ಹಿಂದುಳಿದ ದೇಶವೆಂದು ಹಿಯ್ಯಾಳಿಸುತ್ತಿರುವ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ವಿಶ್ವಗುರುವಾಗಿ ಹೊರ ಹೊಮ್ಮುತ್ತಿರುವ ಭಾರತದ ಭವ್ಯ ಭವಿಷ್ಯಕ್ಕೆ ಮತ್ತೆ ಮೋದಿ ಅವಶ್ಯಕವಾಗಿದ್ದಾರೆ ಎಂದು ಚಿಂತಕ ಸೂಲಿಬೆಲೆ ಚಕ್ರವರ್ತಿ ಅಭಿಪ್ರಾಯಪಟ್ಟರು.
ಭಾಲ್ಕಿ (ಮಾ.01): ಹಿಂದುಳಿದ ದೇಶವೆಂದು ಹಿಯ್ಯಾಳಿಸುತ್ತಿರುವ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ವಿಶ್ವಗುರುವಾಗಿ ಹೊರ ಹೊಮ್ಮುತ್ತಿರುವ ಭಾರತದ ಭವ್ಯ ಭವಿಷ್ಯಕ್ಕೆ ಮತ್ತೆ ಮೋದಿ ಅವಶ್ಯಕವಾಗಿದ್ದಾರೆ ಎಂದು ಚಿಂತಕ ಸೂಲಿಬೆಲೆ ಚಕ್ರವರ್ತಿ ಅಭಿಪ್ರಾಯಪಟ್ಟರು. ಪಟ್ಟಣದ ಚನ್ನಬಸವಾಶ್ರಮ ಪರಿಸರದ ಹರ್ಡೆಕರ ಮಂಜಪ್ಪ ವೇದಿಕೆಯಲ್ಲಿ ಸಂಜೆ ನಮೋ ಬ್ರಿಗೇಡ್ ವತಿಯಿಂದ ಆಯೋಜಿಸಿದ್ದ ಚಿಂತನಾ ಸಭೆ ಉದ್ದೇಶಿಸಿ ಮಾತನಾಡಿದ ಅವರು, ವಿಶ್ವದ ಎಲ್ಲಾ ಶ್ರೀಮಂತ ರಾಷ್ಟ್ರಗಳಿಗೆ ಕೊರೋನಾ ಲಸಿಕೆ ನೀಡಿ ಅವರ ಪ್ರಾಣ ಉಳಿಸಿದ ಹೆಮ್ಮೆ ಭಾರತಕ್ಕೆ ತಂದು ಕೊಟ್ಟಿದ್ದು ಮೋದಿ. ಕೆಲವರು ಭಾರತೀಯರಿಗೆ ಪುಕ್ಕಟೆ ಲಸಿಕೆ ನೀಡುತ್ತಿರುವುದು ಸಹಿಸದೆ ವಿದೇಶಿ ಲಸಿಕೆಯೇ ಸುರಕ್ಷಿತ ಎಂದು ಪ್ರಚಾರ ಮಾಡಿದರು. ಆದರೆ ಇದೀಗ ವಿದೇಶಿ ಲಸಿಕೆಯ ಆವಾಂತರ ತಿಳಿದು ಬಂದಿದೆ ಎಂದರು.
ನರೇಂದ್ರ ಮೋದಿ ಭಾರತವನ್ನು ದಕ್ಷೀಣಾರ್ಧ ಗೋಳದ ನಾಯಕನನ್ನಾಗಿ ಮಾಡಿದ್ದಾರೆ. ಸ್ವಾತಂತ್ರ್ಯದ ನಂತರ ಬಂದ ಎಲ್ಲಾ ಸರ್ಕಾರಗಳು ಮಾಡದ ಕೆಲಸಗಳನ್ನು ಕೇವಲ 10 ವರ್ಷಗಳಲ್ಲಿ ಮಾಡಿ ದೇಶವನ್ನು ಜಗತ್ತಿಗೆ ಗುರುತಿಸುವಂತೆ ಮಾಡಿರುವ ಶ್ರೇಯ ಅವರಿಗೆ ಸಲ್ಲುತ್ತದೆ. ಹೀಗಾಗಿ ಭವ್ಯ ಭಾರತದ ಭವಿಷ್ಯಕ್ಕೆ ಮತ್ತೆ ನರೇಂದ್ರ ಮೋದಿ ಅತ್ಯವಶ್ಯಕವಾಗಿದ್ದಾರೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿ ಮಾತನಾಡಿದ ಹಲಬರ್ಗಾ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯರು, ದೇಶ ಸುಭದ್ರವಾಗಿರಬೇಕಾದರೆ ಮೋದಿ ಮತ್ತೆ ಗೆಲ್ಲಬೇಕು. ಕಳೆದ ಹಲವಾರು ವರ್ಷಗಳಲ್ಲಿ ಸಾಕಷ್ಟು ಭಯೋತ್ಪಾದಕ ಕೃತ್ಯಗಳು ನಡೆಯುತ್ತಿದ್ದವು. ಆದರೆ ನರೇಂದ್ರ ಮೋದಿ ಕಾಲಾವಧಿಯಲ್ಲಿ ಭಯೋತ್ಪಾದನಾ ಕೃತ್ಯಗಳಿಗೆ ಕಡಿವಾಣ ಹಾಕಲಾಗಿದೆ ಎಂದು ಹೇಳಿದರು.
undefined
ಪಾಪ ಕುಮಾರಣ್ಣ ಹೆದರಿ ಮಂಡ್ಯಕ್ಕೆ ಓಟ: ಶಾಸಕ ಬಾಲಕೃಷ್ಣ ಲೇವಡಿ
ಮೆಹಕರ, ತಡೋಳಾ ಮಠದ ರಾಜೇಶ್ವರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಪ್ರಮುಖರಾದ ಶಿವು ಲೋಖಂಡೆ, ನಮೋ ಬ್ರಿಗೇಡ್ ತಾಲೂಕು ಸಂಚಾಲಕ ಮಹಾಲಿಂಗ ಖಂಡ್ರೆ, ಪದಾಧಿಕಾರಿಗಳಾದ ಆಶಿಶ್ ಕುಲಕರ್ಣಿ, ಸಂಗಮೇಶ ಟೆಂಕಾಳೆ, ಪ್ರಶಾಂತ ಕಾಕನಾಳೆ, ಜಗದೀಶ ಪಾಟೀಲ್, ವೀರಭದ್ರ ಹಲಬುರಗೆ, ಆಕಾಶ ಪಾಟೀಲ್ ಹಾಗೂ ರಾಜೋಳೆ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಯಾವುದೇ ರೀತಿಯ ಅಹಿತರಕ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ದೀಪಕ ಥಮಕೆ ನಿರೂಪಿಸಿದರೆ, ಮಹಾಲಿಂಗ ಖಂಡ್ರೆ ವಂದಿಸಿದರು.
ಮೋದಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಮಾಡಿ: ಭಾರತವನ್ನು ಜಗತ್ತಿನ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಿ ದೇಶದ ಘನತೆಯನ್ನು ಮುಗಿಲೆತ್ತರಕ್ಕೆ ಹಾರಿಸುವ ಶಪಥ ಕೈಗೊಂಡಿರುವ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಮೂರನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವಂತೆ ಪ್ರತಿಯೊಬ್ಬ ಭಾರತೀಯನು ನೋಡಿಕೊಳ್ಳಬೇಕು ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಪಟ್ಟಣದ ಪುರಸಭೆ ಬಯಲುರಂಗ ಮಂದಿರದ ಆವರಣದಲ್ಲಿ ನಮೋ ಯುವ ಬ್ರಿಗೇಡ್ ವತಿಯಿಂದ ನಡೆದ ಮೋದಿ ಮತ್ತೊಮ್ಮೆ ಮತ್ತು ಜೈಶ್ರೀರಾಮ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪ್ರಧಾನಿ ಎಲ್ಲರೂ ಗರ್ವದಿಂದ ಹೇಳಿಕೊಳ್ಳುವ ವಿಶ್ವನಾಯಕರಾಗಿದ್ದು, ಅವರಿಂದ ಮಾತ್ರ ದೇಶದ ಉದ್ಧಾರ ಸಾಧ್ಯ ಎಂದರು.
ಕಾಂಗ್ರೆಸ್ ಗ್ಯಾರಂಟಿಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಕಳೆದ 60 ವರ್ಷಗಳಲ್ಲಿ ಸಾಧ್ಯವಾಗದ ಅಭಿವೃದ್ಧಿ ಕೆಲಸಗಳನ್ನು 10 ವರ್ಷದಲ್ಲಿ ಪೂರೈಸಿರುವ ನರೇಂದ್ರ ಮೋದಿಯವರು ಭಾರತದ ಜನರೇ ನನ್ನ ಪರಿವಾರ ಎಂದು ಭಾವಿಸಿ ಕುಟುಂಬವನ್ನು ತೊರೆದು ದೇಶ ಕಟ್ಟುವ ಕಾಯಕದಲ್ಲಿ ನಿರತರಾಗಿದ್ದು, ಅವರಿಗೆ ಪ್ರತಿಯೊಬ್ಬರು ತಮ್ಮ ಅಭೂತಪೂರ್ವ ಬೆಂಬಲ ನೀಡಬೇಕು ಎಂದು ತಿಳಿಸಿದರು. ಸಮಸ್ತ ಹಿಂದೂಗಳ 500 ವರ್ಷಗಳ ಕನಸಿನ ಕೇಂದ್ರವಾಗಿದ್ದ ರಾಮಮಂದಿರ ನಿರ್ಮಾಣ ಮಾಡಿರುವ ಗರಿಮೆ ಮತ್ತು ಹಿರಿಮೆ ಬಿಜೆಪಿಯವರಿಗೆ ಯಾಕೆ ಎಂದು ಕಾಂಗ್ರೆಸ್ಸಿಗರು ಪ್ರಶ್ನೆ ಮಾಡುತ್ತಿದ್ದು, ಆರಂಭದಿಂದ ಅಂತ್ಯದವರೆಗೂ ರಾಮಲಲ್ಲಾನ ಪ್ರತಿಷ್ಠಾಪನೆಗೆ ಟೊಂಕಕಟ್ಟಿ ನಿಂತಿದ್ದವರಿಗೆ ಅದರ ಕೀರ್ತಿ ಸಲ್ಲದೆ ಮತ್ಯಾರಿಗೆ ಸೇರಬೇಕೆಂದು ಪ್ರಶ್ನಿಸಿದರು.