ಹಿಂದೂ ಧರ್ಮ ಜಾತ್ಯತೀತತೆಯ ವಿರುದ್ಧವೆಂದು ಬಿಂಬಿಸುವುದು ವ್ಯರ್ಥ ಪ್ರಯತ್ನ: ಕಲ್ಲಡ್ಕ ಪ್ರಭಾಕರ್ ಭಟ್

By Suvarna News  |  First Published Jan 31, 2023, 7:37 PM IST

ಜಗತ್ತಿನ ಹಿತವನ್ನು ಬಯಸುವ ಏಕೈಕ ಧರ್ಮ ಹಿಂದೂ ಧರ್ಮ. ಆದರೆ ಹಿಂದೂ ಧರ್ಮ ಜಾತ್ಯತೀತ ವಿರುದ್ದವಾಗಿದೆ ಎಂದು ಬಿಂಬಿಸಲು ಕೆಲವರು ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು.


ಉಡುಪಿ (ಜ.31): ಜಗತ್ತಿನ ಹಿತವನ್ನು ಬಯಸುವ ಏಕೈಕ ಧರ್ಮ ಹಿಂದೂ ಧರ್ಮ. ಆದರೆ ಹಿಂದೂ ಧರ್ಮ ಜಾತ್ಯತೀತ ವಿರುದ್ದವಾಗಿದೆ ಎಂದು ಬಿಂಬಿಸಲು ಕೆಲವರು ವ್ಯರ್ಥ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಮಣಿಪಾಲದ ಶಿವಪಾಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ಸಂಕಲ್ಪ ದಿವಸ್ ಮತ್ತು ಮೃತ್ತಿಕಾ ಪೂಜೆ ಅಂಗವಾಗಿ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ನಮ್ಮದು ರಿಜಿಜನ್ (ಮತ) ಅಲ್ಲ, ಧರ್ಮ. ಜೀವನದ ದರ್ಶನ ಮಾಡಿಸುವುದು ಹಿಂದೂ ಧರ್ಮ. ಭಾರತದ ದೇಶದ ಮೇಲೆ ಮೊಘಲರು, ಕ್ರೈಸ್ತರು ದಾಳಿಯನ್ನು ನಡೆಸಿ, ಈ ದೇಶದ ಅಸ್ಮಿತೆಯನ್ನು ಹಾಳು ಗೆಡವಲು ಯತ್ನಿಸಿದರೂ, ಹಿಂದೂ ಧರ್ಮ ಉಳಿದಿದೆ ಎಂದರು.

Latest Videos

undefined

ಬಾಬಾ ಬಾಗೇಶ್ವರ್‌ಗೆ ಸವಾಲ್: 'ಹಿಂದೂ ಫೈರ್ ಬ್ರ್ಯಾಂಡ್' ಕೊಟ್ಟ ಉತ್ತರವೇನು?

ತಾಯಿಯನ್ನು ಆರಾಧಿಸುವ ಏಕೈಕ ದೇಶ ಭಾರತ. ಈ ಪದ್ದತಿಯನ್ನು ಹಾಳುಗೆಡವಲು ನಮ್ಮೆಲ್ಲರ ಪದ್ದತಿಯನ್ನು ಮೂಢನಂಬಿಕೆ ಎಂದು ಬಿಂಬಿಸಲಾಯಿತಲ್ಲದೇ, ಇಂದಿಗೂ ಬಿಂಬಿಸುವ ಪ್ರಯತ್ನ ನಡೆಯುತ್ತಿರುವುದು ವಿಪರ್ಯಾಸ ಎಂದರು‌. ಶಾಸಕ ರಘುಪತಿ ಭಟ್ ಸಭಾಧ್ಯಕ್ಷತೆಯನ್ನು ವಹಿಸಿದ್ದರು.

ನಾನು ಹಿಂದೂ ವಿರೋಧಿಯಲ್ಲ: ಬಿಜೆಪಿ, ಜೆಡಿಎಸ್‌ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಈ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಶೃಂಗೇರಿ ಮಠದ ಪ್ರಾಂತೀಯ ಧರ್ಮಾಧಿಕಾರಿ ವಾಗೀಶ್ ಶಾಸ್ತ್ರಿ, ಮುಂಬಯಿಯ ಉದ್ಯಮಿ ಬಾಲಕೃಷ್ಣ ಭಂಡಾರಿ, ಮಣಿಪಾಲ ಮಾಹೆ ಸಹಕುಲಾಧಿಪತಿ ಡಾ| ಹೆಚ್.ಎಸ್.ಬಲ್ಲಾಳ್, ಆರ್.ಎಸ್.ಎಸ್ ನ ಜಿಲ್ಲಾ ಸಂಘಚಾಲಕ್ ಡಾ| ನಾರಾಯಣ ಶೆಣೈ, ಮಾಜಿ ವಿಧಾನ ಪರಿಷತ್ ಸದಸ್ಯ ದಯಾನಂದ ರೆಡ್ಡಿ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್,   ಉದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಪ್ರಸಾದ್ ನೇತ್ರಾಲಯದ ಡಾ| ಕೃಷ್ಣಪ್ರಸಾದ್, ಮುಂಬಯಿಯ ಪರ್ವತ್ ಶೆಟ್ಟಿ, ಉಡುಪಿ ನಿರ್ಮಿತಿ ಕೇಂದ್ರದ ಅರುಣ್ ಕುಮಾರ್, ನಗರಸಭಾ ಸದಸ್ಯೆ ವಿಜಯಲಕ್ಷ್ಮಿ, ಕುಂದಾಪುರದ ಗುತ್ತಿಗೆದಾರ ಕಾರ್ತಿಕ್ ನಾಯಕ್, ಲೆ| ಜ ಎಮ್.ಡಿ ವೆಂಕಟೇಶ್, ನಗರಸಭೆ ಸದಸ್ಯೆ ಕಲ್ಪನಾ ಸುಧಾಮ, ಪ್ರಮುಖರಾದ ದಿನೇಶ್ ಪ್ರಭು, ದಿನೇಶ್ ಸಾಮಂತ್, ವಿಶ್ವನಾಥ್ ಶಾಸ್ತ್ರಿ ಉಪಸ್ಥಿತರಿದ್ದರು. ದೇವಸ್ಥಾನದ ಅಭಿವೃದ್ದಿ ಟ್ರಸ್ಟ್ ನ ಅಧ್ಯಕ್ಷ ಮಹೇಶ್ ಠಾಕೂರ್ ಸ್ವಾಗತಿಸಿ, ಬಾಲಕೃಷ್ಣ ಮುದ್ದೋಡಿ ನಿರೂಪಿಸಿದರು.

click me!