ಅನರ್ಹತೆಯನ್ನ ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ| ಬಹುಷಃ ಸುಪ್ರೀಂ ಕೋರ್ಟ್ ಪ್ರಕಾರ ಅವರು ತಾಂತ್ರಿಕವಾಗಿ ಸರಿ ಇರಬಹುದೇನೋ| ಜನತಾ ನ್ಯಾಯಾಲಯದಲ್ಲಿ ಜನತೆ ತೀರ್ಪು ಕೊಡುತ್ತಾರೆ ಎಂದ ರಮೇಶ್ ಕುಮಾರ್| ಅನರ್ಹರು ಜನತೆಗೆ ಅವಮಾನ ಮಾಡಿದ್ದಾರೆ| ಸುಪ್ರೀಂಕೋರ್ಟ್ ಹೇಳಿದಂತೆ ಜನತೆ ತೀರ್ಮಾನ ಮಾಡ್ತಾರೆ| ಅರ್ಹರಾಗಿದ್ದರೇ ಈ ಉಪಚುನಾವಣೆಯೇ ಎದುರಾಗುತ್ತಿರಲಿಲ್ಲ|
ಕಾರವಾರ(ನ.23): ಅನರ್ಹ ಶಾಸಕ ಶಿವರಾಮ ಹೆಬ್ಬಾರ ಒಳ್ಳೆಯ ಉದ್ದೇಶಕ್ಕೆ ರಾಜೀನಾಮೆ ನೀಡಿದ್ದರೆ ಜನ ಮೆಚ್ಚುತ್ತಿದ್ದರು. ಕಾರಣ ಕಥೆ ಇಲ್ಲದೇ ವಿಶೇಷ ವಿಮಾನದಲ್ಲಿ ಬಾಂಬೆಗೆ ಹೋಗಿ ಸುಪ್ರೀಂ ಕೋರ್ಟ್ ನಿಂದ ಲಾಯಕ್ ಅನಿಸಿಕೊಂಡಿಲ್ಲ. ಉತ್ತರ ಕನ್ನಡ ಜನತೆ ಬುದ್ದಿವಂತರು ಉಪಚುನಾವಣೆಯಲ್ಲಿ ಒಳ್ಳೆಯ ಸಂದೇಶವನ್ನೇ ನೀಡಲಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದ್ದಾರೆ.
ಶನಿವಾರ ಜಿಲ್ಲೆಯ ಯಲ್ಲಾಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನರ್ಹತೆಯನ್ನ ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಬಹುಷಃ ಸುಪ್ರೀಂ ಕೋರ್ಟ್ ಪ್ರಕಾರ ಅವರು ತಾಂತ್ರಿಕವಾಗಿ ಸರಿ ಇರಬಹುದೇನೋ, ಜನತಾ ನ್ಯಾಯಾಲಯದಲ್ಲಿ ಜನತೆ ತೀರ್ಪು ಕೊಡುತ್ತಾರೆ ಎಂದು ತಿಳಿಸಿದ್ದಾರೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅನರ್ಹರು ಜನತೆಗೆ ಅವಮಾನ ಮಾಡಿದ್ದಾರೆ. ಸುಪ್ರೀಂಕೋರ್ಟ್ ಹೇಳಿದಂತೆ ಜನತೆ ತೀರ್ಮಾನ ಮಾಡ್ತಾರೆ. ಅರ್ಹರಾಗಿದ್ದರೇ ಈ ಉಪಚುನಾವಣೆಯೇ ಎದುರಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.