ಬೆಂಗಳೂರಿನಲ್ಲಿ ಬಾರ್​, ಪಬ್ ಬಂದ್ : 1 ದಿನ ಎಣ್ಣೆ ಸಿಗಲ್ಲ..!

Published : Sep 03, 2019, 06:14 PM ISTUpdated : Sep 03, 2019, 07:14 PM IST
ಬೆಂಗಳೂರಿನಲ್ಲಿ ಬಾರ್​, ಪಬ್ ಬಂದ್ : 1 ದಿನ ಎಣ್ಣೆ ಸಿಗಲ್ಲ..!

ಸಾರಾಂಶ

ಬೆಂಗಳೂರಿನ ಉತ್ತರ ಬಾಗದಲ್ಲಿರುವ  ಬಾರ್​, ವೈನ್​ ಶಾಪ್​ ಬಂದ್​ ಮಾಡುವಂತೆ ನಗರ ಪೊಲೀಸ್​ ಕಮಿಷನರ್​  ಆದೇಶಿಸಿದ್ದಾರೆ. ಎಷ್ಟು ದಿನ ಬಾರ್ ಬಂದ್? ಕಾರಣವೇನು? ಈ ಕೆಳಗಿನಂತಿದೆ ಮಾಹಿತಿ.

ಬೆಂಗಳೂರು (ಸೆ.03): ಗಣೇಶ ಮೂರ್ತಿಗಳ ವಿಸರ್ಜನೆ ಹಿನ್ನೆಲೆಯಲ್ಲಿ ಸೆ. 7ರಂದು ಬೆಂಗಳೂರಿನ ಉತ್ತರ ಭಾಗದ ಏರಿಯಾಗಳಲ್ಲಿ ಬಾರ್ ಬಂದ್ ಮಾಡುವಂತೆ  ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ. 

 ಗಣೇಶ ಮೂರ್ತಿಗಳ ಮೆರವಣಿಗೆ ಹಾಗೂ ವಿಸರ್ಜನೆ ಇರುವ ಹಿನ್ನೆಲೆ ಈ ಆದೇಶವನ್ನು ಹೊರಡಿಸಲಾಗಿದೆ.   ಸೆ.7ರಂದು 57 ಗಣೇಶ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ. ಈ ವೇಳೆ ಐದು ಸಾವಿರ ಜನ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಮದ್ಯ ಖರೀದಿಗೆ ಕರ್ನಾಟಕದಲ್ಲಿ ಆಧಾರ್ ಕಡ್ಡಾಯ? ಕುಡುಕರ ರಕ್ಷಣೆಗೆ 6 ಸಲಹೆ

ಅಷ್ಟೇ ಅಲ್ಲದೇ ಅಹಿತಕರ ಘಟನೆ ಸಾಧ್ಯತೆ ಎಂದು ಗುಪ್ತಚರ ಮೂಲಗಳ ಮಾಹಿತಿ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತವಾಗಿ ನಗರ ಪೊಲೀಸ್ ಈ ಕ್ರಮಕೈಗೊಂಡಿದೆ.

ಬೆಂಗಳೂರಿನ ಪ್ರಮುಖ ಏರಿಯಾಗಳಾದ ಆರ್ ಟಿ ನಗರ , ಸಂಜಯ್  ನಗರ , ಜೆ ಸಿ ನಗರ , ಹೆಬ್ಬಾಳ , ಡಿಜೆ ಹಳ್ಳಿ ,ಪುಲಿಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಾರ್, ವೈನ್ ಶಾಪ್ ಹಾಗು ಪಂಬ್ ಬಂದ್ ಮಾಡುವಂತೆ  ಭಾಸ್ಕರ್ ರಾವ್ ಅವರು ಇಂದು [ಮಂಗಳವಾರ] ಆದೇಶ ಹೊರಡಿಸಿದ್ದಾರೆ.

ಮೇಲೆ ಹೇಳಲಾಗಿರುವ ಏರಿಯಾಗಳಲ್ಲಿ ಸೆ.7 ಬೆಳಗ್ಗೆ 6ರಿಂದ ಸೆ.8  ಬೆಳಗ್ಗೆ 9ರ ವರೆಗೆ ಮದ್ಯ ಮರಾಟವನ್ನು ನಿಷೇಧಿಸಲಾಗಿದೆ.

PREV
click me!

Recommended Stories

ಹೊಸ ರೈಲ್ವೆ ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ಆರಂಭ, ದೆಹಲಿಗೆ ಬನ್ನಿ ಎಂದ ಹೆಚ್‌ಡಿಕೆ, ರೈತರಿಗೆ ಸಿಗುವುದೇ ನ್ಯಾಯ?
ಚಿಕ್ಕಬಳ್ಳಾಪುರ ಅಲೀಪುರದಲ್ಲಿ ಖಮೇನಿ ಹತ್ಯೆಗೆ ಬಂದ್, ಕಣ್ಣೀರಿಟ್ಟ ಜನರಿಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನೆ