ಸಿಎಂ ಓದಿದ ಶಾಲೆ 4 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ

By Kannadaprabha NewsFirst Published Aug 2, 2020, 9:15 AM IST
Highlights

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿದ್ಯಾಭ್ಯಾಸ ಮಾಡಿದ ಇಲ್ಲಿನ ಹಳೇನಗರದಲ್ಲಿರುವ ಮುನ್ಸಿಪಲ್‌ ಪ್ರೌಢಶಾಲೆಯನ್ನು 4 ಕೋಟಿ ರೂ.ವೆಚ್ಚದಲ್ಲಿ ಪುನಶ್ಚೇತನಗೊಳಿಸಿ ಮಾದರಿ ಶಾಲೆಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದ್ದಾರೆ.

ಮಂಡ್ಯ(ಆ.02): ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ವಿದ್ಯಾಭ್ಯಾಸ ಮಾಡಿದ ಇಲ್ಲಿನ ಹಳೇನಗರದಲ್ಲಿರುವ ಮುನ್ಸಿಪಲ್‌ ಪ್ರೌಢಶಾಲೆಯನ್ನು 4 ಕೋಟಿ ರೂ.ವೆಚ್ಚದಲ್ಲಿ ಪುನಶ್ಚೇತನಗೊಳಿಸಿ ಮಾದರಿ ಶಾಲೆಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದ್ದಾರೆ.

ಶಾಲೆಯ ನೆಲ ಅಂತಸ್ತಿನ ಕಟ್ಟಡದ ಮೇಲೆ ಮೊದಲನೇ ಮಹಡಿಯಲ್ಲಿ ಶಾಲಾ ಕೊಠಡಿಗಳು ಮತ್ತು ಎರಡನೇ ಮಹಡಿಯಲ್ಲಿ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ ಕಟ್ಟಡವನ್ನು 3 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ಕೊರೋನಾ ಗೆದ್ದ ಚಿತ್ರ​ದು​ರ್ಗದ 105ರ ಅಜ್ಜಿ!

ಗ್ರಂಥಾಲಯಕ್ಕೆ ಪುಸ್ತಕಗಳು, ಪೀಠೋಪಕರಣಗಳಿಗೆ 20 ಲಕ್ಷ ರೂ., ಪ್ರಯೋಗಾಲಯಕ್ಕೆ ವಿಜ್ಞಾನ ಸಲಕರಣೆ ಸಾಮಗ್ರಿಗಳಿಗೆ 30 ಲಕ್ಷ ರೂ., ಹೈಸ್ಕೂಲ್‌ ಆವರಣದಲ್ಲಿ ಆಡಿಟೋರಿಯಂ ನಿರ್ಮಾಣಕ್ಕೆ 30 ಲಕ್ಷ ರೂ., ಹೊಸದಾಗಿ ನಿರ್ಮಿಸುವ ಶಾಲಾ ಕೊಠಡಿ ಹಾಗೂ ಆಡಿಟೋರಿಯಂ ಪೀಠೋಪಕರಣಗಳಿಗೆ 15 ಲಕ್ಷ ರೂ. ಸೇರಿ 4 ಕೋಟಿ ರೂ. ಅಂದಾಜುಮೊತ್ತ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.

click me!