ಕೋಲಾರ: ಕಾರಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 2.94 ಕೋಟಿ ವಶ

Kannadaprabha News   | Asianet News
Published : Sep 02, 2020, 10:46 AM IST
ಕೋಲಾರ: ಕಾರಲ್ಲಿ ಸಾಗಿಸುತ್ತಿದ್ದ ದಾಖಲೆ ರಹಿತ 2.94 ಕೋಟಿ ವಶ

ಸಾರಾಂಶ

ದಾಖಲೆ ರಹಿತವಾಗಿ ಆಂಧ್ರಪ್ರದೇಶಕ್ಕೆ ಸಾಗಿಸುತ್ತಿದ್ದ .2.94 ಕೋಟಿ ವಶ| ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ಕಾರು ಚೇಸ್‌ ಮಾಡಿ ಆರೋಪಿಗಳ ಬಂಧನ| 2 ಸಾವಿರ ನೋಟ್‌ಗಳನ್ನು 500 ರೂಪಾಯಿಗೆ ಬದಲಾವಣೆ ಮಾಡಲು ಸಾಗಿಸುತ್ತಿದ್ದ ಬಗ್ಗೆ ಶಂಕೆ|   

ಕೋಲಾರ(ಸೆ.02): ಆಂಧ್ರಪ್ರದೇಶಕ್ಕೆ ದಾಖಲೆ ರಹಿತವಾಗಿ 2.94 ಕೋಟಿ ಸಾಗಿಸುತ್ತಿದ್ದ ಇಬ್ಬರನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಿ ಹಣ ಜಪ್ತಿ ಮಾಡಿರುವ ಘಟನೆ ಶ್ರೀನಿವಾಸಪುರ ತಾಲೂಕಿನಿಂದ ಮಂಗಳವಾರ ವರದಿಯಾಗಿದೆ. ಕೋಲಾರದ ಚಂದ್ರಶೇಖರ್‌ ಮತ್ತು ಅಮರನಾಥ್‌ ಬಂಧಿತ ಆರೋಪಿಗಳಾಗಿದ್ದು ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಆರೋಪಿಗಳು ಶ್ರೀನಿವಾಸಪುರ ಮಾರ್ಗವಾಗಿ ಆಂಧ್ರಪ್ರದೇಶಕ್ಕೆ ಮಾರುತಿ ಸ್ವಿಫ್ಟ್‌ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ಹೋಗುತ್ತಿದ್ದರು. ಖಚಿತ ಮಾಹಿತಿಯನ್ನು ಆಧರಿಸಿ ಕಾರನ್ನು ಚೇಸ್‌ ಮಾಡಿದ ಪೊಲೀಸರು ಶ್ರೀನಿವಾಸಪುರ ತಾಲೂಕು ರೋಜರನ ಹಳ್ಳಿ ಗ್ರಾಮದ ಗೇಟ್‌ ಬಳಿ ಅಡ್ಡಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. 

ಕೊಲೆಗಾರರ ಬೆನ್ನಟ್ಟಿ ಹಿಡಿದು ಆಟೋ ಚಾಲಕನ ಪ್ರಾಣ ಉಳಿಸಿದ ಎಸ್‌ಐ

ಈ ವೇಳೆ ಒಬ್ಬ ಆರೋಪಿ ಪರಾರಿಯಾಗಿದ್ದು ಉಳಿದಿಬ್ಬರನ್ನು ಬಂಧಿಸಿದ್ದಾರೆ. ಶ್ರೀನಿವಾಸಪುರ ಸಬ್‌ ಇನ್ಸ್‌ಪೆಕ್ಟರ್‌ ನಾರಾಯಣಪ್ಪ ನೇತೃತ್ವದಲ್ಲಿ ಹಣ ಜಪ್ತಿ ಮಾಡಲಾಗಿದ್ದು ಶ್ರೀನಿವಾಸಪುರ ಡಿವೈಎಸ್ಪಿ ನಾರಾಯಣಸ್ವಾಮಿ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. 2 ಸಾವಿರ ನೋಟ್‌ಗಳನ್ನು 500 ರೂಪಾಯಿಗೆ ಬದಲಾವಣೆ ಮಾಡಲು ಸಾಗಿಸುತ್ತಿದ್ದ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
 

PREV
click me!

Recommended Stories

ಬೆಂಗಳೂರು : ಹೊಸ ವರ್ಷಾಚರಣೆಗೆ ಹೊಸ ಮಾರ್ಗಸೂಚಿಗೆ ಸಿದ್ಧತೆ
ನಗರ ವಿವಿ ಎಡವಟ್ಟು: 400 ಎಂಕಾಂ ಸ್ಟೂಡೆಂಟ್ಸ್ ಫೇಲ್‌!