ಮುಳಬಾಗಿಲು: ಮೂರು ಬೈಕ್‌ಗಳಿಗೆ ಬೊಲೆರೊ ಡಿಕ್ಕಿ, ಸ್ಥಳದಲ್ಲೇ ನಾಲ್ವರ ದುರ್ಮರಣ

By Kannadaprabha News  |  First Published Dec 19, 2024, 9:31 AM IST

ಅಪಘಾತಕ್ಕೆ ಬೊಲೊರೊ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯೆ ಕಾರಣವಾಗಿದ್ದು, ಮೃತರು ಕೂಲಿ ಕೆಲಸ ಮುಗಿಸಿಕೊಂಡು ಮೂರು ಬೈಕ್‌ನಲ್ಲಿ ಮುಳಬಾಗಿಲಿನಿಂದ ಆಂಬ್ಲಿಕಲ್ ಕಡೆಗೆ ವಾಪಸ್ ಆಗುತ್ತಿದ್ದಾಗ ಬೊಲೊರೊ ವಾಹನ ಡಿಕ್ಕಿಯಾದ ಪರಿಣಾಮ ನಾಲ್ಕು ಜನರು ಸ್ಥಳದಲ್ಲೆ ಮೃತಪಟ್ಟಿದ್ದು, ಒರ್ವ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮುಳಬಾಗಿಲು(ಡಿ.19):  3 ಬೈಕ್‌ಗಳಿಗೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಮಹಿಳೆ ಸ್ಥಿತಿ ಗಂಭೀರವಾದ ಘಟನೆ ತಾಲೂಕಿನ ಎನ್.ವಡ್ಡಹಳ್ಳಿಯಿಂದ ಗುಡಿಪಲ್ಲಿ ಕಡೆಗೆ ತೆರಳುವ ಆಂಬ್ಲಿಕಲ್ ಮುಖ್ಯ ರಸ್ತೆಯ ಬಳಿ ಬುಧವಾರ ನಡೆದಿದೆ.

ಮೂರು ಬೈಕ್‌ಗಳಿಗೆ ಬೊಲೆರೊ ವಾಹನ ಡಿಕ್ಕಿಯಾದ ಪರಿಣಾಮ ನಾಲ್ಕು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇನ್ನೊಬ್ಬರು ಸಾವು ಬದುಕಿನ ಮಧ್ಯ ಹೋರಾಡುತ್ತಿರುವ ಘಟನೆ ತಾಲೂಕಿನ ಎನ್.ವಡ್ಡಹಳ್ಳಿಯಿಂದ ಗುಡಿಪಲ್ಲಿ ಕಡೆಗೆ ತೆರಳುವ ಆಂಬ್ಲಿಕಲ್‌ನ ನಂಗಲಿಯ ಮುಖ್ಯ ರಸ್ತೆಯ ಬಳಿ ಬುಧವಾರ ನಡೆದಿದೆ.

Tap to resize

Latest Videos

undefined

ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತ ಶೇ.75ರಷ್ಟು ಇಳಿಮುಖ!

ಕೋನಂಗುಂಟೆ ಗ್ರಾಮದ ರಾಧಪ್ಪ (45), ವೆಂಕಟರಾಮಪ್ಪ(45) ಹಾಗೂ ವೆಂಕಟರಾಮಪ್ಪ ಪತ್ನಿ ಅಲುವೇಲಮ್ಮ ಹಾಗೂ ಚಿಕ್ಕ ವೆಂಕಟರಮಣಪ್ಪ ಮೃತಪಟ್ಟರೆ, ಮತ್ತೊಬ್ಬ ಮಹಿಳೆ ನಾಗೇನಹಳ್ಳಿ ಮೂಲದ ಗಾಯತ್ರಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.

ಅಪಘಾತಕ್ಕೆ ಬೊಲೊರೊ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯೆ ಕಾರಣವಾಗಿದ್ದು, ಮೃತರು ಕೂಲಿ ಕೆಲಸ ಮುಗಿಸಿಕೊಂಡು ಮೂರು ಬೈಕ್‌ನಲ್ಲಿ ಮುಳಬಾಗಿಲಿನಿಂದ ಆಂಬ್ಲಿಕಲ್ ಕಡೆಗೆ ವಾಪಸ್ ಆಗುತ್ತಿದ್ದಾಗ ಬೊಲೊರೊ ವಾಹನ ಡಿಕ್ಕಿಯಾದ ಪರಿಣಾಮ ನಾಲ್ಕು ಜನರು ಸ್ಥಳದಲ್ಲೆ ಮೃತಪಟ್ಟಿದ್ದು, ಒರ್ವ ಮಹಿಳೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೊಲೊರೊ ಚಾಲಕ ಮಣಿಕಂಠ ಸಹ ಗಾಯಗೊಂಡಿದ್ದು, ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಕೋಲಾರ ಎಸ್ಪಿ ನಿಖಿಲ್.ಬಿ ಭೇಟಿ ನೀಡಿದ್ದು, ಮೃತರ ಶವಗಳನ್ನ ಮುಳಬಾಗಿಲು ಶವಗಾರಕ್ಕೆ ರವಾನೆ ಮಾಡಲಾಗಿದೆ. ಸರ್ಕಾರಿ ಆಸ್ಪತ್ರೆ ಬಳಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು.

click me!