ಸರಿಗಮಪ ಸ್ಪರ್ಧಿ ಕೀರ್ತಿ ಬೆಂಬಲಕ್ಕೆ ಸೊರಬದಿಂದ ಬೆಂಗಳೂರಿಗೆ ಬಂದ್ರು ಫ್ರೆಂಡ್ಸ್, ಟೀಚರ್ಸ್

Published : Jun 13, 2026, 10:34 AM IST
Saregamapa Keerthi

ಸಾರಾಂಶ

ಜೀ ಕನ್ನಡದ ಸರಿಗಮಪ ಲಿಟಲ್‌ಚಾಂಪ್ಸ್ ಸ್ಪರ್ಧಿ, ಸೊರಬದ ಕೀರ್ತಿ ಅವರಿಗೆ ಬೆಂಬಲ ಸೂಚಿಸಲು ಅವರ ಶಾಲೆಯ ಸಹಪಾಠಿಗಳು ಮತ್ತು ಶಿಕ್ಷಕರು ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ಕಂಠೀರವ ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿ, ಈ ಗ್ರಾಮೀಣ ಪ್ರತಿಭೆಗೆ ಪ್ರೋತ್ಸಾಹ ನೀಡಿದರು.

ಶಿವಮೊಗ್ಗ: ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಲಿಟಲ್‌ಚಾಂಪ್ಸ್ ಸೀಸನ್-22ರ ಸ್ಪರ್ಧಿ ತಾಲೂಕಿನ ಹರೀಶಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಕೀರ್ತಿ ಅವರ ಬೆಂಬಲಕ್ಕೆ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ತಂಡ ಬೆಂಗಳೂರಿಗೆ ಪಯಣ ಬೆಳೆಸಿತು. ಈ ವೇಳೆ ಗ್ರಾಮಸ್ಥರು ತಂಡಕ್ಕೆ ಆತ್ಮೀಯವಾಗಿ ಶುಭ ಕೋರಿ, ಪ್ರೋತ್ಸಾಹ ನೀಡಿದರು.

ವಾಹಿನಿಯ ವಿಶೇಷ ಆಹ್ವಾನದ ಮೇರೆಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗವಹಿಸಿದ ಶಾಲಾ ತಂಡ, ಕೀರ್ತಿ ಅವರಿಗೆ ನೇರವಾಗಿ ಬೆಂಬಲ ವ್ಯಕ್ತಪಡಿಸಿತು.

ಇದನ್ನೂ ಓದಿ: ಹಿಂದೂ ಗೀತೆ ಹಾಡಿದ್ದಕ್ಕೆ ಝಡ್​ ಪ್ಲಸ್​ ರೀತಿ ಭದ್ರತೆ ಕೊಡ್ಬೇಕಾಯ್ತು: ಕರಾಳ ದಿನ ನೆನೆದ ಸುಹಾನಾ ಸೈಯದ್​

ಗ್ರಾಮೀಣ ಭಾಗದ ಅಪರೂಪದ ಪ್ರತಿಭೆ

ಗ್ರಾಮೀಣ ಭಾಗದ ಈ ಅಪರೂಪದ ಪ್ರತಿಭೆಗೆ ನೆರವಾಗಲು ಮುಂದಾಗಿರುವ ವಿದ್ಯಾರ್ಥಿಗಳ ಈ ಪ್ರಯಾಣಕ್ಕೆ ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ಎಸ್. ಮಧು ಬಂಗಾರಪ್ಪ ಹಾಗೂ ಅವರ ತಂಡ ಸಂಪೂರ್ಣ ಸಹಕಾರ ನೀಡಿದೆ ಎಂದು ತಾಪಂ ಮಾಜಿ ಸದಸ್ಯ ಸುನೀಲ್‌ಗೌಡ ತಿಳಿಸಿದರು.

ತಾಪಂ ಮಾಜಿ ಸದಸ್ಯ ಸುನೀಲ್‌ಗೌಡ, ಬೆನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಮಾರ್ಯಪ್ಪ, ತಾಲೂಕು ಹಿಂದುಳಿದ ವರ್ಗದ ಅಧ್ಯಕ್ಷ ಎನ್.ಜಿ. ನಾಗರಾಜ್, ಗ್ರಾಮಸ್ಥರು ಹಾಜರಿದ್ದರು.

ಇದನ್ನೂ ಓದಿ: ಪ್ರತಿಭೆಗಳಿಗಲ್ಲ, ಕಷ್ಟ ಹೇಳ್ಕೊಳ್ಳೋರಿಗೆ ಮಾತ್ರ ಚಾನ್ಸ್ ಎಂದ ವಿಪಿ ಸರ್… ಸರಿಗಮಪ ಚಿಂದಿ ಪ್ರೊಮೋ ರಿಲೀಸ್

PREV
Read more Articles on
click me!

Recommended Stories

ಬೆಂಗಳೂರು ರಸ್ತೆಯಲ್ಲಿ ಮತ್ತೊಮ್ಮೆ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ, ಅಡ್ಡಾದಿಡ್ಡಿ ಓಡಾಟ!
ಸರ್ಕಾರಿ ಶಾಲೆಯಲ್ಲಿ 1988- 89ರಿಂದ 1995- 96ರ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ