ಚಾಮರಾಜನಗರ: ಹುಲ್ಲು ಬೆಳೆಯಲು ಅಗ್ರಿಮೆಂಟ್, ಕೈ ಕೊಟ್ಟ ಸಂಸ್ಥೆ, ಕಂಗಾಲಾದ ರೈತ..!

By Girish Goudar  |  First Published Aug 1, 2023, 10:30 PM IST

ತಮಿಳುನಾಡು ಮೂಲದ ಈಸ್ಟ್ ವ್ಯಾಲ್ಯು ಕಂಪನಿಯ ಹೆಸರಿನಲ್ಲಿ ರೈತರಿಗೆ ಬಾರಿ ಗೋಲ್ಮಾಲ್ ಮಾಡಲಾಗಿದೆ. ವೆಟ್ರಿವೇರ್, ಸೆಂಟ್ ಹುಲ್ಲ ಬೆಳೆಸಿ ಅಗ್ರಿಮೆಂಟ್ ಹಾಕಿಸಿ ಅತ್ತ ಹಣವೂ ಕೊಡದೆ ಇತ್ತ ಹುಲ್ಲು ಕೊಳ್ಳದೆ ರೈತರ ಪಾಲಿಗೆ ವಿಲನ್‌ಗಳಾಗಿದ್ದಾರೆ.


ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್  ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಆ.01):  ಅವ್ರೆಲ್ಲಾ ಮಣ್ಣನ್ನೆ ನಂಭಿಕೊಂಡು ಬಂದ ಬಡ ರೈತವರ್ಗ.ಕಾಲಕ್ಕೆ ತಕ್ಕಂತೆ ಬೆಳೆಗಳನ್ನ ಬೆಳೆದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅನ್ನದಾತರು. ದುಡಿಯುವ ವರ್ಗವೀಗ ಬೀದಿಗೆ ಬರುವಂತ ಪರಿಸ್ಥಿತಿ ಎದುರಾಗಿದೆ. ಪ್ರತಿಷ್ಠಿತ ತಮಿಳುನಾಡು ಕಂಪನಿಯನ್ನ ನಂಭಿಕೊಂಡು ಮೋಸ ಹೋಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ನಿಮ್ಮ ಮುಂದೆ..

Tap to resize

Latest Videos

undefined

ಪೊಲೀಸ್ ಠಾಣೆ ಮುಂದೆ ಜಮಾಯಿಸಿರೊ ಹಳ್ಳಿ ಮಂದಿ. ಕೈಯಲ್ಲಿ ಅದೇನನ್ನೊ ಹಿಡಿದು ಹಿಡಿ ಹಿಡಿ ಶಾಪ ಹಾಕುತ್ತಿರೊ ರೈತ ಮಹಿಳೆಯರು. ಇತ್ತ ಒಂದು ಕಾಲು ಇಲ್ಲದೆ ಹೋದ್ರು ನ್ಯಾಯಕ್ಕಾಗಿ ಹಾತೊರೆಯುತ್ತಿರೊ ಅನ್ನದಾತ. ಈ ಎಲ್ಲ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರ ಜಿಲ್ಲೆಯ ಪೂರ್ವ ಪೊಲೀಸ್ ಠಾಣೆಯ ಮುಂದೆ. ಹೌದು, ತಮಿಳುನಾಡು ಮೂಲದ ಈಸ್ಟ್ ವ್ಯಾಲ್ಯು ಕಂಪನಿಯ ಹೆಸರಿನಲ್ಲಿ ರೈತರಿಗೆ ಬಾರಿ ಗೋಲ್ಮಾಲ್ ಮಾಡಲಾಗಿದೆ. ವೆಟ್ರಿವೇರ್, ಸೆಂಟ್ ಹುಲ್ಲ ಬೆಳೆಸಿ ಅಗ್ರಿಮೆಂಟ್ ಹಾಕಿಸಿ ಅತ್ತ ಹಣವೂ ಕೊಡದೆ ಇತ್ತ ಹುಲ್ಲು ಕೊಳ್ಳದೆ ರೈತರ ಪಾಲಿಗೆ ವಿಲನ್ ಗಳಾಗಿದ್ದಾರೆ.

ಚಾಮರಾಜನಗರದಲ್ಲಿ ಮಕ್ಕಳನ್ನು ಭಾದಿಸುತ್ತಿದೆ ವಿಚಿತ್ರ ಚರ್ಮರೋಗ!

ಆಗಿದಿಷ್ಟೇ ಕಳೆದ ವರ್ಷ ಈಸ್ಟ್ ವ್ಯಾಲ್ಯು ಕಂಪನಿಯ ಸಿಬ್ಬಂದಿ ಸುಮಾರು ಐದಾರು ಗ್ರಾಮದ ರೈತರಿಂದ ಬರೋಬ್ಬರಿ 100 ಎಕರೆ ಜಾಗದಲ್ಲಿ ಹುಲ್ಲು ಬೆಳೆಯೊಕೆ ಅಗ್ರಿಮೆಂಟ್ ಹಾಕಿದ್ರು ಒಂದು ವರ್ಷಕ್ಕೆ ಒಂದು ಎಕರೆಗೆ1.5 ಲಕ್ಷ ಹಣ ನೀಡುತ್ತೇವೆಂದು ಕರಾರು ಮಾಡಿಕೊಂಡಿದ್ರು. ಆ ಬೆಳೆದ ಹುಲ್ಲಿನ ಬೇರಿಂದ ತೈಲ ಉತ್ಪಾದನೆ ಮಾಡುತ್ತೇವೆಂದು ತಿಳಿಸಿದ್ರಂತೆ. ಇದಕ್ಕೆ ಮಾರಿ ಹೋದ ರೈತ ವರ್ಗ ತಾ ಮುಂದು ನಾ ಮುಂದು ಎಂಬಂತೆ ಕುರಿಮಂದೆಯಂತೆ ಒಬ್ಬರಾದ ಮೇಲೊಬ್ಬರು ಹುಲ್ಲನ್ನ ಬೆಳೆಸಿದ್ದಾರೆ ಆದ್ರೆ ಹಣ ನೀಡದೆ ಈಸ್ಟ್ ವ್ಯಾಲ್ಯು ಕಂಪನಿ ವಂಚಿಸಿದೆ ಎಂದು ಆರೋಪಿಸಲಾಗುತ್ತಿದೆ..

ಅದೇನೆ ಹೇಳಿ ಇತ್ತ ಬೆಳೆದ ಬೆಳೆಯು ತಗೆಯಲಾಗದೆ ಅತ್ತ ಹಣವೂ ಸಿಗದೆ ಯಾರದ್ದೊ ಮಾತನ್ನ ನಂಬಿದ ರೈತ ವರ್ಗ ಈಗ ನಡು ಬೀದಿಗೆ ಬಂದಂತಾಗಿದೆ. ಸದ್ಯ ಈಸ್ಟ್ ಪೊಲೀಸ್ ಠಾಣೆಗೆ ರೈತರು ದೂರು ನೀಡಿದ್ದು ಪ್ರಕರಣ ದಾಖಲಿಸಿ ಕೊಂಡ ಪೊಲೀಸರು ಕಂಪನಿಯ ಮದ್ಯವರ್ತಿ ಮೂರ್ತಿ ಎಂಬಾತನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

click me!