ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಜನಸಾಗರ: ಟೋಕನ್ ವ್ಯವಸ್ಥೆ ವಿರುದ್ಧ ಅಸಮಾಧಾನ

Published : Jul 13, 2026, 06:34 PM IST
Gangavathi

ಸಾರಾಂಶ

Gangavathi: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವ್ಯಸ್ಥೆಯ ಆಗರವಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಒದಗಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ..

ರಾಮಮೂರ್ತಿ ನವಲಿ

ಗಂಗಾವತಿ (ಜು.13): ನಗರದ ತಹಶೀಲ್ದಾರ್ ಕಚೇರಿಯಲ್ಲಿ ಅವ್ಯವ್ಯಸ್ಥೆಯ ಆಗರವಾಗಿದ್ದು, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ಒದಗಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಆಧಾರ್ ಕಾರ್ಡುಗಳ ತಿದ್ದುಪಡಿ ಮತ್ತು ಹೊಸದಾಗಿ ಸೇರ್ಪಡೆ ಮಾಡುವ ಕಾರ್ಯ, ಈಗ ಪ್ರಾರಂಭವಾಗಿದ್ದು ಜನರು ಕಚೇರಿಯಲ್ಲಿ ನೂಕು ನುಗ್ಗಲು ನಡೆಸಿದ್ದಾರೆ.

ಸರ್ಕಾರ ಹೊಸ ಯೋಜನೆ ಅದರಲ್ಲಿ ಎಸ್‌ಐಆರ್, ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮೀ ಯೋಜನೆಯ ಪುನರ್ ಪರಿಶೀಲನೆ ಘೋಷಿಸಿದ ಹಿನ್ನಲೆಯಲ್ಲಿ ಜನರು ಮೂಲ ಪ್ರಮಾಣ ಪತ್ರಗಳಿಗಾಗಿ ತಹಶೀಲ್ದಾರ್ ಕಚೇರಿಗೆ ಅಲೆಯುತ್ತಿದ್ದಾರೆ. ನಗರದ ತಹಶೀಲ್ದಾರ್ ಕಚೇರಿಯ ಪಡಸಾಲೆಯಲ್ಲಿ ಆಧಾರ್ ಕಾರ್ಡ್ ಪಡೆಯಲು ಸೋಮವಾರ ನೂಕು ನುಗ್ಗಲು ನಡೆಸಿದರು.

40 ಟೋಕನ್ ವಿತರಣೆ

ನಗರ ಸೇರಿದಂತೆ ಗ್ರಾಮೀಣ ಪ್ರದೇಶದಿಂದ ಬರುವ ಜನರು ಬೆಳಿಗ್ಗೆಯಿಂದಲೆ ಟೋಕನ್ ಗಾಗಿ ಕಾಯುವ ಪರಿಸ್ಥಿತಿ ಒದಗಿದೆ. ಕಚೇರಿಯ ಪಡಸಾಲೆಯಲ್ಲಿ ಕೇವಲ 40 ಜನರಿಗೆ ಮಾತ್ರ ಟೋಕನ್ ನೀಡುತ್ತಿದ್ದಾರೆ. ಈ ಟೋಕನ್ ಪಡೆಯಲು ಜನರು ಹರಸಾಹಸ ಮಾಡುತ್ತಿದ್ದು, ಟೋಕನ್ ಪಡೆದ ನಂತರ ಆಧಾರ್ ಕಾರ್ಡುಗಳ ತಿದ್ದುಪಡಿಗೆ ಮತ್ತೆ ಸಾಹಸ ಮಾಡುವ ಪರಿಸ್ಥಿತಿ ಒದಗಿದೆ. ಈ ಹಿಂದೆ ಪಡಸಾಲೆಯಲ್ಲಿ ಎರಡು ಕೇಂದ್ರಗಳಿದ್ದವು. ನಂತರ ಒಂದು ಕೇಂದ್ರವನ್ನು ರದ್ದು ಪಡಿಸಿರುವದರಿಂದ ಈಗ ಕೇವಲ ಒಂದೇ ಕೇಂದ್ರದಲ್ಲಿ ಕೆಲಸ ಮಾಡುವ ಪರಿಸ್ಥಿತಿ ಕಂಪ್ಯೂಟರ್ ಆಪರೇಟರುಗಳಿಂದ ಬಂದಿದೆ.

ಇದರಿಂದ ಕೆಲಸ ಮಾಡುವದಕ್ಕೆ ಆಪರೇಟರುಗಳಿಗೆ ಆಸ್ಪದ ಇಲ್ಲದಂತಾಗಿದೆ. ಗಂಗಾವತಿ ತಾಲೂಕಿನಲ್ಲಿ ಗಂಗಾವತಿ, ವೆಂಕಟಗಿರಿ ಹೋಬಳಿಯಲ್ಲಿ ಆಧಾರ್ ಕಾರ್ಡುಗಳ ತಿದ್ದುಪಡಿ ಮಾಡುವ ಕೇಂದ್ರ ಇತ್ತು ಈಗ ಅದು ರದ್ದಾಗಿದೆ. ಮರಳಿ ಹೋಬಳಿಯಲ್ಲಿ ಮಾತ್ರ ಆಧಾರ್ ಕಾರ್ಡುಗಳ ತಿದ್ದುಪುಡಿ ಮಾಡುವ ಅವಕಾಶ ಇರುವುದರಿಂದ ಜನರು ದಿನ ನಿತ್ಯ ಅಲೆದಾಡುವ ಪರಿಸ್ಥಿತಿ ಒದಗಿದೆ.

ಗಂಗಾವತಿ ತಹಶೀಲ್ದಾರ್ ಕಚೇರಿ ಅವ್ಯವ್ಯಸ್ಥೆಯ ಆಗರವಾಗಿದೆ. ಆಧಾರ್ ಕಾರ್ಡುಗಳ ತಿದ್ದುಪಡಿ ಸೇರಿದಂತೆ ವಿವಿಧ ಪ್ರಮಾಣ ಪತ್ರಗಳು ಪಡೆಯ ಬೇಕಾದರೆ ಒಂದು ದಿನ ಕಚೇರಿಯಲ್ಲಿ ಕಳೆಯುವ ಪರಿಸ್ಥಿತಿ ಇದೆ. ಸಮಸ್ಯೆ ಹೇಳಬೇಕಾದರೆ ಹೊಸದಾಗಿ ಬಂದ ತಹಸೀಲ್ದಾರರು ಕಚೇರಿಯಲ್ಲಿ ಸಿಗುತ್ತಿಲ್ಲ. ಇದರಿಂದ ಆಧಾರ್ ಕಾರ್ಡುಗಳ ತಿದ್ದುಪಡಿಗಾಗಿ ನೂಕು ನುಗ್ಗಲು ನಡೆಯುತ್ತಿದೆ.
-ತಿಮ್ಮಪ್ಪ, ಗಂಗಾವತಿ

ಗಂಗಾವತಿ ತಹಶೀಲ್ದಾರ್ ಕಚೇರಿಯಲ್ಲಿ ಆಧಾರ್ ಕಾರ್ಡು ತಿದ್ದುಪಡಿಗಾಗಿ ನೂಕು ನುಗ್ಗಲು ನಡೆದಿದೆ ಎಂದು ಗೊತ್ತಾಗಿದೆ. ಇವತ್ತು ಪ್ರಭಾರಿ ಗ್ರೇಡ್ -2 ತಹಸೀಲ್ದಾರರಾಗಿ ಇವತ್ತು ಹಾಜರಾಗಿದ್ದೇನೆ. ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ.
-ಷಣ್ಮುಖಪ್ಪ, ಪ್ರಭಾರಿ ಗ್ರೇಡ್-2 ತಹಶೀಲ್ದಾರ್, ಗಂಗಾವತಿ

PREV
Read more Articles on
click me!

Recommended Stories

ಶಿವಮೊಗ್ಗ ಶರಾವತಿ ಹಿನ್ನೀರಿನ ಜನರು ಹಾಗೂ ಪ್ರವಾಸಿಗರಿಗೆ ಸಿಹಿ ಸುದ್ದಿ; ಇಂದಿನಿಂದ ಲಾಂಚ್ ಸೇವೆ ಪುನಾರಂಭ!
13 ವರ್ಷಗಳ ಮಮತೆಯ ನೆರಳು: ಆ ದಿನಗಳನ್ನು ನೆನೆದು ಸಿಎಂ ಡಿ.ಕೆ. ಶಿವಕುಮಾರ್​ ಭಾವುಕ ಪೋಸ್ಟ್​