ಬೈಕ್‌ಗೆ ಡಿಕ್ಕಿ ಹೊಡೆವುದನ್ನು ತಪ್ಪಿಸಲು ಹೋಗಿ ಕಂದಕಕ್ಕೆ ಉರುಳಿ ಬಿದ್ದ ಟಾಟಾ ಏಸ್ ವಾಹನ| ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ರೋಡಲಬಂಡಾ ಕ್ರಾಸ್ ಬಳಿ ನಡೆದ ಘಟನೆ| ಗಾಯಾಳುಗಳು ಲಿಂಗಸೂಗೂರು ತಾಲೂಕಾ ಆಸ್ಪತ್ರೆಗೆ ದಾಖಲು|
ರಾಯಚೂರು(ಜ.31): ಕೂಲಿ ಕೆಲಸಕ್ಕೆ ಹೋಗುತ್ತಿದ್ದ ವಾಹನವೊಂದು ಪಲ್ಟಿಯಾದ ಪರಿಣಾಮ 15ಕ್ಕೂ ಅಧಿಕ ಕೂಲಿ ಕಾರ್ಮಿಕರಿಗೆ ಗಾಯವಾದ ಘಟನೆ ಜಿಲ್ಲೆಯ ಲಿಂಗಸಗೂರು ತಾಲೂಕಿನ ರೋಡಲಬಂಡಾ ಕ್ರಾಸ್ ಬಳಿ ಇಂದು(ಭಾನುವಾರ) ನಡೆದಿದೆ.
ಬೈಕ್‌ಗೆ ಡಿಕ್ಕಿ ಹೊಡೆವುದನ್ನು ತಪ್ಪಿಸಲು ಹೋಗಿ ಟಾಟಾ ಏಸ್ ವಾಹನ ರಸ್ತೆಯ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ. ಟಾಟಾ ಏಸ್ ವಾಹನದಲ್ಲಿ ಕೂಲಿ ಕಾರ್ಮಿಕರಿದ್ದರು.
ಹೊಸಪೇಟೆ: ಬೈಕ್‌ನಿಂದ ಬಿದ್ದು ಕೊಪ್ಪಳದ ಯುವಕರಿಬ್ಬರ ದುರ್ಮರಣ
ಟಾಟಾ ಏಸ್ ವಾಹನ ರಸ್ತೆಯ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಸೇರಿದಂತೆ 15ಕ್ಕೂ ಅಧಿಕ ಕೂಲಿ ಕಾರ್ಮಿಕರಿಗೆ ಗಾಯಗಳಾಗಿವೆ. ಗಾಯಾಳುಗಳು ಲಿಂಗಸೂಗೂರು ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.