ಕುಸುಮ್‌ ಸ್ಕೀಮ್‌ನಡಿ ರಾಜ್ಯದ ರೈತರಿಗೆ ಉಚಿತ ಸೌರ ವಿದ್ಯುತ್‌: ಸುನಿಲ್‌ ಕುಮಾರ್‌ ಘೋಷಣೆ

By Kannadaprabha News  |  First Published Oct 23, 2022, 7:15 AM IST
  • ಕುಸುಮ್‌ ಸ್ಕೀಮ್‌ನಡಿ ರಾಜ್ಯದ ರೈತರಿಗೆ ಉಚಿತ ಸೌರ ವಿದ್ಯುತ್‌: ಸುನಿಲ್‌ ಕುಮಾರ್‌ ಘೋಷಣೆ
  • ಕೇಂದ್ರ ಸರ್ಕಾರದ ಸಹಕಾರದಲ್ಲಿ ಯೋಜನೆ ಅನುಷ್ಠಾನ, ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ಸೌರ ವಿದ್ಯುತ್‌ ಪೂರೈಕೆ

 ಉಡುಪಿ (ಅ.23) : ರಾಜ್ಯದ ಸುಮಾರು 3.50 ಲಕ್ಷ ರೈತರಿಗೆ ಉಚಿತವಾಗಿ ಸೌರ ವಿದ್ಯುತ್‌ ಪೂರೈಕೆ ಮಾಡುವ ಉದ್ದೇಶದಿಂದ ಕುಸುಮ್‌ ಸ್ಕೀಮ್‌ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಇಂಧನ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್‌ ಕುಮಾರ್‌ ಘೋಷಿಸಿದರು.

ವಿದ್ಯುತ್ ದರ ನಿಗದಿ ನಿಯಮಾವಳಿ ಬದಲಿಸುವ ಸೂಚನೆ ನೀಡಿದ ಇಂಧನ ಸಚಿವ

Latest Videos

undefined

ಅವರು ಶನಿವಾರ ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಕರ್ತರ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರದ ಸಹಾಯದಿಂದ ಅನುಷ್ಠಾನಗೊಳಿಸಲಾಗುವ ಈ ಯೋಜನೆಯಡಿ ರಾಜ್ಯದಲ್ಲಿ 1,000 ಮೆಗಾವ್ಯಾಟ್‌ ಸಾಮರ್ಥ್ಯದ 1,000 ಸೋಲಾರ್‌ ಫೀಡರ್‌ಗಳನ್ನು ಸ್ಥಾಪನೆ ಮಾಡಲಾಗುವುದು. ಅವುಗಳಿಂದ ನೇರವಾಗಿ ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ಉಚಿತ ಸೌರ ವಿದ್ಯುತ್‌ ಪೂರೈಕೆ ಮಾಡಲಾಗುವುದು. ಇದರಿಂದ 7 ಗಂಟೆ ನಿರಂತರ ವಿದ್ಯುತ್‌ ಪೂರೈಕೆಯ ರೈತರ ಬೇಡಿಕೆಯೂ ಈಡೇರಲಿದೆ ಎಂದು ಸಚಿವರು ಹೇಳಿದರು.

ವಿದ್ಯುತ್‌ ಬೆಲೆ ಇಳಿಕೆ..?: ಬಹಳ ವರ್ಷಗಳಿಂದಲೂ ಕಲ್ಲಿದ್ದಲು ಮತ್ತು ತೈಲ ಬೆಲೆ ಏರಿಕೆಯಾದಂತೆ ವಿದ್ಯುತ್‌ ಬೆಲೆಯನ್ನು ಪರಿಷ್ಕರಿಸಲಾಗುತ್ತಿತ್ತು. ಈಗ 3 ತಿಂಗಳಿಗೊಮ್ಮೆ ಬೆಲೆ ಪರಿಷ್ಕರಣೆಗೆ ನಿರ್ಧರಿಸಲಾಗಿದೆ. ಕಲ್ಲಿದ್ದಲು ಮತ್ತು ತೈಲ ಬೆಲೆ ಇಳಿಕೆಯಾದಲ್ಲಿ ವಿದ್ಯುತ್‌ ಬೆಲೆ ಕೂಡ ಇಳಿಕೆಯಾಗುತ್ತದೆ. ಇಲ್ಲಿ ಏರಿಸಲಾದ ಬೆಲೆಯನ್ನು ಮಾತ್ರ ಇಳಿಸುವುದಲ್ಲ, ಮೂಲ ಬೆಲೆಯಲ್ಲಿಯೇ ಇಳಿಕೆಯಾಗುತ್ತದೆ ಎಂಬುದನ್ನು ಗಮನಿಸಬೇಕು ಎಂದವರು ಹೇಳಿದರು.

ರಾಜ್ಯದಲ್ಲಿ ಶೇ 9 - 10 ರಷ್ಟುವಿದ್ಯುತ್‌ ಪೋಲಾಗುತ್ತಿತ್ತು. ಕಳೆದ ವರ್ಷ ಟ್ರಾ®್ಸ…ಫಾರ್ಮರ್‌ ನಿರ್ವಹಣೆ ಅಭಿಯಾನದ ಮೂಲಕ ಅದನ್ನು ಶೇ.7ಕ್ಕೆ ಇಳಿಸಲಾಗಿದ್ದು, ಮತ್ತೆ ಅಭಿಯಾನ ನಡೆಸಿ ಶೇ.5ಕ್ಕೆ ಇಳಿಸುವ ಗುರಿ ಹೊಂದಲಾಗಿದೆ ಎಂದರು.

ಕಳೆದ ವರ್ಷ ಬೇಸಿಗೆಯಲ್ಲಿ ಅತೀ ಹೆಚ್ಚು 14,800 ಮೆಗಾ ವ್ಯಾಟ್‌ ವಿದ್ಯುತ್‌ ಬೇಡಿಕೆಯನ್ನು ಯಶಸ್ವಿಯಾಗಿ ಪೂರೈಕೆ ಮಾಡಲಾಗಿತ್ತು. ಅದರ ಅನುಭವದ ಆಧಾರದಲ್ಲಿ ಈ ವರ್ಷವು ಎಷ್ಟೇ ಬೇಡಿಕೆ ಬಂದರು ಪೂರೈಕೆಗೆ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಸಚಿವರು ಹೇಳಿದರು.

28 ಸಾವಿರ ಅರ್ಜಿಗಳು: ಈ ಬಾರಿಯೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಾರ್ವಜನಿಕರಿಂದ 28 ಸಾವಿರ ಶಿಫಾರಸು ಅರ್ಜಿಗಳು ಬಂದಿದೆ. ಅದರಲ್ಲಿ 35 ಕಲಾ ಪ್ರಕಾರಗಳಲ್ಲಿ ಎಲ್ಲ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯುವಂತೆ ತೆರೆಮರೆಯ ಸಾಧಕರನ್ನು ಗುರುತಿಸುವಂತೆ ಆಯ್ಕೆ ಸಮಿತಿಗೆ ಸೂಚಿಸಲಾಗಿದೆ. ಆಯ್ಕೆಯಲ್ಲಿ ಯಾವುದೇ ಒತ್ತಡ ಮತ್ತು ಲಾಭಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಈ ಅ. 29 ಅಥವಾ 30 ರಂದು ಪಟ್ಟಿಬಿಡುಗಡೆ ಮಾಡಲಾಗುವುದು ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದರು.

ಎಸ್ಸಿ,ಎಸ್ಟಿಗೆ ಫ್ರೀ ಕರೆಂಟ್ ಗೊಂದಲ: ಸಿದ್ದು ಆರೋಪಕ್ಕೆ ಸುನಿಲ್ ಕುಮಾರ್ ಗುದ್ದು

ಸಾಹಿತ್ಯ ಸಮ್ಮೇಳನಕ್ಕೆ 20 ಕೋಟಿ ರುಪಾಯಿ ಬಿಡುಗಡೆ: ಹಾವೇರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಈಗಾಗಲೇ 20 ಕೋಟಿ ರುಪಾಯಿ ಬಿಡುಗಡೆ ಮಾಡಿದೆ. ಸಾಹಿತ್ಯ ಸಮ್ಮೇಳನಕ್ಕೆ ಯಾವುದೇ ರೀತಿಯ ಅನುದಾನ ಕೊರತೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದರು.

click me!