ದಾವಣಗೆರೆ: ಕೇದಾರಶ್ರೀಗೆ ಹೃದಯಾಘಾತ, ಮುಂಬೈ ಆಸ್ಪತ್ರೆಯಲ್ಲಿ ಸರ್ಜರಿ

By Kannadaprabha News  |  First Published Oct 23, 2021, 1:31 PM IST

*  ಭೀಮಾಶಂಕರಲಿಂಗ ಶಿವಾಚಾರ್ಯರಿಗೆ ಲಘು ಹೃದಯಾಘಾತ
*  ಮುಂಬೈನ ಜಸ್‌ಲೋಕ್‌ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಶಸ್ತ್ರಚಿಕಿತ್ಸೆ
*  ಗುರುಗಳಿಗೆ ಒಂದಿಷ್ಟು ವಿಶ್ರಾಂತಿಗೆ ವೈದ್ಯರ ಸಲಹೆ 


ದಾವಣಗೆರೆ(ಅ.23): ಪಂಚಪೀಠಗಳಲ್ಲಿ ಒಂದಾದ ಉತ್ತರಾಖಂಡದ(Uttarakhand) ಕೇದಾರ ಪೀಠದ(Kedara Peetha) ಭೀಮಾಶಂಕರಲಿಂಗ ಶಿವಾಚಾರ್ಯರಿಗೆ(Shankaralinga Shivacharya Swamiji) ಲಘು ಹೃದಯಾಘಾತ ಸಂಭವಿಸಿದ ಹಿನ್ನೆಲೆಯಲ್ಲಿ ಅವರಿಗೆ ಮುಂಬೈನ ಪ್ರತಿಷ್ಠಿತ ಜಸ್‌ಲೋಕ್‌ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 

ಗುಣಮುಖರಾಗಿರುವ ಶ್ರೀಗಳನ್ನು ಶುಕ್ರವಾರ ಸಂಜೆ ಆಸ್ಪತ್ರೆಯಿಂದ(Hospital) ಬಿಡುಗಡೆಗೊಳಿಸಲಾಗಿದೆ. ನಾಂದೇಡ್‌ನ ಕೇದಾರ ಮಠದಲ್ಲಿ ವಾಸ್ತವ್ಯ ಹೂಡಿದ್ದಾಗ 6 ದಿನಗಳ ಹಿಂದೆ ಎದೆನೋವು ಕಾಣಿಸಿಕೊಂಡಿತ್ತು. ಶ್ರೀಮಠ ಹಾಗೂ ಶ್ರೀಗಳ ಭಕ್ತರಾದ ಮಹಾರಾಷ್ಟ್ರದ(Maharashtra) ಮಾಜಿ ಮುಖ್ಯಮಂತ್ರಿ ಅಶೋಕರಾವ್‌ ಚವಾಣ್‌ ತಕ್ಷಣವೇ ಜಸ್‌ಲೋಕ್‌ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಿದ್ದರು. ಗುರುವಾರ ಬೆಳಗ್ಗೆ ಎಂದಿನಂತೆ ಇಷ್ಟಲಿಂಗ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳನ್ನು ಆಸ್ಪತ್ರೆಯಲ್ಲೇ ಶ್ರೀಗಳು ನೆರವೇರಿಸಿದರು. ಶುಕ್ರವಾರ ಬಿಡುಗಡೆ ಹೊಂದಿದರು.

Tap to resize

Latest Videos

ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಶಿಕ್ಷಕರು ಶ್ರಮಿಸಲಿ : ದಿಂಗಾಲೇಶ್ವರ ಸ್ವಾಮೀಜಿ

ಶ್ರೀಗಳು ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಕೇದಾರ ಮಠದಲ್ಲಿ ವಾಸ್ತವ್ಯ ಮಾಡಿದ್ದರು. 6 ದಿನಗಳ ಹಿಂದೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ವಿಷಯ ತಿಳಿದ ಶ್ರೀಮಠ ಹಾಗೂ ಶ್ರೀಗಳ ಭಕ್ತರಾದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕರಾವ್‌ ಚವಾಣ್‌ ತಕ್ಷಣವೇ ಜಸ್‌ಲೋಕ್‌ ಆಸ್ಪತ್ರೆಗೆ ಶ್ರೀಗಳನ್ನು ದಾಖಲಿಸಿದ್ದಾರೆ. ತಪಾಸಣೆ ವೇಳೆ ಶ್ರೀಗಳಿಗೆ ಲಘು ಹೃದಯಾಘಾತವಾಗಿದ್ದು(Heart Attack) ಪತ್ತೆಯಾಗಿದೆ. ನಂತರ ಶಸ್ತ್ರ ಚಿಕಿತ್ಸೆ(Surgery) ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.

ಗುರುವಾರ ಬೆಳಗ್ಗೆ ಎಂದಿನಂತೆ ಇಷ್ಟಲಿಂಗ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳನ್ನು ಆಸ್ಪತ್ರೆಯಲ್ಲೇ ಶ್ರೀಗಳು ನೆರವೇರಿಸಿದರು. ಗುರುಗಳಿಗೆ ಒಂದಿಷ್ಟು ವಿಶ್ರಾಂತಿಗೆ ವೈದ್ಯರು ಸಲಹೆ ಮಾಡಿದ್ದಾರೆ ಎಂದು ಎಂದು ಶ್ರೀಗಳ ಆಪ್ತ ಮೂಲಗಳು ತಿಳಿಸಿವೆ. ಕೇದಾರ ಪೀಠಕ್ಕೆ ರಾಜ್ಯದಲ್ಲಿ(Karnataka) ಅಪಾರ ಪ್ರಮಾಣದ ಭಕ್ತರಿದ್ದು(Devotees), ಶ್ರೀಗಳು ಗುಣಮುಖರಾಗಿದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
 

click me!