ಬಾಗಲಕೋಟೆ: ಕಾಲು​ವೆಗೆ ಕಾರು ಉರು​ಳಿ ನಾಲ್ವರ ದುರ್ಮರಣ

Kannadaprabha News   | Asianet News
Published : Oct 23, 2021, 02:33 PM IST
ಬಾಗಲಕೋಟೆ: ಕಾಲು​ವೆಗೆ ಕಾರು ಉರು​ಳಿ ನಾಲ್ವರ ದುರ್ಮರಣ

ಸಾರಾಂಶ

*  ಬಾಗ​ಲ​ಕೋಟೆ ಜಿಲ್ಲೆಯ ಲೋಕಾ​ಪುರ ಬಳಿ ನಡೆದ ಘಟನೆ *  ಮೃತರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬೀಡಕಿ ಗ್ರಾಮದವರು *  ಈ ಸಂಬಂಧ ಲೋಕಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು   

ಲೋಕಾಪುರ(ಅ.23): ಘಟಪ್ರಭಾ ಬಲದಂಡೆ ಕಾಲುವೆಗೆ(Canal) ರಾತ್ರಿ ಕಾರು ಉರುಳಿ ಬಿದ್ದ ಪರಿ​ಣಾ​ಮ ನಾಲ್ವರು ಸ್ಥಳ​ದ​ಲ್ಲೇ ಸಾವಿಗೀಡಾದ ಘಟನೆ ಬಾಗ​ಲ​ಕೋಟೆ(Bagalkot) ಜಿಲ್ಲೆಯ ಲೋಕಾ​ಪುರ ಬಳಿಯ ಹಲ​ಕಿ-ಮೆಟ​ಗುಡ್ಡ ರಸ್ತೆ ಪಕ್ಕ​ದ​ಲ್ಲಿ ಗುರು​ವಾರ ತಡ ರಾತ್ರಿ ​ಸಂಭ​ವಿ​ಸಿ​ದೆ. 

ಮೃತರೆಲ್ಲಾ(Death) ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬೀಡಕಿ ಗ್ರಾಮದವರು. ಮುಧೋಳ ಕಡೆಯಿಂದ ಸಾಲಹಳ್ಳಿ ಕಡೆಗೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಲಕಿ ಹತ್ತಿರ ಕಾಲುವೆಗೆ ಉರುಳಿ ಬಿದ್ದಿದೆ.

ನಿಂತಿದ್ದ ಕಾರ್ ಮೇಲೆ ಹರಿದ ಟ್ರಕ್, ಒಂದೇ ಕುಟುಂಬದ 8 ಮಂದಿ ಸಾವು

ಈ ವೇಳೆ ಚಾಲಕ ಸುನೀಲ ಸೇರಿ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅದೇ ಕಾರಿನಲ್ಲಿದ್ದ ಈರಣ್ಣಾ ಘಾಠಿ ಮತ್ತು ಘರಾನಾ ಅತ್ತಿಕಾ ಅವರಿಗೆ ಗಂಭೀರ ಗಾಯಗಳಾಗಿದ್ದು(Injured) ಈಜಿಕೊಂಡು ದಡ ಸೇರಿದ್ದಾರೆ. ಗಾಯಾಳುಗಳು ಮುಧೋಳ ಆಸ್ಪತ್ರೆಯಲ್ಲಿ(Hospital) ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. ಲೋಕಾಪುರ ಪೊಲೀಸ್‌(Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುನೀಲ್‌ ಸದಪ್ಪ ಅರೆಬಿಂಚಿ(24), ಗುಡಮ್ಮನಾಳ ಗ್ರಾಮದ ಮಹಾದೇವಗೌಡ ಶಂಕರಗೌಡ ಪಾಟೀಲ(27) ಮುದೇನಕೊಪ್ಪ ಗ್ರಾಮದ ಎರ್ರಿತಾತಾ ಮೌನೇಶ ಕಂಬಾರ(26) ರಾಮಾಪುರ ಗ್ರಾಮದ ವಿಜಯ ಶಿವಾನಂದ ಲಟ್ಟಿ(26) ಮೃತರು.
 

PREV
click me!

Recommended Stories

ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!
ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ