ಒಂದು ವಾರ ಖಾಸಗಿ ಬಸ್‌ಗಳ ಉಚಿತ ಸಂಚಾರ

By Kannadaprabha News  |  First Published May 25, 2020, 10:34 AM IST

ಉಡುಪಿಯಲ್ಲಿ ಸೋಮವಾರದಿಂದ ಖಾಸಗಿ ಸಿಟಿ ಬಸ್‌ಗಳ ಓಡಾಟ ಆರಂಭವಾಗಲಿದ್ದು, ಮೇ 31ರವರೆಗೆ ಆಯ್ದ 12 ಬಸ್‌ಗಳಲ್ಲಿ ಪ್ರಯಾಣಿಕರಿಗೆ ಉಚಿತ ಸೇವೆ ನೀಡಲು ಮಾಲೀಕರು ನಿರ್ಧರಿಸಿದ್ದಾರೆ.


ಉಡುಪಿ(ಮೇ 25): ಉಡುಪಿಯಲ್ಲಿ ಸೋಮವಾರದಿಂದ ಖಾಸಗಿ ಸಿಟಿ ಬಸ್‌ಗಳ ಓಡಾಟ ಆರಂಭವಾಗಲಿದ್ದು, ಮೇ 31ರವರೆಗೆ ಆಯ್ದ 12 ಬಸ್‌ಗಳಲ್ಲಿ ಪ್ರಯಾಣಿಕರಿಗೆ ಉಚಿತ ಸೇವೆ ನೀಡಲು ಮಾಲೀಕರು ನಿರ್ಧರಿಸಿದ್ದಾರೆ. ಉಡುಪಿ ಶಾಸಕ ಕೆ. ರಘುಪತಿ ಭಟ್‌ ಅವರು ಆಸರೆ ಚಾರಿಟೇಬಲ್‌ ಟ್ರಸ್ವ್‌ ಸಹಯೋಗದೊಂದಿಗೆ ಈ ಉಚಿತ ಸೇವೆಯನ್ನು ಪ್ರಾಯೋಜಿಸುತ್ತಿದ್ದಾರೆ.

ಈ ಉಚಿತ ಸೇವೆ ಪಡೆಯಲು ಪ್ರಯಾಣಿಕರಿಗೆ ಚಲೋ ಟ್ರಾವೆಲ್‌ ಕಾರ್ಡ್‌ನ್ನು ನೀಡಲಾಗುತ್ತದೆ. ಇದನ್ನು ತೋರಿಸಿ ಉಚಿತವಾಗಿ ಈ ಸಿಟಿ ಬಸ್‌ಗಳನ್ನು ಪ್ರಯಾಣಿಸಬಹುದಾಗಿದೆ.

Latest Videos

undefined

ಸೋಂಕಿತನ ಮೊಬೈಲ್ ಮುಟ್ಟಿದ ಪೊಲೀಸ್‌ಗೂ ಕೊರೋನಾ ಸೋಂಕು..!

ಈಗಾಗಲೇ ಸರ್ಕಾರದ ಸೂಚನೆಯಂತೆ ಸರ್ಕಾರಿ ಬಸ್‌ಗಳ ಓಡಾಟ ಆರಂಭವಾಗಿದ್ದರೂ, ಖಾಸಗಿ ಬಸ್‌ ಮಾಲೀಕರು ಬಸ್‌ಗಳನ್ನು ರಸ್ತೆಗಿಳಿಸಿರಲಿಲ್ಲ. ಕಳೆದ ವಾರದಲ್ಲಿ ಸರ್ಕಾರಿ ಬಸ್ಸುಗಳಲ್ಲಿ ಜನ ಸಂಚಾರ ತೀರಾ ವಿರಳವಾಗಿದ್ದರೂ, ಈ ವಾರ ಜನರು ಸರ್ಕಾರಿ ಬಸ್‌ಗಳನ್ನು ಬಳಸಲಾರಂಭಿಸುತ್ತಿದ್ದಂತೆ ಖಾಸಗಿ ಬಸ್‌ಗಳು ಉಚಿತ ಪ್ರಯಾಣದ ಸೇವೆಯನ್ನು ನೀಡಿ ಜನರನ್ನು ಸೆಳೆಯುವ ಉಪಾಯವನ್ನು ಹೂಡಿದ್ದಾರೆ. ಆದರೆ ಇದು ಮೇ 31ರವರೆಗೆ ಮತ್ತು ಕೆಲವೇ ಮಾರ್ಗಗಳಲ್ಲಿ, ಕೆಲವೇ ಬಸ್ಸುಗಳಲ್ಲಿ ಮಾತ್ರ. ನಂತರ ಪ್ರಯಾಣಿಕರು ಟಿಕೇಟು ದರವನ್ನು ತೆರಲೇಬೇಕಾಗಿದೆ.

click me!