ಹಲವುಉ ವರ್ಷಗಳಿಂದಲೂ ಸಚಿವ ಮಾಧುಸ್ವಾಮಿ ಬೆಂಬಲಿಗರಾಗಿದ್ದ ಮುಖಂಡರೇ ಸ್ವತಃ ಸಚಿವರ ನಡೆಗೆ ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕನಾಯಕನಹಳ್ಳಿ (ಸೆ.01): ದೊಡ್ಡವರ ಬಾಯಿಮಾತು, ಹುಚ್ಚನ ಕೈನಲ್ಲಿರುವ ಕಲ್ಲು ಯಾರಿಗೆ ಬೇಕಾದರೂ ಬೀಸಬಹುದು ಎಂಬಂತಾಗಿದೆ ಸಚಿವ ಜೆ.ಸಿ.ಮಾಧುಸ್ವಾಮಿಯವರ ಹೇಳಿಕೆ ಎಂದು ತಿಮ್ಲಾಪುರ-ಲಕ್ಷ್ಮಗೊಂಡನಹಳ್ಳಿ ಗ್ರಾಮದ ರೈತ ಗಂಗಾಧರಯ್ಯ ನುಡಿದರು.
ತಾಲೂಕಿನ ಕುಡಿಯುವ ನೀರಿನ ಹೇಮಾವತಿ ಯೋಜನೆಯ ಕಾಮಗಾರಿಗೆ ಸ್ವಾಧೀನ ಪಡಿಸಿಕೊಂಡಿರುವ ತಮ್ಮ ಜಮೀನಿನ ಪರಿಹಾರ ಕೊಡಿಸಿ ಎಂದು ಕೇಳಲು ಅವರ ಮನೆಗೆ ಹೋದಾಗ ಬಾಯಿಗೆ ಬಂದಂತೆ ಬೈದು, ಹೀನಾಯವಾಗಿ ರೈತರನ್ನು ನಿಂದಿಸಿ, ಮನೆಯಿಂದ ಹೊರಗೆ ಅಟ್ಟಿದರು ಎಂದು ಸುಮಾರು 40 ವರ್ಷಗಳಿಂದ ಜೆ.ಸಿ.ಮಾಧುಸ್ವಾಮಿಯವರ ಕಟ್ಟಾಬೆಂಬಲಿಗರಾಗಿದ್ದ ಗಂಗಾಧರಯ್ಯ ತಮ್ಮ ಆಕ್ರೋಶವನ್ನು ಹೊರಹಾಕಿದರು.
ರಾಜ್ಯಾದ್ಯಂತ ಮತ್ತೊಂದು ಚುನಾವಣೆ: ಮೀಸಲಾತಿ ಪ್ರಕಟ...
2011ರಲ್ಲಿ ಆರಂಭವಾದ ಹೇಮಾವತಿ ಕಾಮಗಾರಿಗೆ, ಮೊದಲು ಬಿಟ್ಟುಕೊಟ್ಟದ್ದೆ ನಮ್ಮ ಜಮೀನು. ಇವತ್ತಿನ ಈ ಘಟನೆಗೆ ಕಾರಣ ಕಾನೂನು ಸಚಿವ ಮಾಧುಸ್ವಾಮಿ. 6 ತಿಂಗಳ ಮುಂಚೆಯೇ ನಾನು ಅವರ ಮನೆಗೆ ಹೋಗಿ, ಇನ್ನು ಸಹ 8-10 ಜನರ ಪರಿಹಾರದ ಹಣ ಬರಬೇಕಾಗಿದೆ. ಕೊಡಿಸಿ ಕಾಮಗಾರಿಯನ್ನು ಮುಂದುವರೆಸಿ ಎಂದಿದ್ದಕ್ಕೆ, ಕಾಮಗಾರಿ ನಡೆಸಲು ಬಿಡದಿದ್ದರೆ, ಪೊಲೀಸ್ ಕರೆಸಿ ಕೆಲಸ ಮಾಡಿಸುತ್ತೇವೆ. ಬಿಡದಿದ್ದರೆ ನಿಮ್ಮನ್ನು ಒದ್ದು ಒಳಗೆ ಹಾಕಿಸುತ್ತೇವೆ ಎಂದರು.
ಹಿಂದಿನ ಶಾಸಕ ಸಿ.ಬಿ.ಸುರೇಶ್ ಬಾಬುರನ್ನು ಸಹ ಭೇಟಿ ಮಾಡಿ ವಿನಂತಿಸಿದ್ದೆವು. ಅವರು ಪರಿಹಾರ ಕೊಡಿಸುವ ಭರವಸೆ ಕೊಟ್ಟಿದ್ದರು. ನಾವು ನಮ್ಮ ಸ್ವಂತ ಪರಿಶ್ರಮದಿಂದ ಪರಿಹಾರ ಪಡೆದುಕೊಂಡಿದ್ದೇವೆ ಹೊರತು ಇದು ಮಾಧುಸ್ವಾಮಿಯವರ ಭಿಕ್ಷೆಯಲ್ಲ ಎಂದರು.
ಮತ್ತಲ್ಲಿ ಹೇಳಿದ್ದಾರಾ? ಕುಮಾರಸ್ವಾಮಿಯನ್ನ ಪರೀಕ್ಷೆಗೆ ಒಳಪಡಿಸಬೇಕೆಂದ ಸಚಿವ ಸಿ.ಟಿ.ರವಿ...
ಹಿಂದೆ ಮಾದುಸ್ವಾಮಿಯವರ ಬಗ್ಗೆ ಒಳ್ಳೆ ಅಭಿಪ್ರಾಯವಿತ್ತು. ಹಾಗಂತ ಅವರು ಅಂದಿದ್ದನ್ನೆಲ್ಲ ಅನ್ನಿಸಿಕೊಂಡು ಹೋಗುವ ಇಚ್ಛೆ ನಮಗಿಲ್ಲ. ನಮ್ಮ ಜೀವನ ನಡೆಯಲು ಅವರೇನು ಅನ್ನ ಬಟ್ಟೆಯನ್ನು ಕೊಡುವುದಿಲ್ಲ. ನಮ್ಮ ಬದುಕನ್ನು ನಮಗಾಗಿ ನಾವು ಕಟ್ಟಿಕೊಂಡಿರುವುದು. ಅವರಿಗಾಗಿ ಅಲ್ಲ. ನಮ್ಮ ನಾಯಕರು ಎಂದು ಗೌರವ ಇತ್ತು. ಅದರಿಂದಲೆ ಅವರ ಮನೆಯ ಹತ್ತಿರ ಹೋಗಿ ಗೌರವಯುತವಾಗಿ ಕೇಳಿದರೆ, ಎದ್ದು ಹೋಗಬಹುದು ಮನೆಯಿಂದ ಆಚೆ ಎಂದರೆ, ನಾವು ಇನ್ನು ಯಾಕೆ ಗೌರವ ಕೊಡಬೇಕು ಮತ್ತು ಇನ್ನು ಯಾಕೆ ಅವರನ್ನು ನಮ್ಮ ನಾಯಕರೆನ್ನಬೇಕು.