಾಯಗೊಂಡ ಘಟನೆ ಮಾಸುವ ಮುನ್ನವೆ ಮತ್ತೇ ಕುಮಾರರಾಮ ಬಡಾವಣೆಯಲ್ಲಿಈ ಘಟನೆ ನಡೆದಿದೆ. ಒಳಚರಂಡಿಗಳು ಸರಿಯಾದ ರೀತಿಯಲ್ಲಿ ಕಾಮಗಾರಿಯಾಗದ ಕಾರಣ ರಸ್ತೆಗಳು ಸಹ ಅಧೋಗತಿಯತ್ತ ಸಾಗಿವೆ ಎಂಬ ಅರೋಪ ಕೇಳಿ ಬರುತ್ತದೆ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿದ್ದರಿಂದ ನಗರಸಭೆ ವಿರುದ್ಧ ನಾಗರಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

PREV
Read more Articles on
click me!

Recommended Stories

ಗಂಗಾವತಿ ರೆಸಾರ್ಟ್ ಈಜುಕೊಳದಲ್ಲಿ ಗಲಾಟೆ: ಮಹಿಳಾ ಪೇದೆ ಸೇರಿ 8 ಜನರಿಗೆ ಗಾಯ
ಸಾಧನಾ ಸಮಾವೇಶಕ್ಕೂ‌ ಮೊದಲು ಕಾಂಗ್ರೆಸ್ ಸರ್ಕಾರದ ಸಾಧನೆ ಸ್ಪಷ್ಟಪಡಿಸಲಿ: ಸಿ.ಟಿ.ರವಿ ಪ್ರಶ್ನೆ