ಮೈಸೂರು: SSLC ವಿದ್ಯಾರ್ಥಿನಿಯ ಬಾಲ್ಯ ವಿವಾಹ ತಡೆದ ಸ್ನೇಹಿತೆ

By Kannadaprabha News  |  First Published Jun 13, 2021, 12:07 PM IST

* ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿ ನಡೆದ ಘಟನೆ
* ಬಾಲಕಿಗೆ ರಾಮನಗರ ಮೂಲದ ಯುವಕನೊಂದಿಗೆ ಮದುವೆಗೆ ಸಿದ್ಧತೆ 
* ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು


ಮೈಸೂರು(ಜೂ.13): ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ ಕಾನೂನು ಬಾಹಿರವಾಗಿ ನಿಶ್ಚಯವಾಗಿದ್ದ ಮದುವೆಯನ್ನು ಆಕೆಯ ಸ್ನೇಹಿತೆ ತಡೆದ ಘಟನೆ ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿ ನಡೆದಿದೆ. 

ಬಾಲಕಿಗೆ ರಾಮನಗರ ಮೂಲದ ಯುವಕನೊಂದಿಗೆ ಮದುವೆಗೆ ಸಿದ್ಧತೆ ನಡೆದಿತ್ತು. ಆದರೆ ಈ ವಿಚಾರ ತಿಳಿದಿದ್ದ ಮದ್ವೆಗೆ ನಿಶ್ಚಯವಾಗಿದ್ದ ಯ ಸ್ನೇಹಿತೆ ತಮ್ಮ ಶಾಲೆಯ ಶಿಕ್ಷಕಿಗೆ ಮಾಹಿತಿ ನೀಡಿದ್ದಳು. ಶಿಕ್ಷಕಿಯು ಈ ಮಾಹಿತಿಯನ್ನು ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಅವರಿಗೆ ತಿಳಿಸಿದ್ದರು. 

Tap to resize

Latest Videos

ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯ ವಿವಾಹ ಹೆಚ್ಚಳ..?

ಈ ಸಂಸ್ಥೆಯು ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ವನ್ನು ತಡೆಯಲಾಗಿದೆ. ಈ ವೇಳೆ ಪರಿಶೀಲನೆಗೆಂದು ಪೊಲೀಸರು ಬಂದಾಗ ಪೋಷಕರು ಬಾಲಕಿಯನ್ನು ಮಂಚದ ಕೆಳಗೆ ಬಚ್ಚಿಟ್ಟಿರುವ ನಾಟಕೀಯ ಬೆಳವಣಿಗೆಯೂ ನಡೆದಿದೆ. ಅಲ್ಲದೆ ಈ ಸಂಬಂಧ ವಿಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

click me!