ಹುಬ್ಬಳ್ಳಿ: ನಿವೇಶನ ನೀಡೋದಾಗಿ ನಂಬಿಸಿ ವಂಚನೆ, ನಾಲ್ವರ ಬಂಧನ

Suvarna News   | Asianet News
Published : Dec 22, 2019, 12:02 PM IST
ಹುಬ್ಬಳ್ಳಿ: ನಿವೇಶನ ನೀಡೋದಾಗಿ ನಂಬಿಸಿ ವಂಚನೆ, ನಾಲ್ವರ ಬಂಧನ

ಸಾರಾಂಶ

ನಿವೇಶನ ನೀಡುವುದಾಗಿ ನಂಬಿಸಿ ಜನರಿಂದ ಲಕ್ಷಾಂತರ ಹಣ ಪಡೆದು ವಂಚಿಸುತ್ತಿದ್ದ ನಾಲ್ವರ ಬಂಧನ| ಬಂಧಿತರು 5.62 ಲಕ್ಷ ರೂ ಗೆ 30/40 ನಿವೇಶನ ನೀಡುವುದಾಗಿ ನಂಬಿಸಿ ಜನರಿಂದ ಲಕ್ಷಾಂತರ ರೂ. ಹಣ ಪಡೆದು ನಿವೇಶನ ಕೊಡುತ್ತಿರಲಿಲ್ಲ| ಹಣ ವಾಪಸ್ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದರು|

ಹುಬ್ಬಳ್ಳಿ(ಡಿ.22): ನಿವೇಶನ ನೀಡುವುದಾಗಿ ನಂಬಿಸಿ ಜನರಿಂದ ಲಕ್ಷಾಂತರ ಹಣ ಪಡೆದು ವಂಚಿಸುತ್ತಿದ್ದ ನಾಲ್ವರು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಹುಬ್ಬಳ್ಳಿ-ಧಾರವಾಡದ ಪೊಲೀಸರು ಬಂಧಿಸಿದ್ದಾರೆ. ದಾದಾಪೀರ, ಮಲ್ಲಿಕಾರ್ಜುನ ಸೇರಿದಂತೆ ನಾಲ್ವರನ್ನ ಬಂಧಿಸಲಾಗಿದೆ. 

ನಗರದ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಂಧಿತರು 5.62 ಲಕ್ಷ ರೂ ಗೆ 30/40 ನಿವೇಶನ ನೀಡುವುದಾಗಿ ನಂಬಿಸಿ ಜನರಿಂದ ಲಕ್ಷಾಂತರ ರೂ. ಹಣ ಪಡೆದು ನಿವೇಶನ ಕೊಡುತ್ತಿರಲಿಲ್ಲ. ಹಣ ವಾಪಸ್ ಕೇಳಿದರೆ ಜೀವ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪ ಕೇಳಿಬಂದಿದೆ.  ಬಂಧಿತರಲ್ಲಿ ಓರ್ನ ನಕಲಿ ಪತ್ರಕರ್ತ ಕೂಡ ಇದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 

PREV
click me!

Recommended Stories

ಕಲ್ಯಾಣ ಕರ್ನಾಟಕ ನಾಡು ಈಗ ಗಾಂಜಾ ನೆಲೆವೀಡು: ನಶೆಯಲ್ಲಿ ತೇಲುತ್ತಿರೋ ಯುವ ಜನಾಂಗ
Karnataka News Live: ಮುಂದುವರಿದ ಸಿಎಂ ಕುರ್ಚಿ ಕದನ ಜನವರಿ 6ಕ್ಕೆ ಡಿಕೆಶಿ ಸಿಎಂ: ಮತ್ತೆ ಆಪ್ತ ಶಾಸಕರ ಬಾಂಬ್