ಸೋಂಕಿತನ ಮೊಬೈಲ್ ಮುಟ್ಟಿದ ಪೊಲೀಸ್‌ಗೂ ಕೊರೋನಾ ಸೋಂಕು..!

By Kannadaprabha NewsFirst Published May 25, 2020, 10:25 AM IST
Highlights

ಸೋಂಕಿತ ವ್ಯಕ್ತಿ ಠಾಣೆಗೆ ಬಂದಾಗ ಅವರ ಆಧಾರ್‌ ಕಾರ್ಡ್‌ನ್ನು ಠಾಣೆಯ ಸಿಬ್ಬಂದಿಯೊಬ್ಬರು ಮಾಹಿತಿಗಾಗಿ ಪಡೆದಿದ್ದರು. ಈ ಆಧಾರ್‌ ಕಾರ್ಡ್‌ ಮುಟ್ಟಿದ ಬಳಿಕ ಅದೇ ಕೈಯಿಂದ ತನ್ನ ಮೊಬೈಲ್‌ನ್ನು ಹೆಡ್‌ ಕಾನ್ಸ್‌ಟೆಬಲ್‌ಗೆ ನೀಡಿದ್ದರು ಎನ್ನಲಾಗಿದೆ. ಈಗ ಪೊಲೀಸ್ ಹೆಡ್‌ಕಾನ್ಸ್ಟೆಬಲ್‌ ಕೊರೋನಾ ಸೋಂಕಿತರಾಗಿದ್ದಾರೆ.

ಮಂಗಳೂರು/ಬಂಟ್ವಾಳ(ಮೇ 25): ದಿನದಿಂದ ದಿನಕ್ಕೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೊರೋನಾ ವಾರಿಯರ್‌ ಪೊಲೀಸರಿಗೂ ಸೋಂಕು ಹರಡಿದೆ. ವಿಟ್ಲ ಪೊಲೀಸ್‌ ಠಾಣೆಯ ಹೆಡ್‌ಕಾನ್ಸೆ$್ಟಬಲ್‌ ಒಬ್ಬರಿಗೆ ಭಾನುವಾರ ಸೋಂಕು ತಗುಲಿದ್ದು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 66ಕ್ಕೆ ಏರಿದೆ.

ಜಿಲ್ಲೆಯಲ್ಲಿನ ಒಟ್ಟು 66 ಪ್ರಕರಣಗಳಲ್ಲಿ ಪ್ರಸ್ತುತ 34 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 26 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದು, ಐವರು ಸಾವಿಗೀಡಾಗಿದ್ದಾರೆ. ಒಬ್ಬರು ಸೋಂಕಿತ ವ್ಯಕ್ತಿ ಮೂಡುಬಿದಿರೆಯ ಕ್ವಾರಂಟೈನ್‌ ಕೇಂದ್ರದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು.

ಪೊಲೀಸ್‌ ಸಿಬ್ಬಂದಿಗೆ ಸೋಂಕು ತಗುಲಿದ್ದು ಹೇಗೆ ಬಂತು?

ಮೇ 15ರಂದು ಬೆಳಗ್ಗಿನ ಜಾವ ವಿಟ್ಲಕ್ಕೆ ಮಹಾರಾಷ್ಟ್ರದ ರಾಯಗಡದಿಂದ ಕರೋಪಾಡಿ ಗ್ರಾಮದ ವ್ಯಕ್ತಿ ಆಗಮಿಸಿದ್ದಾನೆ. ವಿಟ್ಲದಲ್ಲಿ ತನಗೆ ಕ್ವಾರಂಟೈನ್‌ ಎಲ್ಲಿ ಎಂಬುದರ ಅರಿವಿಲ್ಲದ ಕಾರಣ ನೇರವಾಗಿ ವಿಟ್ಲ ಪೊಲೀಸ್‌ ಠಾಣೆಗೆ ಬಂದಿದ್ದಾನೆ. ಅಲ್ಲಿದ್ದ ಕಾನ್ಸ್‌ಟೇಬಲ್‌ ಬಳಿಯಲ್ಲಿ ತನ್ನನ್ನು ಕ್ವಾರಂಟೈನ್‌ಗೆ ಒಳಪಡಿಸುವಂತೆ ಕೇಳಿಕೊಂಡಿದ್ದಾನೆ. ವ್ಯಕ್ತಿಯ ಕೈಯಲ್ಲಿದ್ದ ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ಅನ್ನು ಠಾಣೆಯಲ್ಲಿದ್ದ ಕಾನ್‌ಸ್ಟೇಬಲ್‌ ಒಬ್ಬರು ಪಡೆದುಕೊಂಡು, ಹೆಡ್‌ ಕಾನ್‌ಸ್ಟೇಬಲ್‌ಗೆ ನೀಡಿದ್ದಾರೆ.

‘ಕೊರೋನಾ ವೈರಸ್‌ ನಡುವೆ ಚೀನಾ ಮೇಲೆ ರಾಜಕೀಯ ವೈರಸ್‌ ದಾಳಿ’

ಮೂರುದಿನಗಳ ಬಳಿಕ ಮೇ 18ರಂದು ಮುಂಬೈಯಿಂದ ಬಂದ ವ್ಯಕ್ತಿಗೆ ಕೊರೋನಾ ಇದೆ ಎಂಬುದು ದೃಢ ಪಟ್ಟಿತ್ತು. ಇದಾದ ಬೆನ್ನಲ್ಲೇ ಜಾಗೃತಗೊಂಡ ಇಲಾಖೆ ವಿಟ್ಲ ಠಾಣೆಯ ಇಬ್ಬರು ಸಿಬ್ಬಂದಿಯನ್ನು ಗೃಹ ದಿಗ್ಬಂದನಕ್ಕೆ ಒಳಪಡಿಸಿತ್ತು. ಮತ್ತು ಓರ್ವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಭಾನುವಾರ ಇದರ ವರದಿ ಬಂದಿದ್ದು, ಹೆಡ್‌ ಕಾನ್ಸ್‌ಟೆಬಲ್‌ ವರದಿ ಪಾಸಿಟಿವ್‌ ಆಗಿದೆ. ಕೂಡಲೆ ಅವರನ್ನು ಜಿಲ್ಲಾ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ಚಿಕಿತ್ಸೆಗೆ ಸ್ಥಳಾಂತರ ಮಾಡಲಾಗಿದೆ.ವಿಟ್ಲ ಠಾಣೆ 48 ಗಂಟೆ ಬಂದ್‌: ವಿಟ್ಲ ಪೊಲೀಸ್‌ ಠಾಣೆಯ ಸಿಬ್ಬಂದಿಯಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್‌ ಠಾಣೆಗೆ ಸೈನಿಟೈಸರ್‌ ಮಾಡಲಾಗಿದ್ದು, ಎರಡು ದಿನಗಳ ಕಾಲ ಬಂದ್‌ ಆಗಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಠಾಣೆಯ ಸುಮಾರು 13 ಸಿಬ್ಬಂದಿ ಸೇರಿ 20 ಜನರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ನೇತೃತ್ವದಲ್ಲಿ ಸಿಬ್ಬಂದಿ ವಿಟ್ಲ ಠಾಣೆಯನ್ನು ಸ್ಯಾನಿಟೈಸರ್‌ ಹಾಕಿ ಸ್ವಚ್ಛ ಮಾಡುವ ಕಾರ್ಯ ಮಾಡಿದರು. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವೇದಾವತಿ ಅವರ ತಂಡ ಪ್ರಾಥಮಿಕ ಸಂಪರ್ಕಕ್ಕೆ ಬಂದ ವಿಟ್ಲ ಎಸೈ ಸಹಿತ ಸೇರಿ 13 ಸಿಬ್ಬಂದಿಯನ್ನು ಹಾಗೂ ನೇರ ಸಂಪಕ್ರ್ಕಕ್ಕೆ ಬಂದ 7 ಮಂದಿ ಹೊರಗಿನವರನ್ನು ಕ್ವಾರಂಟೈನ್‌ ಮಾಡುವ ಕಾರ್ಯ ಮಾಡಿದರು.

ಕರ್ಫ್ಯೂ ನಡುವೆಯೇ 50ಕ್ಕೂ ಅಧಿಕ ಮದುವೆ..! ಇಲ್ಲಿವೆ ಫೋಟೋಸ್

ವಿಟ್ಲ ಸಿಪಿಸಿಆರ್‌ಐನಲ್ಲಿರುವ ಅತಿಥಿ ಗೃಹ, ಪೊಲೀಸ್‌ ವಸತಿ ಸಮುಚ್ಚಯ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪೊಲೀಸರನ್ನು ಹಾಗೂ ನೇರ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗುತ್ತಿದೆ.

ಮೊಬೈಲ್‌ನಿಂದ ಹರಡಿತೇ?

ಮಹಾರಾಷ್ಟ್ರದಿಂದ ವಿಟ್ಲ ಠಾಣೆಗೆ ಆಗಮಿಸಿದ ಸೋಂಕಿತ ವ್ಯಕ್ತಿಯ ನೇರ ಸಂಪರ್ಕಕ್ಕೆ ಬಾರದಿದ್ದರೂ ಹೆಡ್‌ಕಾನ್ಸ್‌ಟೆಬಲ್‌ಗೆ ಸೋಂಕು ತಗುಲಿದ್ದು ಹೇಗೆ ಎನ್ನುವ ಎನ್ನುವ ಜಿಜ್ಞಾಸೆಯೂ ಹುಟ್ಟಿದೆ. ಸೋಂಕಿತ ವ್ಯಕ್ತಿ ಠಾಣೆಗೆ ಬಂದಾಗ ಅವರ ಆಧಾರ್‌ ಕಾರ್ಡ್‌ನ್ನು ಠಾಣೆಯ ಸಿಬ್ಬಂದಿಯೊಬ್ಬರು ಮಾಹಿತಿಗಾಗಿ ಪಡೆದಿದ್ದರು. ಈ ಆಧಾರ್‌ ಕಾರ್ಡ್‌ ಮುಟ್ಟಿದ ಬಳಿಕ ಅದೇ ಕೈಯಿಂದ ತನ್ನ ಮೊಬೈಲ್‌ನ್ನು ಹೆಡ್‌ ಕಾನ್ಸ್‌ಟೆಬಲ್‌ಗೆ ನೀಡಿದ್ದರು ಎನ್ನಲಾಗಿದೆ. ವೈರಸ್‌ ಆಧಾರ್‌ ಕಾರ್ಡ್‌, ಮೊಬೈಲ್‌ ಮೂಲಕ ಹೆಡ್‌ಕಾನ್ಸೆ$್ಟಬಲ್‌ ದೇಹ ಪ್ರವೇಶಿಸಿರಬಹುದು ಎಂದು ಹೇಳಲಾಗುತ್ತಿದೆ. ಆದರೆ ವೈಜ್ಞಾನಿಕವಾಗಿ ಇದರ ಸಾಧ್ಯಾಸಾಧ್ಯತೆಗಳ ಕುರಿತು ಅಧಿಕಾರಿಗಳು ದೃಢಪಡಿಸಿಲ್ಲ.

click me!