ಸ್ವಾತಂತ್ರ ಹೋರಾಟಗಾರ ವಿಠಲಶ್ರೇಷ್ಠಿ ಮೂದೇನೂರು ನಿಧನ| ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿ ಇಹಲೋಕ ತ್ಯಜಿಸಿದ ವಿಠಲಶ್ರೇಷ್ಠಿ ಮೂದೇನೂರು|ವಿಠಲಶ್ರೇಷ್ಠಿ ಮೂದೇನೂರು ಅವರು ಹೈದರಾಬಾದ್ ನಿಜಾಮರ ವಿರುದ್ಧ ನಡೆದ ಹೋರಾಟ ದಲ್ಲಿ ಭಾಗವಹಿಸಿ ಸೆರೆಮನೆವಾಸ ಕಂಡಿದ್ದರು|
ಗಂಗಾವತಿ(ಜೂ.13): ಸ್ವಾತಂತ್ರ ಹೋರಾಟಗಾರ ಹಾಗೂ ಹಿರಿಯ ತೆರಿಗೆ ಸಲಹೆಗಾರರಾಗಿದ್ದ ವಿಠಲಶ್ರೇಷ್ಠಿ ಮೂದೇನೂರು(91) ನಿನ್ನೆ(ಶುಕ್ರವಾರ) ಮಧ್ಯಾಹ್ನ ಜಯನಗರದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
ವಿಠಲಶ್ರೇಷ್ಠಿ ಮೂದೇನೂರು ಅವರು ಹೈದರಾಬಾದ್ ನಿಜಾಮರ ವಿರುದ್ಧ ನಡೆದ ಹೋರಾಟ ದಲ್ಲಿ ಭಾಗವಹಿಸಿ ಸೆರೆಮನೆವಾಸ ಕಂಡಿದ್ದರು. ಸರಕಾರದ ಗೌರವ ಧನ ಸಿಗದೆ ವಂಚಿತರಾಗಿದ್ದರು. ನಗರದಲ್ಲಿ ನಡೆದೆ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದ್ದರು.
ಗಂಗಾವತಿ: ಸೀಲ್‌ಡೌನ್ ಮಾಡಿದ್ರೂ ಕ್ಯಾರೇ ಎನ್ನದ ಜನ..!
ಮೃತರಿಗೆ ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ನೆರವೇರಲಿದೆ.