ವಿಜಯಪುರ: ಸಿಂದಗಿ ತಾಲೂಕು ಸೇರ್ಪಡೆಗೆ ಆಗ್ರಹಿಸಿ ಗಬಸಾವಳಗಿ ಗ್ರಾಮಸ್ಥರು ಹೋರಾಟ!

By Ravi Janekal  |  First Published Feb 22, 2024, 4:09 PM IST

ಆಲಮೇಲ ಹೊಸ ತಾಲೂಕಾಗಿ ಘೋಷಣೆ ಮಾಡಿದ ಬಳಿಕ ಗಬಸಾವಳಗಿ ಗ್ರಾಮವನ್ನ ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಿದ್ದಾರೆ. ಆದ್ರೆ ಗಬಸಾವಳಗಿ ಗ್ರಾಮದಿಂದ ಆಲಮೇಲ ತಾಲೂಕಾಕೇಂದ್ರ ಬರೊಬ್ಬರಿ 40 ಕಿ.ಮೀಟರ್ ಆದ್ರೆ ಸಿಂದಗಿ  ಕೇವಲ 14 ಕೀ.ಮೀಟರ ದೂರದಲ್ಲಿದೆ. ಆದ್ರೆ ಗಬಸಾವಳಗಿಯನ್ನ ಸಿಂದಗಿಯಲ್ಲಿ ಉಳಿಸಿಕೊಳ್ಳುವ ಬದಲಿಗೆ ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಲಾಗಿದೆ. ಇದು ಗಬಸಾವಳಗಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. 


- ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಫೆ.22) : ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಹೊಸ ತಾಲೂಕುಗಳ ರಚನೆ ಆಗಿವೆ. ರಚನೆಯಾದ ಹೊಸ ತಾಲೂಕುಗಳಿಗೆ ಗ್ರಾಮಗಳ ವಿಂಗಡನೆಯು ಆಗಿವೆ‌. ಆದ್ರೆ ಈ ನಡುವೆ ಕೆಲವೆಡೆ ಹೊಸ ತಾಲೂಕುಗಳಿಗೆ ಗ್ರಾಮಗಳನ್ನ ಸೇರಿಸುವ ವೇಳೆ ಅವೈಜ್ಞಾನಿಕವಾಗಿ ವಿಂಗಡನೆಯಾಗಿರೋದು ಬೆಳಕಿಗೆ ಬಂದಿವೆ. ಹೊಸ ತಾಲೂಕುಗಳಿಗೆ ಅವೈಜ್ಞಾನಿಕವಾಗಿ ಗ್ರಾಮಗಳ ಸೇರ್ಪಡೆಯಿಂದ ಈಗ ಅಂತಹ ಗ್ರಾಮಗಳ ಜನರು ಪರದಾಡುವಂತಾಗಿದೆ. ಇಂತಹದ್ದೇ ಸಮಸ್ಯೆಯಲ್ಲಿ ಸಿಲುಕಿದ್ದಾರೆ ವಿಜಯಪುರ ಜಿಲ್ಲೆಯ ಗಬಸಾವಳಗಿ ಗ್ರಾಮಸ್ಥರು.

Tap to resize

Latest Videos

ಗ್ರಾಮಸ್ಥರಿಗೆ ಸಂಕಷ್ಟ ತಂದ ಹೊಸ ತಾಲೂಕು!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೊಸ ತಾಲೂಕುಗಳ ರಚನೆ ಆಗಿವೆ. ಕೆಲವೆಡೆ ಹೊಸ ತಾಲೂಕುಗಳಿಗೆ ಗ್ರಾಮಗಳ ವಿಂಗಡನೆ ಮಾಡಿ ಸೇರ್ಪಡೆ ಮಾಡುವ ವೇಳೆ ಯಡವಟ್ಟುಗಳು ಉಂಟಾಗಿವೆ. ವಿಜಯಪುರ ಜಿಲ್ಲೆಯಲ್ಲು ಸಿಂದಗಿ ತಾಲೂಕಿನಿಂದ ಬೇರ್ಪಟ್ಟ ಆಲಮೇಲ ಹೊಸ ತಾಲೂಕಾಗಿ ನಿರ್ಮಾಣಗೊಂಡಿದೆ. ಆದ್ರೆ ಹೊಸ ತಾಲೂಕಿಗೆ ಹಳ್ಳಿಗಳ ಸೇರ್ಪಡೆಯನ್ನ ಅವೈಜ್ಞಾನಿಕವಾಗಿ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. 

ಸರ್ಕಾರಿ ಶಾಲಾ ಮಕ್ಕಳಿಗೆ ಸಿಹಿ ಸುದ್ದಿ; ವಾರಕ್ಕೆ 3 ದಿನ ರಾಗಿ ಮಾಲ್ಟ್ ವಿತರಣೆಗೆ ಸಿಎಂ ಚಾಲನೆ

ಗಬಸಾವಳಗಿ ಗ್ರಾಮಸ್ಥರ ಪರದಾಟ!

ಆಲಮೇಲ ಹೊಸ ತಾಲೂಕಾಗಿ ಘೋಷಣೆ ಮಾಡಿದ ಬಳಿಕ ಗಬಸಾವಳಗಿ ಗ್ರಾಮವನ್ನ ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಿದ್ದಾರೆ. ಆದ್ರೆ ಗಬಸಾವಳಗಿ ಗ್ರಾಮದಿಂದ ಆಲಮೇಲ ತಾಲೂಕಾಕೇಂದ್ರ ಬರೊಬ್ಬರಿ 40 ಕಿ.ಮೀಟರ್ ಆದ್ರೆ ಸಿಂದಗಿ  ಕೇವಲ 14 ಕೀ.ಮೀಟರ ದೂರದಲ್ಲಿದೆ. ಆದ್ರೆ ಗಬಸಾವಳಗಿಯನ್ನ ಸಿಂದಗಿಯಲ್ಲಿ ಉಳಿಸಿಕೊಳ್ಳುವ ಬದಲಿಗೆ ಆಲಮೇಲ ತಾಲೂಕಿಗೆ ಸೇರ್ಪಡೆ ಮಾಡಲಾಗಿದೆ. ಇದು ಗಬಸಾವಳಗಿ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. 

ಪಕ್ಷಾತೀತವಾಗಿ ಹೋರಾಟಕ್ಕೆ ಮುಂದಾದ ಗ್ರಾಮಸ್ಥರು!

ಗಬಸಾವಳಗಿ ಗ್ರಾಮವನ್ನ ಅವೈಜ್ಞಾನಿಕವಾಗಿ 40 ಕೀ.ಮೀ ದೂರದಲ್ಲಿರೋ ಆಲಮೇಲಕ್ಕೆ ಸೇರಿಸಿದ್ದರಿಂಸ ಗ್ರಾಮದ ಜನರು ದಾಖಲಾತಿ, ನಿತ್ಯ ಕೆಲಸಗಳಿಗೆ ಪರದಾಡುವಂತಾಗಿದೆ. ಆಲಮೇಲ ತಾಲೂಕಿಗೆ ಸೇರ್ಪಡೆಯಾಗಿರೋ ಗಬಸಾವಳಗಿಯಿಂದ ತಾಲೂಕಾಕೇಂದ್ರ ತಲುಪಲು ಸಿಂದಗಿಯಿಂದ 40 ಕಿ.ಮೀಟರ್ ಸುತ್ತುವರೆದು ಹೋಗಬೇಕಾಗುತ್ತೆ. ಆದ್ರೆ ಸಿಂದಗಿ ಕೇವಲ 14 ಕಿ.ಮೀಟರ್ ದೂರದಲ್ಲಿದ್ರು ರಾಜಕೀಯ ವೈಷಮ್ಯಕ್ಕೆ ಗಬಸಾವಳಗಿ ಗ್ರಾಮವನ್ನ ಆಲಮೇಲ ತಾಲೂಕಿಗೆ ಸೇರಿಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕ್ತಿದ್ದಾರೆ. ಈ ಕ್ರಮವನ್ನ ತಕ್ಷಣಕ್ಕೆ ಕೈಬಿಟ್ಟು ಗಬಸಾವಳಗಿ ಗ್ರಾಮವನ್ನ ಸಿಂದಗಿ ತಾಲೂಕಿಗೆ ಸೇರಿಸಬೇಕು ಎಂದು ಗ್ರಾಮಸ್ಥರು ಪಕ್ಷಾತೀತವಾಗಿ ಆಗ್ರಹಿಸುತ್ತಿದ್ದಾರೆ. ಇಲ್ಲದೆ ಹೋದರೆ ಅಧಿಕಾರಿ, ಶಾಸಕರ ವಿರುದ್ಧ ಉಗ್ರ ಹೋರಾಟದ ಎಚ್ಚರಿಕೆಯನ್ನ ಗಬಸಾವಳಗಿ ಗ್ರಾಮಸ್ಥರು ನೀಡಿದ್ದಾರೆ. 

ಹಾಸನ: ಮಾನಸಿಕ ಅಸ್ವಸ್ಥ ಮಗುವನ್ನು ಸರಪಳಿಯಿಂದ ಕಟ್ಟಿಹಾಕಿದ ದಂಪತಿ! ಮಗು ರಕ್ಷಿಸಿದ ಪೊಲೀಸರು

ತಾಲೂಕಾ ವಿಂಗಡನೆ ಆದಾಗಲೇ ಮನವಿ ನೀಡಲಾಗಿತ್ತು!

ಗಬಸಾವಳಗಿ ಜನರು ಏಕಾಏಕಿ ಹೋರಾಟಕ್ಕೇನು ಮುಂದಾಗಿಲ್ಲ. ಸಿಂದಗಿಯಿಂದ ಬೇರ್ಪಟ್ಟು ಆಲಮೇಲ ಹೊಸ ತಾಲೂಕು ರಚನೆ ಆದಾಗಲೇ 2019ರಲ್ಲಿ ಗಬಸಾವಳಗಿ ಆಲಮೇಲಕ್ಕೆ ಸೇರ್ಪಡೆಯಾಗುವ ವಿಚಾರ ತಿಳಿದು ಗ್ರಾಮಸ್ಥರು ಖಂಡಿಸಿದ್ದರು‌. ಜೊತೆ ಜೊತೆಗೆ ಮೊರಟಗಿ, ಬಗಲೂರು, ಕಕ್ಕಳಮೇಲಿ ಗ್ರಾಮಸ್ಥರು ಸಹ ಸಿಂದಗಿಗೆ ನಮ್ಮ ಗ್ರಾಮಗಳನ್ನ ಸೇರಿಸಿ ಎಂದು ಆಗ್ರಹಿಸಿದ್ದರು. ಆಗ ತಹಶೀಲ್ದಾರ್ ರಿಗೆ ಮನವಿಯನ್ನ ಕೊಟ್ಟಿದ್ದರು. ಆದ್ರೆ ಅಧಿಕಾರಿಗಳ ಯಡವಟ್ಟಿನಿಂದ ಸಮಸ್ಯೆ ಹಾಗೆ ಉಳಿದಿದೆ. ಈಗ ಗಬಸಾವಳಗಿ ಗ್ರಾಮಸ್ಥರು ತಮಗಾದ ಅನ್ಯಾಯವನ್ನ ಸರಿಪಡಿಸುವಂತೆ ಹೋರಾಟಕ್ಕಿಳಿದಿದ್ದಾರೆ. ಮುಂದಿನಗಳಲ್ಲಿ‌ ಮೊರಟಗಿ, ಕಕ್ಕಳಮೇಲಿ, ಬಗಲೂರು ಗ್ರಾಮಸ್ಥರು ಹೋರಾಟಕ್ಕಿಳಿಯುವ ಸಾಧ್ಯತೆಗಳಿವೆ..

click me!