ಕೊರಟಗೆರೆಯಲ್ಲಿ ಐದು ವರ್ಷದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿ ಪುಸ್ತಕ ಪಟ್ಟಿನೀಡುವುದರ ಮೂಲಕ ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕ ಡಾ. ಜಿ. ಪರಮೇಶ್ವರ್ ತಮ್ಮ ಸಾಧನೆಯನ್ನು ತಿಳಿಸಿದರು
ತುಮಕೂರು : ಕೊರಟಗೆರೆಯಲ್ಲಿ ಐದು ವರ್ಷದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾಮಗಾರಿ ಪುಸ್ತಕ ಪಟ್ಟಿನೀಡುವುದರ ಮೂಲಕ ಮಾಜಿ ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕ ಡಾ. ಜಿ. ಪರಮೇಶ್ವರ್ ತಮ್ಮ ಸಾಧನೆಯನ್ನು ತಿಳಿಸಿದರು. ಅವರು ಕೊರಟಗೆರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2573.68 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅಭಿವೃದ್ಧಿ ಪಟ್ಟಿಯ ಕೈಪಿಡಿಗೆ ಹೆಜ್ಜೆ ಗುರುತು ಅಂತ ಹೆಸರಿಟ್ಟಿದ್ದು, ಕೊರಟಗೆರೆ ಕ್ಷೇತ್ರ ಪ್ರತಿ ಮನೆ ಮನೆಗೆ ಹೆಜ್ಜೆ ಗುರುತು ಪುಸ್ತಕ ಹಂಚಲು ತಯಾರಿ ನಡೆಸಿದ್ದೇನೆ ಎಂದು ತಿಳಿಸಿದರು.
ತಮ್ಮನ್ನು ವೈಟ್ ಕಾಲರ್ ರಾಜಕಾರಣಿ, ಅನುಕೂಲಸ್ಥರಿಗೆ ಮಾತ್ರ ಸಿಗುತ್ತಾರೆ ಎಂದು ಆರೋಪಿಸುತ್ತಾರೆ. ಆದರೆ, ತಾವು ಹಾಗಲ್ಲ. ಜನ ಸಾಮಾನ್ಯರ ಜೊತೆ ಬೆರೆಯುತ್ತೇನೆ. ಅಭಿವೃದ್ಧಿಯ ಪರ ಇರುವ ರಾಜಕಾರಣಿ ಎಂದರು. ಕೊರಟಗೆರೆಯಲ್ಲಿ ಹಿಂದೆಂದೂ ಕಾಣದಷ್ಟುಅಭಿವೃದ್ಧಿ ಮಾಡಿದ್ದೇನೆಂದ ಜಿ.ಪರಮೇಶ್ವರ್, ಐದು ವರ್ಷದಲ್ಲಿ ನನ್ನನ್ನು ಆರಿಸಿ ಕಳುಹಿಸಿದ ಈ ಕ್ಷೇತ್ರಕ್ಕೆ ಜನಪರ ಕೆಲಸ ಮಾಡಿದ್ದೇನೆ.
ನನಗೆ ಸಿಕ್ಕ ಅಧಿಕಾರದ ಅವಕಾಶಗಳು ಹಾಗೂ ಶಾಸಕರಾಗಿ ಜನಪರವಾದ ಕೆಲಸಗಳನ್ನು ಮಾಡಿದ್ದೇವೆ. ಜನರ ಅಪೇಕ್ಷೆ, ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇನೆ. ಪ್ರತಿಯೊಂದು ಪಂಚಾಯ್ತಿಯಲ್ಲಿ ಪ್ರತಿಗ್ರಾಮದಲ್ಲಿ ಅಗತ್ಯವಾದ ಕೆಲಸಗಳನ್ನು ಆದ್ಯತೆ ಮೇರೆಗೆ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ದಿಗೆ ನನ್ನದೇ ಆದ ಕಲ್ಪನೆಯಲ್ಲಿ ಕೆಲಸ ಮಾಡಿದ್ದೇನೆ. ನಾನು ಅನುಕೂಲಸ್ತರನ್ನು ಹಾಗೂ ಬಿಳಿ ಬಟ್ಟೆಯನ್ನೇ ನೋಡುತ್ತೇನೆ. ನಾನು ಕೈಗೆ ಸಿಗಲ್ಲ, ಅವರು ಹೈಫೈ ಅಂತ, ವಿರೋಧಿಗಳು ಅಪಪ್ರಚಾರ ಮಾಡಿದ್ದಾರೆ.
ನಾನು ಸಾಮಾನ್ಯ ವ್ಯಕ್ತಿ. ವಿದ್ಯಾವಂತನಾಗಿ ಜನ ಸಮುದಾಯದ ಜೊತೆಗೆ ರಾಜಕಾರಣಕ್ಕೆ ಬಂದವನು. ನಾನು ಜನರಿಂದ ದೂರ ಇರಬೇಕು ಅನ್ನೋದಾಗಿದ್ದರೆ ರಾಜಕಾರಣಕ್ಕೆ ಬರಬಾರದಿತ್ತು. ಜನರ ಮಧ್ಯೆ ಇರಬೇಕು ಅನ್ನೋ ಕಾರಣಕ್ಕೆ ರಾಜಕಾರಣಕ್ಕೆ ಬಂದಿದ್ದೇನೆ. ನನ್ನ ಕೆಲಸವನ್ನು ಮಾಡಿದ್ದೇನೆ. ನಾನು ಏನು ಕೆಲಸ ಮಾಡಿದ್ದೇನೆ ಅಂತ ಜನರಿಗೆ ತಲುಪಿಸಬೇಕು ಎಂದ ಪರಂ, ನಾನು ಸುಳ್ಳು ಹೇಳಿದ್ದರೆ, ಜನ ನಂಬುವುದಿಲ್ಲ. ನಮ್ಮನ್ನು ಕ್ಷಮಿಸಲ್ಲ ಎಂದರು.
ಸಾರ್ವಜನಿಕ ಜೀವನದಲ್ಲಿ ಲೆಕ್ಕ ಕೊಡಬೇಕಾಗುತ್ತದೆ
ಸಾರ್ವಜನಿಕ ಬದುಕಿನಲ್ಲಿ ಅಕೌಂಟಬಲಿಟಿ ಬಹಳ ಮುಖ್ಯ, ಲೆಕ್ಕ ಕೊಡಬೇಕಾಗುತ್ತದೆ. ಸುಳ್ಳು ಹೇಳಿಕೊಂಡು, ಓಡಾಡಲು ಆಗಲ್ಲ. ಐದು ವರ್ಷದ ಲೆಕ್ಕವನ್ನು ಕೊರಟಗೆರೆ ಮತದಾರರಿಗೆ ಕೊಡುತ್ತಿದ್ದೇನೆ. ನಾನು ಮಾಡಿದ ಕೆಲಸದ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದೇನೆ. ಹೆಜ್ಜೆ ಗುರುತು ಅಂತ ಹೆಸರಿಟ್ಟಿದ್ದೇನೆ. ಇದನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಪರಮೇಶ್ವರ್ ತಿಳಿಸಿದರು.
ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಸಮಾವೇಶ
ನಮ್ಮ ಕಾಂಗ್ರೆಸ್ ಪಕ್ಷದಿಂದ ಚಿತ್ರದುರ್ಗದಲ್ಲಿ ಪ.ಜಾ ಹಾಗೂ ಪ.ಪಂಗಡದ ಬೃಹತ್ ಸಮಾವೇಶ ಮಾಡಲಾಯಿತು. ಬಿಜೆಪಿ ಸರ್ಕಾರ ಎಸ್‌ಸಿ,ಎಸ್‌ಟಿ ರಿಸರ್ವೇಷನ್ ಹೆಚ್ಚು ಮಾಡುತ್ತೇವೆ ಎಂದು ಆದೇಶ ಮಾಡಿದೆ. ಈಗಾಗಲೇ ಎರಡು ಸದನದಲ್ಲಿ ಮಸೂದೆಯನ್ನ ತಂದು ಪಾಸ್ ಮಾಡಿಕೊಂಡು ಅದನ್ನು ಕಾನೂನಾಗಿ ಮಾಡಿದ್ದಾರೆ. ಪ.ಜಾ 15 ರಿಂದ 17%, ಪ.ಪಂಗಡಕ್ಕೆ 4 ರಿಂದ 7% ಹೆಚ್ಚು ಮಾಡುತ್ತೇವೆ ಎಂದು ಕಾನೂನು ಮಾಡಿದ್ದಾರೆ. ಕಾನೂನಿನ ಅರಿವು ಇರೋರಿಗೆ ಗೊತ್ತಾಗುತ್ತೆ. ಇದು ಸದ್ಯಕ್ಕೆ ಸಾಧ್ಯವಿಲ್ಲ. ಈ ಮಾತನ್ನ ನಾನು ಹೇಳುವುದರÜ ಜೊತೆಗೆ. ಇವರದೇ ಕೇಂದ್ರ ಸರ್ಕಾರದ ಸಚಿವರು ಅದೇ ಖಾತೆಯ ಸಚಿವರು. ಕೇಂದ್ರದ ಲೋಕಸಭೆಯಲ್ಲಿ ಹೇಳಿದ್ದಾರೆ. ಕೋಲಾರ ಬಿಜೆಪಿ ಸಂಸತ್ ಸದಸ್ಯ ಮುನಿಸ್ವಾಮಿ ಅವರು ಸಂಸತ್‌ನಲ್ಲಿ ಒಂದು ಪ್ರಶ್ನೆ ಹಾಕಿದ್ದಾರೆ. ಕಾನೂನಿನಲ್ಲಿ 50% ಗೆ ಮಾತ್ರ ರಿಸರ್ವೇಷನ್ ಸಿಮೀತವಾಗಿರುವುದು. ಅದನ್ನ ಹೊರತುಪಡಿಸಿ ಮಾಡೋದಿಕ್ಕೆ ಸಾಧ್ಯನಾ. ರಾಜ್ಯ ಬಿಜೆಪಿ ಸರ್ಕಾರ ಈ ರೀತಿ ಮನವಿ ಕಳುಹಿಸಿದ್ದರೆ ಮಾಡುತ್ತೀರಾ ಎಂದು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಕೇಂದ್ರ ಸಚಿವ ನಾರಾಯಣಸ್ವಾಮಿಯವರು ಇಲ್ಲ, ಇದು ಸಾಧ್ಯವಿಲ್ಲ ಎಂದು ಉತ್ತರ ಕೊಡುತ್ತಾರೆ. ಅಂದರೆ ಅದರ ಅರ್ಥ ಇದು ಮಾಡುವುದಕ್ಕೆ ಸಾಧ್ಯವಿಲ್ಲ ಅಂತ.
ಇವರು ಆ ರೀತಿ ಮಾಡ್ಬೇಕು ಅಂದ್ರೆ 9ನೇ ಶೆಡ್ಯೂಲ…ಗೆ ಸೇರಿಸಬೇಕು. ಇವರು ಅದನ್ನ ಮಾಡಿಲ್ಲ ಎಂದ ಪರಮೇಶ್ವರ್, ಈಗ ಲೋಕಸಭೆ ನಡೆಯುತ್ತಿದೆ. ನಮ್ಮ ಸಚಿವರೇ ಇದ್ದಾರೆ.
ಲೋಕಸಭೆಯಲ್ಲಿ 9ನೇ ಷೆಡ್ಯೂಲ್‌ಗೆæ ಸೇರಿಸುವುದಕ್ಕೆ ನೀವು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತೇನೆ ಎಂದು ಪರಮೇಶ್ವರ್ ಹೇಳಿದರು. ನಾವು ಈಗಾಗಲೇ ಅನೇಕ ಬಾರಿ ಕೇಳಿದ್ದೇವೆ.
ಮತ್ತೊಂದು ಬಾರಿ ತಮ್ಮಲ್ಲಿ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಸರ್ಕಾರ ದಿವಾಳಿ ಆಗಿದೆಯೇ?
ಶಾಲೆಗೆ ಮಕ್ಕಳು ಹೋಗ್ತಾರೆ ಅವರಿಗೆ ಶೂ, ಸಾಕ್ಸ್ , ಸಮವಸ್ತ್ರ ಕೊಡುವುದಕ್ಕೆ ಆಗುವುದಿಲ್ಲ ಎಂದರೆ ಸರ್ಕಾರ ದಿವಾಳಿಯಾಗಿದೆಯೇ ಎಂಬ ಅನುಮಾನ ಬರುತ್ತಿದೆ ಎಂದರು.
ನಾನು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡುತ್ತೇನೆ. ತಕ್ಷಣ ಕ್ರಮ ತಗೊಬೇಕು.ನಮ್ಮ ಜಿಲ್ಲೆಯವರೇ ಮಂತ್ರಿಗಳಿದ್ದಾರೆ. ನಾಗೇಶ್ ಅವರು ಮೊದಲ ಬಾರಿಗೆ ಮಂತ್ರಿಗಳಾಗಿದ್ದಾರೆ. ನಾನು ಅವರಿಗೆ ಒತ್ತಾಯ ಮಾಡುತ್ತೇನೆ. ಅವರ ಕಷ್ಟಏನಿದೆಯೋ ಗೊತ್ತಿಲ್ಲ. ಅದು ನಿಮ್ಮ ಜವಾಬ್ದಾರಿ. ಕೂಡಲೇ ಆ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಹಾಗೂ ಶೂ ಕೊಡಬೇಕು ಎಂದು ಒತ್ತಾಯಿಸಿದರು.
ಸುಮ್ಮನೆ ಅವರ ಮೇಲೆ ಇವರು ಮಾತನಾಡೋದು. ನಾಲಗೆ ಕತ್ತರಿಸುತ್ತೇನೆ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಕಾಲು ಕತ್ತರಿಸ್ತಿನಿ ಎನ್ನುತ್ತಾರೆ. ಸಾರ್ವಜನಿಕ ಜೀವನದಲ್ಲಿ ಮಾತು ಇಷ್ಟುಕೀಳುಮಟ್ಟಕ್ಕೆ ಹೋಗಬಾರದು. ಜನ ನಮ್ಮನ್ನ ಸೂಕ್ಷ್ಮದೃಷ್ಠಿಯಿಂದ ನೋಡುತ್ತಾರೆ. ನಮ್ಮನ್ನು ಗಮನಿಸುತ್ತಾರೆ. ನಮಗೆ ಜವಾಬ್ದಾರಿಗಳನ್ನು ಕೊಟ್ಟಿದ್ದಾರೆ. ನಾವು ಆ ಕೆಲಸ ಮಾಡಬೇಕು. ಯಾರೋ ಒಂದು ಟೀಕೆ ಮಾಡಿದರೆ, ಬೇರೆ - ಬೇರೆ ರೀತಿ ಅರ್ಥೈಸೋದು ಸರಿಯಲ್ಲ ಎಂದರು.
ಸಾವಿರಾರು ಕೋಟಿ ರು. ಬಿಲ… ಬಾಕಿಯಿದೆ
ನೀರಾವರಿ ಇಲಾಖೆಯಲ್ಲಿ 25 ಸಾವಿರ ಕೋಟಿ ಬಾಕಿಯಿದೆ. ಮುಖ್ಯಮಂತ್ರಿಗಳೆ ಹಣಕಾಸಿನ ಸಚಿವರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಹಣ ಬಾಕಿ ಉಳಿಸಿಕೊಂಡಿದ್ದೀರಾ. ಅಂದರೆ ಸರ್ಕಾರ ದಿವಾಳಿ ಎದ್ದೋಗಿದೆ ಎಂದೇ ಅರ್ಥ ಎಂದ ಪರಮೇಶ್ವರ್, ಒಬ್ಬ ಸಾಮಾನ್ಯನಾಗಿ ಕೇಳುತ್ತಿದ್ದೇನೆ ಕೂಡಲೇ ಉತ್ತರ ಕೊಡಿ ಮುಖ್ಯಮಂತ್ರಿಗಳೇ ಎಂದು ಒತ್ತಾಯಿಸಿದರು.
ಮಧುಗಿರಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿ ಘೋಷಿಸಿದ್ದೇನೆ
ನಾನು ಶಿಕ್ಷಣ ಸಚಿವನಾಗಿದ್ದಾಗ ತುಮಕೂರು ಜಿಲ್ಲೆಗೆ ವಿವಿ ತಂದೆ. ಸ್ಮಾರ್ಟ ಸಿಟಿ ಯೋಜನೆಗೆ ಒತ್ತಾಯ ಮಾಡಿದೆ. ಎಂ.ಜಿ ಸ್ಟೇಡಿಯಂ ಅಭಿವೃದ್ದಿಯಾಗಿದೆ. ನಾನೇ ಖುದ್ದು ಆರ್ಕಿಟೆಕ್ಟ್ ಜೊತೆಗೆ ಚರ್ಚೆಸಿದ್ದೇನೆ.
ತುಮಕೂರು- ರಾಯದುರ್ಗ, ತುಮಕೂರು - ದಾವಣಗೆರೆ ರೈಲು ಮಾರ್ಗಕ್ಕೆ ಬಜೆಚ್ ನಲ್ಲಿ ಹಣ ತೋರಿಸಿದ್ದಾರೆ. ಚುನಾವಣೆಯನ್ನು ಮುಂದಿಟ್ಟು ಕೊಂಡು ಅನುದಾನ ಘೋಷಣೆ ಮಾಡಿದ್ದಾರೆ. ಮೊದಲೇ ಘೋಷಣೆ ಮಾಡಿದ್ದರೆ, ಇಷ್ಟುಹೊತ್ತಿಗೆ ಕೆಲಸ ಆಗಿ ಹೋಗಿರುತ್ತಿತ್ತು. ಪ್ರಧಾನಿ ಎಚ್‌ಎಎಲ… ಫ್ಯಾಕ್ಟರಿ ಉದ್ಘಾಟಿಸಿದ್ದಾರೆ. ನಾನು ಅವರಿಗೆ ಆಭಾರಿಯಾಗಿದ್ದೇನೆ. ಅವರಿಗೆ ಧನ್ಯವಾದ ಹೇಳುತ್ತೇನೆ. ನಾವೇ ಅಡಿಗಲು ಹಾಕಿದ್ದೆವು. ನಾವೇ ಉದ್ಘಾಟನೆ ಮಾಡಿದ್ದೆವು. ಎಷ್ಟುವೇಗವಾಗಿ ಕೆಲಸ ಮಾಡಿದ್ದೇವೆ ಅಂತ ಹೇಳಿಕೊಳ್ಳುತ್ತಿದ್ದಾರೆ. ಆದರೆ ಜನವರಿ 3 - 2016 ರಲ್ಲಿ ಅಡಿಗಲ್ಲು ಹಾಕಿದ್ದಾಗ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು.
ಇಂದಿಗೆ 7 ವರ್ಷ ಆಯ್ತು. ಅಡಿಗಲ್ಲು ಸಂದರ್ಭದಲ್ಲಿ ಎರಡೇ ವರ್ಷದಲ್ಲಿ ಹೆಲಿಕಾಪ್ಟರ್ ಹಾರಿಸುತ್ತೇವೆ ಎಂದರು. 7 ವರ್ಷಕ್ಕೆ ಪ್ರಾರಂಭವಾಗಿದೆ, ಎಲ್ಲಿ ದೆ ಸ್ಪೀಡು ಎಂದು ಪರಂ ಮಾರ್ಮಿಕವಾಗಿ ಕೇಂದ್ರವನ್ನು ಪ್ರಶ್ನಿಸಿದರು.ಈಗಲಾದರೂ ಹಣ ಕೊಡಿ. 6.5 ಸಾವಿರ ಜನರಿಗೆ ಉದ್ಯೋಗ ಕೊಡುತ್ತೇವೆ ಎಂದು ಹೇಳಿದ್ದೀರಿ. ಈಗಲಾದರೂ ಸ್ಥಳೀಯರಿಗೆ ಉದ್ಯೋಗ ಕೊಡಿ ಎಂದು ಪರಂ ಒತ್ತಾಯಿಸಿದರು.