ಮಂಗಳೂರು: ಗೋಲಿಬಾರ್‌ನಲ್ಲಿ ಮೃತಪಟ್ಟವರ ಮನೆಗೆ ಎಚ್‌ಡಿಕೆ ಭೇಟಿ

By Suvarna NewsFirst Published Dec 22, 2019, 11:28 AM IST
Highlights

ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಅವರು ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮೃತ ಜಲೀಲ್ ಕುಟುಂಬದ ಜತೆ ಮಾತುಕತೆ ನಡೆಸಿದ ಮಾಜಿ ಸಿಎಂ 5 ಲಕ್ಷ ರೂ. ಮೌಲ್ಯದ ಚೆಕ್ ವಿತರಿಸಿದ್ದಾರೆ.

ಮಂಗಳೂರು(ಡಿ.22): ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಅವರು ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಮೃತ ಜಲೀಲ್ ಕುಟುಂಬದ ಜತೆ ಮಾತುಕತೆ ನಡೆಸಿದ ಮಾಜಿ ಸಿಎಂ 5 ಲಕ್ಷ ರೂ. ಮೌಲ್ಯದ ಚೆಕ್ ವಿತರಿಸಿದ್ದಾರೆ.

ಮಂಗಳೂರು ಹಿಂಸಾಚಾರ ಹಿನ್ನೆಲೆ ಜಿಲ್ಲೆಗೆ ಭೇಟಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ ಬಂದರು ಕಂದುಕದಲ್ಲಿ ಮೃತ ಜಲೀಲ್ ಮನೆಗೆ ಭೇಟಿ ನೀಡಿದ್ದಾರೆ. ಜೆಡಿಎಸ್ ಮುಖಂಡ ಫಾರೂಕ್ , ಎಂಎಲ್‌ಸಿ ಭೋಜೇಗೌಡ ಹಾಗೂ ಮುಸ್ಲಿಂ‌ ಮುಖಂಡರ ಜತೆ ಸಿಎಂ ಭೇಟಿ ನೀಡಿದ್ದಾರೆ.

ಭಾರತದಲ್ಲಿ ಹೊಂದಾಣಿಕೆ ಸಾಧ್ಯವಿಲ್ಲಾಂದ್ರೆ ಪಾಕ್‌ಗೆ ಹೋಗಬಹುದು ಎಂದ ಶಾಸಕ

ಮೃತ ಜಲೀಲ್ ಕುಟುಂಬದ ಜತೆ ಮಾತುಕತೆ ನಡೆಸಿದ ಮಾಜಿ ಸಿಎಂ, 5 ಲಕ್ಷ ರೂಪಾಯಿ ಮೌಲ್ಯದ ಚೆಕ್ ವಿತರಿಸಿದ್ದಾರೆ. ಜಲೀಲ್ ಪತ್ನಿ ಹಾಗೂ ಕುಟುಂಬಸ್ಥರು ಕುಮಾರಸ್ವಾಮಿ ಮುಂದೆ ಕಣ್ಣೀರು ಹಾಕಿದ ಘಟನೆ ನಡೆಯಿತು. ಘಟನೆಗೆ ಸಂಬಧಿಸಿ ಜಲೀಲ್ ಕುಟುಂಬಸ್ಥರು ಪೊಲೀಸರ ವಿರುದ್ಧ ದೂರು ಸಲ್ಲಿಸಿದ್ದಾರೆ.

ಜಲೀಲ್ ಮನೆ ಭೇಟಿ ಬಳಿಕ ಫಳ್ನೀರ್‌ನ ಹೈಲ್ಯಾಂಡ್ ಆಸ್ಪತ್ರೆಗೆ ಭೇಟಿ ನೀಡಿದ ಕುಮಾರಸ್ವಾಮಿ ಐಸಿಯು ಹಾಗೂ ಇತರ ವಿಭಾಗದಲ್ಲಿ ದಾಖಲಾಗಿರುವ ಇಮ್ರಾನ್,‌ ಸಾಲಿ, ಆಸಿಫ್‌ರನ್ನು ಮಾತನಾಡಿಸಿದ್ದಾರೆ. ಕುಮಾರಸ್ವಾಮಿ ಸಂತ್ರಸ್ತರನ್ನು ಭೇಟಿ ಮಾಡಿ ಗಾಯಾಳುಗಳ ಹಾಗೂ ಕುಟುಂಬಸ್ಥರ ಅಳಲು ಕೇಳಿದ್ದಾರೆ.

ಉಡುಪಿ: 'ಶ್ರೀಗಳಿಗೆ ವೆಂಟಿಲೇಟರ್‌ನಲ್ಲೇ ಉಸಿರಾಟ ಮುಂದುವರಿಕೆ'..!

ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಸೂದ್ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿ ಮಸೂದ್ ಅವರ ಜೊತೆ ಮಾತುಕತೆ ನಡೆಸಿದ್ದಾರೆ. ಶಾಸಕ ಯು.ಟಿ.ಖಾದರ್, ಎಂಎಲ್ ಸಿ ಬೋಜೇಗೌಡ, ಬಿ.ಎಂ.ಫಾರೂಕ್ ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದ್ದು, ಘಟನೆ ಬಗ್ಗೆ ಮುಸ್ಲಿಂ ಮುಖಂಡರಿಂದ ಮಾಹಿತಿ ಪಡೆದಿದ್ದಾರೆ.

click me!