ಬಡ ಜನರಿಗೆ ಉಚಿತವಾಗಿ ತಿರುಪತಿ ತಿಮ್ಮಪ್ಪನ ದರ್ಶನ‌ ಮಾಡಿಸಿ ಭಕ್ತಿ ಮೇರೆಯುವ ಚಿಕ್ಕೋಡಿಯ ಕುಮಾರ್ ಪಾಟೀಲ್

By Suvarna News  |  First Published Mar 31, 2022, 4:36 PM IST

* ಬಡ ಜನರಿಗೆ ಉಚಿತವಾಗಿ ತಿರುಪತಿ ತಿಮ್ಮಪ್ಪನ ದರ್ಶನ‌ ಮಾಡಿಸಿ ಭಕ್ತಿ ಮೇರೆಯುವ ಕುಮಾರ್ ಪಾಟೀಲ್
* ದೇವರ ಕೃಪೆಗೆ ಪಾತ್ರರಾಗುವಂತ ಮಾಡುವ ಭಕ್ತಿಯ ಕಾರ್ಯ ನಿಜಕ್ಕೂ ಶ್ಲಾಘನೀಯ
* ನಾಲ್ಕನೇ ವರ್ಷಕ್ಕೆ 350 ಜನ ಬಡವರನ್ನ ತಿರುಪತಿ ದರ್ಶನ ಮಾಡಿಸಲಿರುವ ಚಿಕ್ಕೋಡಿಯ ಉದ್ಯಮಿ


ವರದಿ: ಮುಷ್ತಾಕ್ ಪೀರಜಾದೇ ಏಷ್ಯಾನೆಟ್ ಸುವರ್ಣನ್ಯೂಸ್, ಚಿಕ್ಕೋಡಿ

ಚಿಕ್ಕೋಡಿ, (ಮಾ.31):
ತಿರುಪತಿ ತಿಮ್ಮಪ್ಪ ಇಡೀ ಜಗತ್ತಿನಲ್ಲಿಯೇ ಪ್ರಸಿದ್ಧಿ ಹೊಂದಿದ ದೇವರು. ಅದರಲ್ಲೂ ಆಗರ್ಭ ಶ್ರೀಮಂತ ದೇವರ ಸಾಲಿನಲ್ಲಿ ಮೊದಲು ನಿಲ್ಲೋದು ತಿಮ್ಮಪ್ಪ. ಅದೆಷ್ಟೋ ಶ್ರೀಮಂತರು ತಿಮ್ಮಪ್ಪನ ಹುಂಡಿಗೆ ದುಡ್ಡು, ವೈಡೂರ್ಯ ಹಾಕಿ ಭಕ್ತಿ ಮೇರಿತಾರೆ. ಅದಕ್ಕೆ ಲೆಕ್ಕವೇ ಇಲ್ಲ. ಅಂತಹದರಲ್ಲಿ ಇಲ್ಲೊಬ್ಬ ಭಕ್ತ ಹುಂಡಿಗೆ ದುಡ್ಡು ಹಾಕುವ ಬದಲು ಸ್ವಂತ ಖರ್ಚು ಮಾಡಿ ತಿಮ್ಮಪ್ಪನ್ನ ನೋಡಬೇಕೆಂಬ ಹೆಬ್ಬಯಕೆ ಇರುವ  ಭಕ್ತರನ್ನ ದರ್ಶನಕ್ಕೆ ವ್ಯವಸ್ಥೆ ಮಾಡಿ ಭಕ್ತಿ ಮೇರೆಯುತ್ತಿದ್ದಾರೆ.

ಬಡವರಿಂದ ಹಿಡಿದು ಜಗತ್ತಿನ ಮೂಲೆ ಮೂಲೆಯಲ್ಲಿರುವ ಅದೆಷ್ಟೋ ಜನ್ರು ತಿರುಪತಿಯಲ್ಲಿ ನೆಲಸಿರುವ ವೆಂಕಟರಮಣನ ದರ್ಶನಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದವರು ತಿಮ್ಮಪ್ಪನ್ನ ಹುಂಡಿಗೆ ದುಡ್ಡು, ಬೆಳ್ಳಿ - ಬಂಗಾರ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನ ಹಾಕ್ತಾರೆ. ಆದ್ರೆ ಕಡುಬಡತನದಲ್ಲಿ ಬೆಳೆದು ಬೆಂಗಳೂರಿನಲ್ಲಿ ಉದ್ಯಮಿಯಾಗಿರುವ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ಖಡಕಲಾಟ ಗ್ರಾಮದ ಕುಮಾರ್ ಪಾಟೀಲ್ ಎಂಬಾತ ಉದ್ಯಮಿ ತಮ್ಮ ಸ್ವಂತ ಖರ್ಚಿನಲ್ಲಿ ಸಾಕ್ಷಾತ್ ಆ ವೆಂಕಟರಮಣನ ದರ್ಶನ ಮಾಡಿಸುತ್ತಾರೆ.

Tap to resize

Latest Videos

ತಿಮ್ಮಪ್ಪನ ಹುಂಡಿಗೆ ದುಡ್ಡು ಹಾಕುವ ಬದಲು ಕಡುಬಡ ಭಕ್ತರಿಗೆ ದೇವರ ದರ್ಶನ ಮಾಡಿಸುವುದರಿಂದ ಪುಣ್ಯ ಬರುತ್ತದೆ ಅನ್ನೋ ನಂಬಿಕೆ. ಸಮಾಜಸೇವೆ ಮಾಡಬೇಕೆನ್ನುವ ಮನೋಭಾವನೆಯಿಂದ ತಿಮ್ಮಪ್ಪನ ದರ್ಶನ ಮಾಡಿಸಲು ಮುಂದಾಗಿದ್ದಾರೆ.

Gold Hands To Thimmappa: ಅನಾಮಧೇಯ ಭಕ್ತನಿಂದ ತಿರುಪತಿ ವೆಂಕಟರಣನಿಗೆ ಚಿನ್ನದ ಕೈ ಕಾಣಿಕೆ

ಇನ್ನೂ‌ ಕಳೆದ ಮೂರು ವರ್ಷಗಳಿಂದ ಭಕ್ತರನ್ನ ತಿಪ್ಪನ ದರ್ಶನ ಮಾಡಿಸುತ್ತಿರುವ ಇವರು, ಮೊದಲ ವರ್ಷ 50, ಎರಡನೇ ವರ್ಷ 100, ಮೂರನೇ ವರ್ಷ 250 ಈ ಬಾರಿ ಅಂದರೆ ನಾಲ್ಕನೇ ವರ್ಷಕ್ಕೆ 350 ಜನ ಬಡವರನ್ನ ಅದರಲ್ಲೂ ಕಿರಿಯರಿಂದ, ಹಿರಿಯರವರೆಗೆ ಎಲ್ಲ ಜಾತಿ ಧರ್ಮದ ಹೆಣ್ಣು, ಗಂಡು ಊಟ, ವಸತಿ ಜೊತೆಗೆ ಆನ್ ಲೈನ್ ನಲ್ಲಿ ಏಳು ಕುಂಡಲವಾಡ ವೆಂಕಟರಮಣನ ದರ್ಶನಕ್ಕೆ ಖಡಕಲಾಟ ಗ್ರಾಮದ ಲಕ್ಷ್ಮೀ ದೇವಸ್ಥಾನದ ಟ್ರಸ್ಟ್ ಮುಖಾಂತರವಾಗಿ ಕುಮಾರ ಪಾಟೀಲ್ ಆಯೋಜನೆ ಮಾಡಿದ್ದಾರೆ.‌ 

ಅದೆಷ್ಟೋ ಜನ್ರಿಗೆ ತಿರುಪತಿಗೆ ಹೋಗಿ ದರ್ಶನ ಮಾಡಬೇಕೆಂದರೆ ಖರ್ಚು ಮಾಡಿ ಹೋಗಲು ಆಗುವುದಿಲ್ಲ ಹೀಗಾಗಿ ತಿಮ್ಮಪ್ಪನ ಹುಂಡಿಗೆ ದುಡ್ಡು ಹಾಕುವ ಬದಲು ನಮ್ಮಂತಹ ಕಡುಬಡವರನ್ನ ಕರೆದುಕೊಂಡು ಹೋಗಿ ತಿಮ್ಮಪ್ಪ ದರ್ಶನ ಮಾಡಿಸುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ ಭಕ್ತರು.

 ಒಟ್ಟಿನಲ್ಲಿ ತಿರುಪತಿ ತಿಮ್ಮಪ್ಪ ನಿಗೆ ಆತನ‌ ಭಕ್ತರು ವಿವಿಧ ರೀತಿಯಲ್ಲಿ ಹರಕೆ ತೀರಿಸುತ್ತಾರೆ.‌ಕೆಲವರು ಕೇಶ ಮುಂಡನ ಮಾಡಿಸಿದರೇ ಕೆಲವರು ಹಣ,ಬಂಗಾರ,ವಜ್ರ ವೈಢೂರ್ಯಗಳನ್ನ ನೀಡಿ ಭಕ್ತ ಸಮರ್ಪಣೆ ಮಾಡುತ್ತಾರೆ.‌ಇದರ ಮಧ್ಯೆ ಖಡಕಲಾಡ ಗ್ರಾಮದ ಈ ಭಕ್ತ ವೆಂಕಟೇಶ್ವರನಿಗೆ ತನ್ನ ಭಕ್ತಿ ಸಮರ್ಪಣೆ ಮಾಡುವದರ ಜೊತೆಗೆ ಬಡ ಜನರಿಗೆ ಉಚಿತವಾಗಿ ತಿಮ್ಮಪ್ಪನ ದರ್ಶನ‌ಮಾಡಿ ಅವರಿಗೂ ದೇವರ ಕೃಪೆಗೆ ಪಾತ್ರರಾಗುವಂತ ಮಾಡುವ ಭಕ್ತಿಯ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

click me!