ಸರ್ಕಾರದ ವಿರುದ್ಧ ಫುಲ್ ಗರಂ ಆದ ಸಿದ್ದರಾಮಯ್ಯ : ಸರ್ಕಾರದಲ್ಲಿ ಸಿಎಂ ಸಚಿವ್ರು ಯಾಕಿದ್ದಾರೆ..?

Kannadaprabha News   | Asianet News
Published : Jan 31, 2021, 01:42 PM IST
ಸರ್ಕಾರದ ವಿರುದ್ಧ ಫುಲ್ ಗರಂ ಆದ ಸಿದ್ದರಾಮಯ್ಯ : ಸರ್ಕಾರದಲ್ಲಿ ಸಿಎಂ ಸಚಿವ್ರು ಯಾಕಿದ್ದಾರೆ..?

ಸಾರಾಂಶ

ಸರ್ಕಾರ ಹಾಗೂ ಸಚಿವರು ಯಾಕಿರೋದು ಎಂದು ಪ್ರಶ್ನೆ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಫುಲ್ ಗರಂ ಆಗಿದ್ದಾರೆ. 

ಬೆಂಗಳೂರು (ಜ.31):   84 ದಿನಗಳಿಂದ ಟೊಯೋಟಾ ಕಾರ್ಮಿಕರು ಹೋರಾಟ ನಡೆಸುತ್ತಿದ್ದಾರೆ. ನಾನು ಇವತ್ತು ಅವರ ಸಮಸ್ಯೆ ಆಲಿಸಲು ಸ್ಥಳಕ್ಕೆ ಬಂದಿದ್ದೇನೆ.  ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. 

ಇಂದು ಬಿಡದಿಗೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಜವಾಬ್ದಾರಿ ಇದು ಲಾಕ್ ಔಟ್ ಆದಾಗ ಕಾರ್ಮಿಕರ ಪರ ಸರಕಾರ ನಿಲ್ಲಬೇಕಿತ್ತು.  ಸರಕಾರ ಬೇಜವಾಬ್ದಾರಿತನದಿಂದ ಕಾರ್ಮಿಕರು ಇಷ್ಟು ದಿನ ಹೋರಾಟ ಮಾಡಬೇಕಾಗಿದೆ.

ಬಿಜೆಪಿ ಹಿಂದುತ್ವದ ಹೆಸರಿನಲ್ಲಿ ದೇಶ ಒಡೆಯುತ್ತಿದೆ: ಸಿದ್ದರಾಮಯ್ಯ . 

ಸರಕಾರ ಹಾಗೂ ಕಾರ್ಮಿಕ ಇಲಾಖೆ ಇರೋದು ಏಕೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. 

ಸಿಎಂ ಹಾಗೂ ಸಚಿವರು ಯಾಕೆ ಇದ್ದಾರೆ.  ಆಡಳಿತ ಮಂಡಳಿಯವರನ್ನ ಒಂದಲ್ಲ ಎರಡು ಭಾರಿ ಕರೆದು ಮಾತನಾಡಬೇಕು.  ಕಾನೂನು ಇದೆ ಅಲ್ಲಿ ಹೋಗಿ ಎಂದು ಸಚಿವರು ಹೇಳುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ಹೇಳಿದರು. 

PREV
click me!

Recommended Stories

ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ
ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್