ಭೀಮಾ ತೀರದಲ್ಲಿ ಗುಂಡಿನ ದಾಳಿಗೆ ಯುವಕ ಬಲಿ, ಭದ್ರಾವತಿಯಲ್ಲಿ ಝಳಪಿಸಿದ ಮಚ್ಚು

By Web DeskFirst Published Sep 9, 2019, 10:58 PM IST
Highlights

ರಾಜ್ಯದ ಎರಡು ಭಾಗದಲ್ಲಿ ಅಪರಾಧ ಕೃತ್ಯಗಳು ವಿಜ್ರಂಭಿಸಿವೆ. ಕಲಬುರಗಿಯಲ್ಲಿ ಗುಂಡಿನ ದಾಳಿ ನಡೆದಿದ್ದರೆ ಶಿವಮೊಗ್ಗದ ಭದ್ರಾವತಿಯಲ್ಲಿ ಮಚ್ಚುಗಳು ಝಳಪಿಸಿವೆ.
 

ಕಲಬುರಗಿ, ಶಿವಮೊಗ್ಗ[ಸೆ. 09]  ಕಲಬುರಗಿಯ ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿದೆ. ಕಲಬುರಗಿ ಜಿಲ್ಲೆ ಅಫಜಲಪುರದ ಕರಜಗಿ ಗ್ರಾಮದಲ್ಲಿ ಫೈರಿಂಗ್ ಆಗಿದೆ. ಕ್ಷುಲಕ ಕಾರಣಕ್ಕೆ ಯುವಕನ ಮೇಲೆ ಗುಂಡಿನ ದಾಳಿ ಮಾಡಲಾಗಿದ್ದು ಸಾಯಬಣ್ಣ ತಳವಾರ(28) ಗುಂಡಿನ ದಾಳಿಗೆ ಒಳಗಾಗಿದ್ದು ಆಸ್ಪತ್ರೆಗೆ ಸೇರಿಸುವಾಗ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾನೆ.

ಘಟನೆಯ ನಂತರ ಆರೋಪಿ ಅಭಿಶೇಕ್ ತಳವಾರ ಪರಾರಿಯಾಗಿದ್ದು  ಆರೋಪಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಈ ಕುರಿತು ಅಫಜಲಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭದ್ರಾವತಿಯಲ್ಲಿ ಮಾರಣಾಂತಿಕ ಹಲ್ಲೆ: ಯುವತಿಯೊಬ್ಬಳ ಜೊತೆಗೆ ಸಲುಗೆಯಿಂದ ವರ್ತಿಸುತ್ತಿದ್ದರೆಂದು ಕ್ರೋಧಗೊಂಡ ಗುಂಪೊಂದು ಇಬ್ಬರು ಯುವಕರ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಘಟನೆ ಭದ್ರಾವತಿ ತಾಲ್ಲೂಕಿನ ಭದ್ರಾ ಕಾಲೋನಿಯಲ್ಲಿ ನಡೆದಿದೆ. ಭದ್ರಾ ಕಾಲೋನಿಯ ಗಾರೆ ಕೆಲಸದ ಮಣಿ ಮತ್ತು ಪೇಂಟರ್ ಕೆಲಸ ಮಾಡುವ ವಿದ್ಯಾರಾಜ್ ಎಂಬಿಬ್ಬರ ಮೇಲೆ ಮಚ್ಚಿನಿಂದ ತೀವ್ರ ಹಲ್ಲೆ ಮಾಡಲಾಗಿದ್ದು ಸಾವು - ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.

ಭದ್ರಾ ಕಾಲೋನಿಯ ಚಂದ್ರು ಎಂಬುವವರ ಅಕ್ಕನ ಮಗಳೊಂದಿಗೆ ವಿದ್ಯಾರಾಜ್ ಸಲುಗೆಯಿಂದ ವರ್ತಿಸುತ್ತಿದ್ದನ್ನು ಕಂಡು ನಿನ್ನೆ ಅತನಿಗೆ ಬೈಯ್ದು ಕಳುಹಿಸಲಾಗಿದೆ. ಇಂದು ಕೂಡ ಮತ್ತೆ ಇದೇ ಪುನರಾವರ್ತನೆ ಆಗಿದ್ದನ್ನು ಕಂಡು ಚಂದ್ರು , ರೊಡ್ಡ ಉಮೇಶ್ , ಹರೀಶ್ , ಸುದೀಪ್ ಎಂಬುವವರ ಗುಂಪು ವಿದ್ಯಾರಾಜ್ ಮೇಲೆ ಮಾರಾಂತಿ ಹಲ್ಲೆ ನಡೆಸಿದೆ. ಇದನ್ನು ತಡೆಯಲು ಹೋದ ಮಣಿ ಕೂಡ ತೀವ್ರವಾಗಿ ಗಾಯಗೊಂಡಿದ್ದಾನೆ. ತಕ್ಷಣವೇ ಶಿವಮೊಗ್ಗದ ಸರ್ಕಾರಿ ಮೆಗ್ಗಾನ್ ಅಸ್ಪತ್ರೆಗೆ ಕರೆ ತಂದರೂ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಜಿಲ್ಲೆಯ ಮಣಿಪಾಲ್ ಅಸ್ಪತ್ರೆಗೆ ರವಾನೆ ಮಾಡಲಾಗಿದೆ.ಭದ್ರಾವತಿಯ ಹೊಸಮನೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹಲ್ಲೆಗೈದ ಚಂದ್ರು ತಾನೊಬ್ಬವನೇ ಕೃತ್ಯ ಎಸಗಿದ್ದಾಗಿ ಶರಣಾಗಿದ್ದಾನೆ ಎನ್ನಲಾಗಿದೆ. 

click me!