ಅಸಹಾಯಕತೆ, ಅಸಾಮಾನ್ಯ ದೇಹಭಾರ, ಅಸಹಜ ಹೊಟ್ಟೆ ಹೊತ್ಕೊಂಡು ಓಡಾಡೋ ಪರಿಸ್ಥಿತಿ. ಯಾರಾದ್ರೂ ಸಹಾಯ ಮಾಡ್ತಾರೆ ಅನ್ನೋ ನಿರೀಕ್ಷೆಯನ್ನೇ ಬಿಟ್ಟು ಹನುಮಂತಪ್ಪ ಜೀವನ ಸಾಗಿಸ್ತಿದಾರೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಬುಲ್ಡೊಜರ್ ನಗರ ನಿವಾಸಿ ಹನುಮಂತಪ್ಪ (69) ಹೊಟ್ಟೆಯಿಂದ ಗಡ್ಡೆ ಆಕಾರ ಹೊರಬಂದಿದ್ದು, ವೃದ್ಧ ನಿತ್ಯ ನರಕ ಅನುಭವಿಸ್ತಿದಾರೆ.
ಗದಗ (ಆ.06): ಅಸಹಾಯಕತೆ, ಅಸಾಮಾನ್ಯ ದೇಹಭಾರ, ಅಸಹಜ ಹೊಟ್ಟೆ ಹೊತ್ಕೊಂಡು ಓಡಾಡೋ ಪರಿಸ್ಥಿತಿ. ಯಾರಾದ್ರೂ ಸಹಾಯ ಮಾಡ್ತಾರೆ ಅನ್ನೋ ನಿರೀಕ್ಷೆಯನ್ನೇ ಬಿಟ್ಟು ಹನುಮಂತಪ್ಪ ಜೀವನ ಸಾಗಿಸ್ತಿದಾರೆ. ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನರೇಗಲ್ ಬುಲ್ಡೊಜರ್ ನಗರ ನಿವಾಸಿ ಹನುಮಂತಪ್ಪ (69) ಹೊಟ್ಟೆಯಿಂದ ಗಡ್ಡೆ ಆಕಾರ ಹೊರಬಂದಿದ್ದು, ವೃದ್ಧ ನಿತ್ಯ ನರಕ ಅನುಭವಿಸ್ತಿದಾರೆ.
ಅಲೆಮಾರಿ ಜನಾಂಗದ ಹನುಮಂತಪ್ಪ, ಕಳೆದ ಕೆಲ ವರ್ಷಗಳಿಂದ ವಿಚಿತ್ರ ರೋಗಕ್ಕೆ ಗುರಿಯಾಗಿದ್ದಾರೆ. ಹೊಟ್ಟೆಯೊಳಗಿಂದ ಗಡ್ಡೆ ಜೋತು ಬಿದ್ದಿದೆ. ನೋವು ಇಲ್ಲ ಅಂದ್ರೂ ಓಡಾಡೋದು ಕಷ್ಟ ಅಂತಾರೆ ಹನುಮಂತಪ್ಪ ಶಿಗ್ಲಿ. ಹನಮಂತಪ್ಪನಿಗೆ ಹೆಂಡತಿಯೇ ಆಧಾರ. ಮಕ್ಕಳಿಲ್ಲ, ದುಡಿಮೆ ಸಾಧ್ಯವಾಗ್ತಿಲ್ಲ, ಸರ್ಕಾರ ನೀಡುವ ಅಕ್ಕಿಯಿಂದ ಜೀವನ ನಡೀತಿದೆ . ಆಸ್ಪತ್ರೆಯಲ್ಲಿ ಎಲ್ಲಿ ಹಣ ಕೇಳ್ತಾರೋ ಅಂತಾ ಚಿಕಿತ್ಸೆಯ ಗೊಡವಿಗೆ ಹನಮಂತಪ್ಪ ಹೋಗಿಲ್ಲ.
undefined
ಕರ್ನಾಟಕದ ಕೊತ್ತಂಬರಿಗೆ ಹೊರರಾಜ್ಯಗಳಲ್ಲಿ ಭಾರೀ ಬೇಡಿಕೆ..!
ಮಕ್ಕಳ ಮನರಂಜನೆಯ 'ಗರ್ದಿ ಗಮ್ಮತ್ತು' (ಬಯೋಸ್ಕೋಪ್) ನಡೆಸುತ್ತಿದ್ದ ಹನುಮಂತಪ್ಪ, ಸದ್ಯ ಮನೆಯಲ್ಲೇ ಕೈದಿಯಾಗಿದಾರೆ. ಅನಾರೋಗ್ಯ ಹನುಮಂತಪ್ಪನನ್ನ ಮನೆಯಿಂದ ಹೆಚ್ಚು ಓಡಾಡೋದಕ್ಕೆ ಬಿಡ್ತಿಲ್ಲ. ಹೀಗಿದ್ದರೂ ಎರಡು ಕಿಲೋಮೀಟರ್ ಓಡಾಡ್ತೇನೆ ಅಂತಾನೆ ಹನುಮಂತಪ್ಪ. ಗರ್ದಿ ಗಮ್ಮತ್ತು ಆಟ ನಿಂತು 15 ವರ್ಷ ಆಯ್ತಂತೆ. ಬಂದ ಬಿಡಿಗಾಸಿನಲ್ಲೇ ಅಲೆಮಾರಿ ಹನುಮಂತಪ್ಪನ ಜೀವನ ನಡೀತಿತ್ತು. ಯಾವಾಗ ನಿಗೂಢ ರೋಗ ಆವರಿಸಿತ್ತೋ ಆಗಿನಿಂದ ಹನುಮಂತಪ್ಪ ಮನೆಯಲ್ಲಿದ್ದಾನೆ.
ಚಿಕಿತ್ಸೆ ಇಲ್ಲದೇ ಕಾಲ ಕಳೆಯುತ್ತಿರುವ ಅಲೆಮಾರಿ ಜನಾಂಗದ ಹನುಮಂತಪ್ಪ: ಚಿಕ್ಕಂದಿನಿಂದ ಹೊಟ್ಟೆ ಅಸಹಜ ಆಕಾರದಲ್ಲಿದೆ. ವಯಸ್ಸು ಅದಂತೆಲ್ಲಾ, ಹೊಟ್ಟೆ ಬೆಳೀತಿದೆ. ಹೊಟ್ಟೆ ಕರಳು ಸಮಸ್ಯೆ ಅಂತಾ ಕೆಲ ವೈದ್ಯರು ಹೇಳಿದ್ರಂತೆ. ವರ್ಷದಿಂದ ಗಡ್ಡೆ ಬೆಳೆದು ವೃದ್ಧ ಹನಮಂತಪ್ಪ ಹಾಸಿಗೆ ಹಿಡಿದಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹಣಕಾಸಿನ ತೊಂದರೆಯಿಂದ ಆಸ್ಪತ್ರೆಗೆ ಹೋಗದ ಪರಿಸ್ಥಿತಿ ಎದುರಾಗಿದೆ.
Gadag: ಒಂದು ರೂಪಾಯಿಗೆ ಕೆ.ಜಿ ಟೊಮೆಟೋ: ರಸ್ತೆಗೆ ಸುರಿದು ರೈತರ ಆಕ್ರೋಶ
ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ವೃದ್ಧನ ಸಹಾಯಕ್ಕೆ ಧಾವಿಸಬೇಕಿದ್ದು, ಸೂಕ್ತ ಚಿಕಿತ್ಸೆ ನೀಡಬೇಕಿದೆ. ಈ ಮೂಲಕ ಅಲೆಮಾರಿ ಜನಾಂಗದ ಹನುಮಂತಪ್ಪನ ನಿತ್ಯ ನರಕಯಾತನೆಗೆ ಮುಕ್ತಿ ಕೊಡಬೇಕಿದೆ.