Chitraduraga: ಗುಂಡಿಕೆರೆಯಲ್ಲಿ ಈಜಲು ತೆರಳಿದ್ದ 3 ವಿದ್ಯಾರ್ಥಿಗಳು, ಹೊನ್ನೇಕೆರೆಯಲ್ಲಿ ಓರ್ವ ವಿದ್ಯಾರ್ಥಿ ನೀರುಪಾಲು!

By Suvarna News  |  First Published Mar 29, 2023, 2:47 PM IST

ಈಜಲು ತಕೆರೆಗೆ ತೆರಳಿ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಧಾರುಣ ಘಟನೆ ಚಿತ್ರದುರ್ಗದ ಗುಂಡಿಕೆರೆಯಲ್ಲಿ  ನಡೆದಿದೆ.  ಒನ್ನೊಂದು ಕಡೆ ಹೊನ್ನೇಕೆರೆ ಕೆರೆಯಲ್ಲಿ ಈಜಲು ಹೋಗಿ 9 ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿದ್ದಾನೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮಾ.29): ಅವರೆಲ್ಲಾ, ಪಿಯುಸಿ ಓದುತಿದ್ದ ಪ್ರತಿಭಾವಂತ ವಿದ್ಯಾರ್ಥಿಗಳು. ಆದ್ರೆ ರಜೆ ನಿಮಿತ್ತ ಗ್ರಾಮಕ್ಕೆ ತೆರಳಿದ್ದ ಅವರು ಈಜಲು ತಕೆರೆಗೆ ತೆರಳಿ ಮೂವರು ವಿದ್ಯಾರ್ಥಿಗಳು ನೀರು ಪಾಲಾಗಿರುವ ಧಾರುಣ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.  ಪಿಯುಸಿ ಓದುತಿದ್ದ ಮೂವರು ವಿದ್ಯಾರ್ಥಿಗಳು ಧಾರುಣ ಸಾವು. ಮೃತ‌ದೇಹಗಳ ಮುಂದೆ ಗೋಳಾಡ್ತಿರುವ ಪೋಷಕರು. ಈ ಮನ ಕಲಕುವ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ನಂದನ ಹೊಸೂರು ಗ್ರಾಮದಲ್ಲಿ.  ಸಂಜೆ ಈ ಗ್ರಾಮದ  ಹೊರವಲಯದಲ್ಲಿರುವ ಗುಂಡಿಕೆರೆಯಲ್ಲಿ ನಂದನಹೊಸೂರು ಗ್ರಾಮದ ಗಿರೀಶ್(18), ಎಚ್.ಡಿ.ಪುರ ಗ್ರಾಮದ ಸಂಜಯ್(18) ಹಾಗೂ ಕಣಿವೆ ಜೋಗಿಹಳ್ಳಿ ಗ್ರಾಮದ ಮನು (15) ಎಂಬ ಮೂವರು ವಿದ್ಯಾರ್ಥಿಗಳು ನಂದನಹೊಸೂರು ಗ್ರಾಮದ   ಗುಂಡಿಕೆರೆಗೆ ತೆರಳಿದ್ದು, ಆ ಕೆರೆಯಲ್ಲಿ ಆಳವನ್ನು ಪರೀಕ್ಷಿಸುವ ಹುಡುಗಾಟಿಕೆಯಲ್ಲಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಮೂವರಲ್ಲಿ ಓರ್ವನಿಗೆ ಈಜು ಬರುತ್ತಿದ್ದು, ಇನ್ನಿಬ್ಬರು ಈಜಲು ಬರುತ್ತಿರಲಿಲ್ಲ ಆಳವಾಗಿ ಗುಂಡಿ ಬಿದ್ದಿದ್ದ ಜಾಗದಲ್ಲಿ , ಈಜಾಡುವಾಗ ಆಯತಪ್ಪಿ ಒಬ್ಬರನೊಬ್ಬರು ಹಿಡಿದುಕೊಂಡು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

Tap to resize

Latest Videos

ಈ ಮೂವರು ಬಡ ಕುಟುಂಬದವರಾಗಿದ್ದು, ನೀರು ಪಾಲಾದ ಸುದ್ದಿ ಕೇಳಿ ಇಡೀ ಗ್ರಾಮವೇ ದಿಗ್ಬ್ರಮೆಗೊಂಡಿದೆ. ಮೃತರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಹೊಳಲ್ಕೆರೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈಸಂಬಂಧ ಚಿತ್ರಹಳ್ಳಿ ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಮೃತ  ಮೂವರು ಆಪ್ತ ಸ್ನೇಹಿತರಾಗಿದ್ದು,ಪರೀಕ್ಷೆಯ ಅಂತಿಮ ಘಟ್ಟದಲ್ಲಿದ್ದ ಪರಿಣಾಮ, ಬಿಸಿಲಿನ ಬೇಗೆ ತಾಳಲಾರದೆ ‌ಕೆರೆಗೆ ತೆರಳಿ, ಕ್ಷಣ ಕಾಲ‌ ದಣಿವಾರಿಸಿಕೊಳ್ಳಲು ತೆರಳಿದ್ರು. ಆದ್ರೆ ವಿಧಿ ಇವರ ಬದುಕಿಗೆ  ಶಾಶ್ವತ ವಿಶ್ರಾಂತಿ ನೀಡಿದೆ. ಅಲ್ಲದೇ ಕೋಟೆನಾಡಲ್ಲಿ ಒಂದೇ ವಾರದಲ್ಲಿ ಏಳು ಜನ ಪ್ರತಿಭಾವಂತ ವಿದ್ಯಾರ್ಥಿಗಳು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದು, ಪೋಷಕರಲ್ಲಿ ಬಾರಿ ಆತಂಕ ಮನೆ ಮಾಡಿದೆ. ಹೀಗಾಗಿ ಪೋಷಕರು ಇನ್ನಾದ್ರು ಕೆರೆ ಕಟ್ಟೆ ಹಾಗು ಭಾವಿಗಳಿಗೆ ಈಜಾಡಲು ತೆರಳುವ ಮಕ್ಕಳ‌ ಮೇಲೆ ನಿಗಾವಹಿಸಬೇಕಿದೆ. ಮಕ್ಕಳಿಗೆ ಅಗತ್ಯ  ಜಾಗೃತಿ‌ ಮೂಡಿಸಬೇಕಿದೆ.

ಬೆಂಗಳೂರಿನಲ್ಲಿ ಸಾರ್ವಜನಿಕರ ಎದುರೇ ರೌಡಿಶೀಟರ್ ಮೇಲೆ ಅಟ್ಯಾಕ್, ಸಿಸಿಟಿವಿಯಲ್ಲಿ ದೃಶ್ಯ

ಒಟ್ಟಾರೆ  ಕೆರೆಯ ನೀರಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಹೀಗಾಗಿ ನಂದನಹೊಸೂರು ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಇನ್ನಾದ್ರು ಪೋಷಕರು ಮಕ್ಕಳನ್ನು ಕೆರೆ ಕಟ್ಟೆಗಳಿಗೆ ತೆರಳದಂತೆ ಬ್ರೇಕ್ ಹಾಕಿ, ಸಾವು ನೋವಾಗದಂತೆ ಎಚ್ಚರ ವಹಿಸಬೇಕೆಂಬುದು ನಮ್ಮ ಕಳಕಳಿ.

ಬೆಂಗಳೂರು: ರಾಷ್ಟ್ರಪತಿಗೆ ಸುಳ್ಳು ದೂರು ಕೊಟ್ಟ ಪೇದೆ ತಲೆದಂಡ

ಈಜಲು ಹೋದ 9ನೇ ತರಗತಿ ವಿದ್ಯಾರ್ಥಿ ಮುಳುಗಡೆ: ಮತ್ತೊಂದು ಘಟನೆಯಲ್ಲಿ ಹೊಳಲ್ಕೆರೆ ಪಟ್ಟಣದ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಬಿ ಎನ್ ಶಶಾಂಕ್ (15) ಹೊನ್ನೇಕೆರೆ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದಾನೆ.
click me!