ಸಂಸ್ಕೃತವನ್ನು ಭಾರತದ ಮುಖ್ಯವಾಹಿನಿಗೆ ತರುವುದು, ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಜ್ಞಾನದಾ ಸಂಸ್ಕೃತ ವಿಜ್ಞಾನ ಪ್ರದರ್ಶಿನಿಯು ಜನಮನ ಸೆಳೆಯಿತು.
ಹುಬ್ಬಳ್ಳಿ (ಆ.31): ಸಂಸ್ಕೃತವನ್ನು ಭಾರತದ ಮುಖ್ಯವಾಹಿನಿಗೆ ತರುವುದು, ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಪ್ರೋತ್ಸಾಹ ನೀಡುವ ಉದ್ದೇಶದಿಂದ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಜ್ಞಾನದಾ ಸಂಸ್ಕೃತ ವಿಜ್ಞಾನ ಪ್ರದರ್ಶಿನಿಯು ಜನಮನ ಸೆಳೆಯಿತು. ನಾವು ನಿತ್ಯ ಬಳಸುವ ವಸ್ತುಗಳು, ವೈಜ್ಞಾನಿಕ ಹೆಸರುಗಳು, ಬೀಜಗಣಿತ, ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಹೆಸರುಗಳನ್ನು ಸಂಸ್ಕೃತ ಹಾಗೂ ಕನ್ನಡದಲ್ಲಿ ಬರೆದು ಸುಲಭವಾಗಿ ಅರ್ಥ ಮಾಡಿಕೊಳ್ಳುವ ವೇದಿಕೆ ಕಲ್ಪಿಸಲಾಗಿತ್ತು. ಹಾಗಾಗಿ ಪ್ರದರ್ಶಿನಿಯನ್ನು ಒಮ್ಮೆ ನೋಡಿದರೆ ಸಾಕು ಬಹುತೇಕ ಸಂಸ್ಕೃತ ಕಲಿತ ಭಾವ ಬರುವಂತಾಗಿತ್ತು.
ಇಲ್ಲಿಯ ಮಜೇಥಿಯಾ ಪೌಂಡೇಷನ್ ಹಾಗೂ ಸಂಸ್ಕೃತ ಭಾರತೀ ಸಹಯೋಗದಲ್ಲಿ ವಿಶ್ವ ಸಂಸ್ಕೃತ ದಿನದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಈ ಪ್ರದರ್ಶಿನಿಯನ್ನು ವೀಕ್ಷಿಸಿದ ಎಲ್ಲರಿಗೂ ಸಂಸ್ಕೃತ ಎಷ್ಟು ಸುಲಭ ಎಂಬ ಭಾವನೆ ಮೂಡಿತು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರದರ್ಶಿನಿಗೆ ಚಾಲನೆ ನೀಡಿ ಮಾತನಾಡಿ, ಸಂಸ್ಕೃತ ಭಾಷೆಯ ವ್ಯಾಪಕ ಪ್ರಚಾರ ಕಾರ್ಯ ಕೈಗೊಂಡಿರುವುದು ಪ್ರಶಂಸನೀಯ. ನಾನು ಕೂಡ ಸಂಸ್ಕೃತ ಕಲಿತಿದ್ದೇನೆ. ಸಂಸ್ಕೃತ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತೇನೆ. ಇಲ್ಲಿನ ವಾತಾವರಣವನ್ನು ನೋಡಿದರೆ ಮತ್ತೆ ಸಂಸ್ಕೃತ ಮಾತನಾಡಲು ಪ್ರೇರಣೆ ನೀಡುವಂತಿದೆ ಎಂದರು.
undefined
ರಾಜೀವ್‌ಗಾಂಧಿ ಮೆಡಿಕಲ್ ಕಾಲೇಜು ಸ್ಥಳಾಂತರ ರಾಮನಗರಕ್ಕೆ ಅವಮಾನ: ಎಚ್‌ಡಿಕೆ ಆಕ್ರೋಶ
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಸಿ. ಬಸವರಾಜು ಮಾತನಾಡಿ, ಸಂಸ್ಕೃತ ಜಗತ್ತಿನ ಎಲ್ಲ ವಿಷಯ, ಸಂಗತಿಗಳನ್ನೊಳಗೊಂಡ ಶ್ರೀಮಂತ ಭಾಷೆಯಾಗಿದೆ. ಸಂಸ್ಕೃತದಲ್ಲಿರುವ ಜ್ಞಾನವನ್ನು ಎಲ್ಲ ಜನರು ಪಡೆಯುವಂತಾಗಬೇಕು. ಎಲ್ಲ ಭಾಷೆಗಳ ಬೇರು ಸಂಸ್ಕೃತ ಎಂಬುದನ್ನು ಮರೆಯಬಾರದು. ಸಂಸ್ಕೃತವನ್ನು ಅರಿಯದೆ ನಾವು ನಮ್ಮ ಸಂಸ್ಕೃತಿ, ಸಂಸ್ಕಾರ ಮರೆಯುವಂತಾಗಿದೆ. ಭಾಷೆಯಲ್ಲಿ ಮಾನವೀಯ ಮೌಲ್ಯಗಳಿವೆ. ಸಂಸ್ಕೃತವಿಲ್ಲದೆ ರಾಷ್ಟ್ರವಿಲ್ಲ ಎಂದು ಹೇಳಿದರು.
ಸಂಸ್ಕೃತ ಭಾರತೀ ಮಹಾಮಂತ್ರಿ ಸತ್ಯನಾರಾಯಣ ಮಾತನಾಡಿ, ಸಂಸ್ಕೃತ ದೇವ ಭಾಷೆ, ಜನ ಭಾಷೆ, ವಿಜ್ಞಾನ, ತಂತ್ರಜ್ಞಾನ, ಕಂಪ್ಯೂಟರ್ ಭಾಷೆಯೂ ಹೌದು. ನಿತ್ಯ ಜೀವನದಲ್ಲಿ ಈ ಭಾಷೆಯನ್ನು ಬಳಸಬಹುದು. ಇದೊಂದು ಸರ್ವ ಸಾಮಾನ್ಯರ ಭಾಷೆಯಾಗಿದೆ. ಕನ್ನಡ ಭಾಷೆ ನಮ್ಮ ದಿನ ನಿತ್ಯದ ಭಾಷೆಯಾಗಿದೆ. ಅದೇ ರೀತಿ ಸಂಸ್ಕೃತ ಕೂಡ. ಈ ಎರಡೂ ಭಾಷೆಗಳು ಒಟ್ಟೊಟ್ಟಿಗೆ ಸಾಗುತ್ತಿವೆ. ಎಲ್ಲ ಭಾಷೆಗಳು ಸಂಸ್ಕೃತದೊಂದಿಗೆ ಪರಸ್ಪರ ಪೂರಕವಾಗಿವೆ ಎಂದರು.
ಮಾನವ-ಪ್ರಾಣಿ ಸಂಘರ್ಷ ಪರಿಹಾರಕ್ಕೆ ಅವಿರತ ಪ್ರಯತ್ನವಿರಲಿ: ರಿಷಬ್ ಶೆಟ್ಟಿ
ಮಜೇಥಿಯಾ ಪೌಂಡೇಷನ್ ಅಧ್ಯಕ್ಷೆ ನಂದಿನಿ ಕಶ್ಯಪ ಮಾತನಾಡಿ, ದೇವ ಭಾಷೆಯಾದ ಸಂಸ್ಕೃತದ ಪ್ರಚಾರ ಕಾರ್ಯ ಕೈಗೊಂಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಸಂಸ್ಕೃತ ಭಾಷೆಯ ಮಹತ್ವ ತಿಳಿಯುವ ಕಾರ್ಯವನ್ನು ನಾವು ಮಾಡಿದ್ದೇವೆ. ಇದನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯ. ಯುವ ಪೀಳಿಗೆಗೆ ಭಾಷೆಯ ಮಹತ್ವ ತಿಳಿಸಬೇಕಾಗಿದೆ. ಎಲ್ಲರೂ ಸೇರಿ ಭಾಷೆಯ ಪ್ರಚಾರ ಮಾಡೋಣ ಎಂದರು. ಮಜೇಥಿಯಾ ಪೌಂಡೇಷನ್ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ, ಉದ್ಯಮಿ ಕಶ್ಯಪ ಮಜೇಥಿಯಾ, ಅಮರೇಶ ಹಿಪ್ಪರಗಿ, ಸುಭಾಸ್‌ಸಿಂಗ್ ಜಮಾದಾರ ಇತರರು ಇದ್ದರು.