
ಗದಗ(ಡಿ.03): ಕುಡಿತ ಮತ್ತಿನಲ್ಲಿ ನಾಲ್ವರು ಯುವಕರು ಪೊಲೀಸರೊಂದಿಗೆ ವಾಗ್ವಾದ ನಡೆಸಿ ಧಮಕಿ ಹಾಕಿದ ಘಟನೆ ಬುಧವಾರ ಸಂಜೆ ನಗರದ ರಿಂಗ್ ರೋಡ್ ಬಳಿ ನಡೆದಿದೆ.
ಹುಬ್ಬಳ್ಳಿಯ ಮೂಲದ ಅಖೀಲ್ (20), ರಾಹುಲ್ (18), ಗದಗ ನಿವಾಸಿಗಳಾದ ಪ್ರತೀಕ್ (18), ಪ್ರಮೋದ್ (25) ಕುಡಿದ ಮತ್ತಿನಲ್ಲಿ ಪೊಲೀಸರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದರಲ್ಲಿ ಓರ್ವ ಯುವಕ ಹುಬ್ಬಳ್ಳಿಗೆ ಬನ್ನಿ ನೋಡಿಕೊಳ್ಳುತ್ತೇನೆ ಎಂದು ಧಮಕಿ ಹಾಕಿದ್ದಾನೆ. ರಸ್ತೆಯಲ್ಲಿ ರಂಪಾಟ ನೋಡಿದ ಪೊಲೀಸರು ಚಿತ್ರೀಕರಣಕ್ಕೆ ಮುಂದಾದಾಗ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದಾರೆ.
ಕೊರೋನಾ: 45 ದಿನಗಳಿಂದ ಈ ಜಿಲ್ಲೆಯಲ್ಲಿ ಒಂದೂ ಸಾವಿಲ್ಲ..!
ವಿಷಯ ತಿಳಿಯುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸ್ಥಳಕ್ಕಾಗಮಿಸಿ ನಾಲ್ವರನ್ನು ವಶಕ್ಕೆ ಪಡೆದು ಗದಗ ಶಹರ ಠಾಣೆಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಇವರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೊಲೀಸರಿಗೆ ಸೂಚಿಸಿದ್ದಾರೆ.