ದೇಶದ ಜನತೆಯ ಭಾವನೆಗಳನ್ನು ಮುಂದಿಟ್ಟುಕೊಂಡು 2ನೇ ಅವಧಿಗೆ ಬಹುಮತ ಪಡೆದ ಕೇಂದ್ರ ಸರ್ಕಾರ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ರಾಜ್ಯ ಸರ್ಕಾರ ಆರ್ಥಿಕ, ಆರೋಗ್ಯ ಕ್ಷೇತ್ರಗಳಲ್ಲಿ ಜನತೆಯ ಹಿತ ಕಾಪಾಡುವಲ್ಲಿ ವಿಫಲ: ಜಿ.ಎಸ್. ಪಾಟೀಲ
ಗಜೇಂದ್ರಗಡ(ಜೂ.29): ಬಿಜೆಪಿ ನೇತೃತ್ವದ ಪ್ರಧಾನಿ ಮೋದಿ ಸರ್ಕಾರ ಜನಪರವಾಗಿರುವ ಬಹುತೇಕ ಕಾಯ್ದೆಗಳಿಗೆ ಸುಗ್ರಿವಾಜ್ಞೆ ಮೂಲಕ ತಿದ್ದುಪಡಿ ತರುವ ಜನವಿರೋಧಿ ಹಾಗೂ ರೈತವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವ ಸರ್ಕಾರಗಳ ವಿರುದ್ಧ ಜನಾಕ್ರೋಶವಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಜು. 2 ರಂದು ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಪ್ರತಿಜ್ಞಾ ದಿನ ಕಾರ್ಯಕ್ರಮ ಹಿನ್ನಲೆ ಭಾನುವಾರ ಸಮೀಪದ ರಾಜೂರ ಗ್ರಾಮದ ಸುರೇಶಗೌಡ ಪಾಟೀಲ ನಿವಾಸದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಗದಗ: 40 ಮಂದಿಗೆ ಕೊರೋನಾ ವೈರಸ್ ಅಂಟಿಸಿದ ನೀರಾವರಿ ಇಲಾಖೆಯ ಅಕೌಂಟೆಂಟ್
ದೇಶದ ಜನತೆಯ ಭಾವನೆಗಳನ್ನು ಮುಂದಿಟ್ಟುಕೊಂಡು 2ನೇ ಅವಧಿಗೆ ಬಹುಮತ ಪಡೆದ ಕೇಂದ್ರ ಸರ್ಕಾರ ಹಾಗೂ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ರಾಜ್ಯದಲ್ಲಿ ಆಡಳಿತಕ್ಕೆ ಬಂದಿರುವ ರಾಜ್ಯ ಸರ್ಕಾರ ಆರ್ಥಿಕ, ಆರೋಗ್ಯ ಕ್ಷೇತ್ರಗಳಲ್ಲಿ ಜನತೆಯ ಹಿತ ಕಾಪಾಡುವಲ್ಲಿ ವಿಫಲವಾಗಿವೆ. ಪರಿಣಾಮ ದೇಶದ ಜನತೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಜನವಿರೋಧಿ ನೀತಿಗಳ ವಿರುದ್ಧ ಸಾರ್ವಜನಿಕರಲ್ಲಿ ವ್ಯಾಪಾಕವಾದ ಆಕ್ರೋಶವಿದೆ. ಆದರೆ, ಲಾಕ್‌ಡೌನ್ ಹಿನ್ನಲೆಯಲ್ಲಿ ಸರ್ಕಾರಗಳು ಸುಭದ್ರವಾಗಿವೆ ಎಂದ ಅವರು, ದೇಶದ ಧರ್ಮ ಗ್ರಂಥವಾಗಿರುವ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುವ ಕೆಲ ಬಿಜೆಪಿಗರ ಮೇಲೆ ಇಂದಿಗೂ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಯಾವುದೇ ಕಠೀಣ ಕ್ರಮಗಳನ್ನು ಕೈಗೊಂಡಿಲ್ಲ. ಅಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆ ಇಳಿಕೆಯಾಗಿದ್ದರೂ ಸಹ ದೇಶದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಮಾಡಿ ಸಂಕಷ್ಟದಲ್ಲಿರುವ ಜನತೆಯ ಮೇಲೆ ಆರ್ಥಿಕ ಹೊರೆ ಹೇರುತ್ತಿದೆ.
ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೆ ತಂದಿದ್ದ ಆಹಾರ ಭದ್ರತೆ ಕಾನೂನಿನಿಂದಾಗಿ ಲಾಕ್‌ಡೌನ್‌ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ದೇಶದಲ್ಲಿ ಪಡಿತರ ವಿತರಿಸುವಂತಾಗಿತ್ತು. ಇಲ್ಲದಿದ್ದರೆ ಮತ್ತಷ್ಟು ದುಸ್ತರ ದಿನಗಳನ್ನು ಜನತೆ ಎದುರಿಸುವ ದುಸ್ಥಿತಿ ಬರುತ್ತಿತ್ತು. ಹೀಗಾಗಿ ಸಂವಿಧಾನ ಹಾಗೂ ಜನವಿರೋಧಿ ಸರ್ಕಾರಗಳ ವಿರುದ್ಧ ಹೋರಾಡಲು ಕೆಪಿಸಿಸಿಗೆ ಹೊಸ ಸಾರಥ್ಯ ಸಿಕ್ಕಿದೆ. ಹೀಗಾಗಿ ಕಾರ್ಯಕರ್ತರ ರಕ್ಷಣೆಗೆ ಜೊತೆಗೆ ದೇಶದ ರೈತರ, ಕಾರ್ಮಿಕರ ಹಾಗೂ ಸರ್ವ ಸಮುದಾಯಗಳ ಜನತೆಯ ನೆಮ್ಮದಿಯ ಜೀವನಕ್ಕಾಗಿ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಿದೆ ಎಂದರು.
ಪ್ರತಿಜ್ಞಾ ದಿನ ಕಾರ್ಯಕ್ರಮದ ಉಸ್ತುವಾರಿ ಮಂಜುನಾಥ ವಾಸನದ ಮಾತನಾಡಿ, ರಾಜ್ಯದ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಕಾರ್ಯದರ್ಶಿಗಳು ಸಂವಿಧಾನದ ಹೆಸರಲ್ಲಿ ಪ್ರತಿಜ್ಞಾ ದಿನ ಎಂಬ ಹೆಸರಿನಲ್ಲಿ ನಡೆಯಲಿರುವ ಪದಗ್ರಹಣ ಕಾರ್ಯಕ್ರಮವನ್ನು ರಾಜ್ಯದ 8 ಸಾವಿರಕ್ಕೂ ಹೆಚ್ಚು ಸ್ಥಳಗಳಲ್ಲಿ ವೀಕ್ಷಣೆಗೆ ಸಿದ್ಧತೆಯಾಗಿದೆ ಎಂದರು.
ರೋಣ ತಾಪಂ ಸದಸ್ಯ ಶಶಿಧರ ಹೂಗಾರ, ರೋಣ ಪುರಸಭೆ ಸದಸ್ಯ ಮಿಥುನ್ ಪಾಟೀಲ, ವೀರಣ್ಣ ಶೆಟ್ಟರ, ಸುರೇಶಗೌಡ ಪಾಟೀಲ, ಶೇಖಪ್ಪ ಮಳಗಿ, ಅಲ್ಲಾಸಾಬ ಮುಜಾವರ, ಈರಪ್ಪ ಬಿಚ್ಚೂರ, ಪ್ರಭು ಮಾಟರಂಗಿ, ಶರಣು ಪೂಜಾರ, ಬಾಬು ಮುಜಾವರ, ಗೂಳಪ್ಪ ಕಮಾಟರ, ಶರಣಪ್ಪ ಹಾದಿಮನಿ, ಶರೀಪ ಸೌಧಾಗರ, ಶಿವಪ್ಪ ರಾಠೋಡ, ಮಲ್ಲಪ್ಪ ಹಾದಿಮನಿ, ಕಳಕಪ್ಪ ಮಾಗಿ, ಕಳಕಪ್ಪ ಕಾತ್ರಾಳ, ಮುದಿಯಪ್ಪ ಜೋಗಿನ ಇದ್ದರು.