ಯಾರೆಲ್ಲ ಸಮಸ್ಯೆ ಕೊಟ್ಟರು, ಬೆನ್ನಿಗೆ ಚೂರಿ ಹಾಕಿದ್ರು... ಎಳೆ ಎಳೆಯಾಗಿ ಬಿಚ್ಚಿಟ್ಟ ಕುಮಾರ

By Web DeskFirst Published Sep 9, 2019, 6:19 PM IST
Highlights

ಬಿಜೆಪಿ ಮತ್ತು ಬಿಎಸ್ ವೈ ವಿರುದ್ಧ ಮಾಜಿ ಸಿಎಂ ಎಚ್ ಡಿಕೆ ವಾಗ್ದಾಳಿ/ ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೂ ಕುಟುಕಿದ ಮಾಜಿಮ ಸಿಎಂ/ ನಾನು ದೇವೇಗೌಡ ಮಗ, ಸುಮ್ಮನೆ ಕೂರಲ್ಲ

ತುಮಕೂರು[ಸೆ. 09]  ದೇವೇಗೌಡರು ಅಧಿಕಾರದಲ್ಲಿ ಇರಲಿ‌ ಬಿಡಲಿ ಅವರ ಮೇಲೆ ನಿಮಗೆ ಪ್ರೀತಿ ಇದ್ದೆ ಇದೆ. ಇದಕ್ಕೆ ಮೊದಲು ಅಭಿನಂದನೆ. ಅವರ ಜೊತೆ ಕೆಲವರು ಬೆನ್ನಿಗೆ ಚೂರಿ ಹಾಕಿದ್ರು,ಆದ್ರೂ ಸಮಾಜದ ಪ್ರೀತಿ ಕಡಿಮೆಯಾಗಲಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಒಂದು ಕಾಲದಲ್ಲಿ ನಾವು ಡಿಕೆ ಶಿವಕುಮಾರ್ ಹೋರಾಟ ಮಾಡಿದ್ದೇವು. ಇವತ್ತು ಜೊತೆಯಲ್ಲಿ ಇದ್ದೇವೆ ಎನ್ನುತ್ತ ಡಿಕೆಶಿ ಪರವಾಗಿ ಇರುವ ತಮ್ಮ ನಿಲುವನ್ನು ಮತ್ತೊಮ್ಮೆ ಸ್ಪಷ್ಟಮಾಡಿದರು.

ಇನ್ನೂ ನಾಲ್ಕು ತಿಂಗಳು ಅಷ್ಟೇ ಈ ಸರ್ಕಾರ. ನಾವು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬರುವಾಗ ತುಂಬಾ ಖುಷಿಯಿಂದ ಹೊರಬಂದೆ. ನಾನಗೆ ಅಧಿಕಾರ ಉಳಿಸಬೇಕೆಂದಿದ್ದರೆ ಅದ್ಯಾವು ಲೆಕ್ಕವಿರಲಿಲ್ಲ. ನಾನು ಪಾಪದ ಹಣ ಸಂಗ್ರಹ ಮಾಡಿ  20-30 ಕೋಟಿ ನೀಡಿ ಸರ್ಕಾರ ಉಳಿಸಬಹುದಿತ್ತು. ಅದರ ಅವಶ್ಯಕತೆ ಇಲ್ಲ. ನನಗೆ ದೇವರು ಹಾಗೂ ನೀವು. ನೀವು ಕೊಟ್ಟ ಅಧಿಕಾರ ಎನ್ನುತ್ತಲೇ ಡಿಸಿಎಂ  ಅಶ್ವಥ್ ನಾರಾಯಣಗೆ ಟಾಂಗ್ ಕೊಟ್ಟರು.

ಸಿಎಂ ಸ್ಥಾನದಿಂದ ಇಳಿದು ಬರುವಾಗ ಆರೂವರೆ ಸಾವಿರ ಕೋಟಿ ರೂ. ಖಜಾನೆಯಲ್ಲಿಟ್ಟಿದೆ‌. ನಾನು ಮನೆಯಲ್ಲಿ ಕೂರಲ್ಲ. ಹೆದರಿಕೊಂಡು ಕೂರಲ್ಲ. ನಿಮಗಾಗಿ ಹೋರಾಟ ಮಾಡ್ತಿನಿ. ಸಾಲಮನ್ನಾ ಬಗ್ಗೆ ಬುಕ್ ಪ್ರೀಂಟ್ ಮಾಡಲಾಗುತ್ತಿದೆ‌. ರೈತರ ಹಣ ದೋಖಾ ಮಾಡಲಿಲ್ಲ. ಜನರು ಪ್ರವಾಹದಿಂದ ಬೀದಿಯಲ್ಲಿ ಮಲಗಿದ್ದಾರೆ. ನಾನು ಸಿಎಂ ಆಗಿದ್ದಾಗ ಪ್ರವಾಹ ಆಗಿದ್ದರೇ ಎಲ್ಲಿದಿಯಪ್ಪಾ ಕುಮಾರ ಅನ್ನೋರು. ಆದ್ರೆ ಇವತ್ತೆ ಮಾತೇ ಇಲ್ಲ ಎಂದು ಟ್ರೋಲ್ ಮಾಡುವವರ ಕಾಲು ಎಳೆದರು.

ಡಿಕೆಶಿ ಬಿಡಬೇಡಿ ಎಂದು ಇಡಿಗೆ ಫೋನ್ ಮಾಡಿದ್ದು ಯಾರೆಂದು ನನಗೆ ಗೊತ್ತು!

ನನಗೆ ಹಲವಾರು ಸಮಸ್ಯೆ ಗಳಿದ್ದವು. ಕೆಟ್ಟ ಪರಿಸ್ಥಿತಿ ಇತ್ತು. ಸರ್ಕಾರ ಈಗ ಹೋಗುತ್ತೆ, ಆಗ ಹೋಗುತ್ತೆ ಅಂತಾ ಚಿಂತೆ ಒಂದು ಕಡೆಯಾದರೆ ಮತ್ತೊಂದು ಕಡೆ ಕಾಂಗ್ರೆಸ್ ನವರು ಹಿಂದಿನ ಯೋಜನೆ ಮುಂದುವರಿಯಬೇಕು ಅಂದರು. ಮತ್ತೆ ಸಾಲಮನ್ನಾ ಯಾವಾಗ ಮಾಡ್ತಿಯಾ ಅಂತಾ ನನ್ನ ಮೇಲೆ ಪ್ರಹಾರ ಮಾಡಿದ್ರು ಎನ್ನುತ್ತ ಕಾಂಗ್ರೆಸ್ ವಿರುದ್ಧವೂ ಪರೋಕ್ಷ ವಾಗ್ದಾಳಿ ಮಾಡಿದರು.

ಸಹಕಾರಿ ಬ್ಯಾಂಕ್ ಹಣ ಇನ್ನೂ ರಿಲಿಸ್ ಆಗಿಲ್ಲ. ಹಣ ಕೊಟ್ಟಾಗಿದೆ ನೀವು ಪ್ರಿಂಟ್ ಮಾಡೋ ಅಗತ್ಯವಿಲ್ಲ. ಈ ಬಗ್ಗೆ ಸಿಎಂ ಗೆ ಹೇಳಿ ಅಶ್ವಥ ನಾರಾಯಣ ಅವರೇ ಎಂದು ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಕಾಲದಲ್ಲಿ 53 ಕೋಟಿ ನೇಕಾರರ ಸಾಲ ಮನ್ನಾಕ್ಕೆ ಬಿಡುಗಡೆ ಆಗಿತ್ತು. ಆದ್ರೆ ಇವರು 47 ಕೋಟಿ ಮಾಡಿದ್ದಾರೆ ಇನ್ನೂ ಆಗಿಲ್ಲ ಎಂದು ಆರೋಪಿಸಿದರು.

ಸಿಎಂ ಬಳಿ ಹೋಗಿ ಅಂದ್ರೆ ಪೊಲೀಸರು ಓಡಿಸ್ತಾರೆ. ಬಡವರಿಗೆ 100 ಕೋಟಿ ಕೊಟ್ಟ ಸಿಎಂ ಇದ್ದರೇ ಕುಮಾರಸ್ವಾಮಿ ಮಾತ್ರ. ಅಧಿಕಾರ ಇರಲಿ ಬಿಡಲಿ ನಿಮ್ಮ ಜೊತೆ ಇರ್ತಿನಿ. ನನ್ನ ವಿರುದ್ಧ ಟೆಲಿಫೋನ್ ಕದ್ದಾಲಿಕೆ ಐಎಂಎ ಹಗರಣದಲ್ಲಿ ಸಿಬಿಐಗೆ ತನಿಖೆ ನಡೆಸುವ ಬಗ್ಗೆ ಯಾರು ಹೆದರಬೇಡಿ. ದೇವೇಗೌಡರ ಮಗ ನಾನು. ನನ್ನ ನೀವು ಬೆಳಸಿರೋದು. ಅಧಿಕಾರ ಇರಲಿ ಬಿಡಲಿ ನಿಮ್ಮ ಜೊತೆ ನಾನು ಇರ್ತಿನಿ ಎಂದು ಎಚ್ ಡಿಕೆ ಹೇಳಿದರು.

ಮಾಧ್ಯಮಗಳಿಂದ ನಾನು ಬದುಕಿಲ್ಲ. ಜನರಿಂದ ಬದುಕಿರೋದು ನಾನು ಎಂದು ಮತ್ತೊಮ್ಮೆ ಮಾಧ್ಯಮಗಳನ್ನು ಮಾಜಿ ಸಿಎಂ ಟೀಕಿಸಿದರು.


 

click me!