ಸಚಿವ ಆನಂದಸಿಂಗ್‌ ವಿರುದ್ಧ 8 ಚಾರ್ಜ್‌ಶೀಟ್: ವಿ.ಎಸ್‌. ಉಗ್ರಪ್ಪ

By Kannadaprabha News  |  First Published Mar 2, 2020, 12:21 PM IST

ಅರಣ್ಯ ಲೂಟಿಕೋರ ಆನಂದಸಿಂಗ್‌ ಗೆ ಅದೇ ಇಲಾಖೆ ನೀಡಿ ಮೇಯಲು ಬಿಟ್ಟಿದ್ದಾರೆಯೇ:  ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಆರೋಪ| ಸಚಿವ ಸಿಂಗ್‌ 23.20 ಕೋಟಿ ವಂಚನೆ ಮಾಡಿದ್ದಾರೆ| ಅರಣ್ಯ ಕಾಯ್ದೆ ಉಲ್ಲಂಘನೆ ಆರೋಪಿಗೆ ಅರಣ್ಯ ಸಚಿವ ಮಾಡಿದ್ದಾರೆ| ಸರ್ಕಾರಕ್ಕೆ ವಂಚಿಸಿದ ಆನಂದಸಿಂಗ್‌ ರನ್ನ BSY ಸಚಿವರನ್ನಾಗಿ ಮಾಡಿದ್ದಾರೆ|
 


ಬಳ್ಳಾರಿ[ಮಾ.02]: ಅರಣ್ಯ ಸಚಿವ ಆನಂದಸಿಂಗ್‌ ವಿರುದ್ಧ ಅರಣ್ಯ ಕಾಯ್ದೆ ಉಲ್ಲಂಘನೆ, ವಂಚನೆ ಆರೋಪ ಸೇರಿದಂತೆ 14 ಪ್ರಕರಣಗಳು ಸಿಬಿಐ ಹಾಗೂ ಲೋಕಾಯುಕ್ತದಲ್ಲಿ ದಾಖಲಾಗಿದ್ದು, ಈ ಪೈಕಿ 8 ಪ್ರಕರಣಗಳಲ್ಲಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಒಟ್ಟು 3,20,88,469 ಕೋಟಿ ಆನಂದಸಿಂಗ್‌ ವಂಚನೆ ಮಾಡಿದ್ದಾರೆ ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಇಷ್ಟಾಗಿಯೂ ಆನಂದಸಿಂಗ್‌ಗೆ ಅರಣ್ಯ ಸಚಿವರನ್ನಾಗಿಸಿರುವ ಮುಖ್ಯಮಂತ್ರಿಗಳು ಈತನಿಂದ ಯಾವ ಘನ ಕಾರ್ಯ ಮಾಡಿಸಲು ಹೊರಟಿದ್ದಾರೆ ಎಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ವಿ.ಎಸ್‌. ಉಗ್ರಪ್ಪ ಪ್ರಶ್ನಿಸಿದ್ದಾರೆ.

ಸುಪ್ರೀಂಕೋರ್ಟ್‌ ನಿರ್ದೇಶನದಲ್ಲಿ ಸಿಬಿಐ ಮತ್ತು ಲೋಕಾಯುಕ್ತದಲ್ಲಿ ಆನಂದಸಿಂಗ್‌ ವಿರುದ್ಧ ಅನೇಕ ಅರಣ್ಯ ಕಾಯ್ದೆ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ಹಾಕಿರುವ 8 ಪ್ರಕರಣದ  ಚಾರ್ಜ್ ಶೀಟ್ ನಲ್ಲಿ ಸರ್ಕಾರದ ಬೊಕ್ಕಸಕ್ಕೆ ವಂಚನೆ, ಎಂಎಂಆರ್‌ಡಿ ಕಾಯ್ದೆ ಉಲ್ಲಂಘನೆ, ಕರ್ನಾಟಕ ಅರಣ್ಯ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಭಾನುವಾರ ಉಗ್ರಪ್ಪ ವಿವರಿಸಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
 

ಸಿಸಿ ನಂಬರ್‌ 551/2015 ಪ್ರಕರಣದಲ್ಲಿ ಆನಂದಸಿಂಗ್‌ 9ನೇ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ ‘ಅರಣ್ಯ ಅಭಿವೃದ್ಧಿ ಶುಲ್ಕ ಪಾವತಿಸದೆ ಸರ್ಕಾರಕ್ಕೆ ಒಟ್ಟು . 3,13,66,926 ಗಳನ್ನು ವಂಚಿಸಿ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಚಾಜ್‌ರ್‍ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಪ್ರಕರಣದಲ್ಲಿ ಎಂಎಂಆರ್‌ಡಿ ಕಾಯ್ದೆ, ಕರ್ನಾಟಕ ಅರಣ್ಯ ಕಾಯ್ದೆ 1969ರ ಪ್ರಕಾರ ಅಪರಾಧ ಎಸಗಿದ್ದಾರೆ. ಸಿಸಿ ನಂಬರ್‌ 467/2016 ಪ್ರಕರಣದಲ್ಲಿ ಆನಂದಸಿಂಗ್‌ ಬೊಕ್ಕಸಕ್ಕೆ 8,68,65,425 ಗಳನ್ನು ನಷ್ಟಉಂಟು ಮಾಡಿ, ವಂಚಿಸಿ ನಂಬಿಕೆ ದ್ರೋಹ ಎಸಗಿ ಶಿಕ್ಷಾರ್ಹ ಅಪರಾಧ ಎಸಗಿರುತ್ತಾರೆ ಎಂದು ಚಾಜ್‌ರ್‍ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಸಿಸಿ ನಂಬರ್‌ 459/2016 ರಲ್ಲಿ 1,61,24,772 ಗಳನ್ನು ವಂಚನೆ ಮಾಡಿದ್ದಾರೆ. ನಂಬಿಕೆ ದ್ರೋಹ ಮಾಡಿ ಕಬ್ಬಿಣದ ಅದಿರನ್ನು ಮಾರಾಟ ಮಾಡಿರುವುದು ದೃಢಪಟ್ಟಿದ್ದು ಅರಣ್ಯ ನಿಯಮಗಳು 69 ಅಡಿಯಲ್ಲಿ ಅಪರಾಧ ಎಸಗಿರುತ್ತಾರೆ ಎಂದು ಉಲ್ಲೇಖಿಸಲಾಗಿದೆ.

ಸಿಸಿ ಸಂಖ್ಯೆ 469/2016ರಲ್ಲಿ . 72,42,658 ಗಳಷ್ಟುಅರಣ್ಯ ನಷ್ಟಉಂಟು ಮಾಡಿದ್ದಾರೆ. ಎಂಎಂಆರ್‌ಡಿ ಆ್ಯಕ್ಟ್ ಹಾಗೂ ಕರ್ನಾಟಕ ಅರಣ್ಯ ಅಧಿನಿಯಮ 1969ರ ಅಡಿಯಲ್ಲಿ ಅಪರಾಧ ಎಸಗಿರುತ್ತಾರೆ ಎಂದು ಚಾಜ್‌ರ್‍ಶೀಟ್‌ನಲ್ಲಿ ತಿಳಿಸಲಾಗಿದೆ. ಸಿಸಿ ಸಂಖ್ಯೆ 488/2016ರಲ್ಲಿ . 1,34,55,668 ಗಳನ್ನು ವಂಚಿಸಿ ನಂಬಿಕೆ ದ್ರೋಹ ಎಸಗಿದ್ದಾರೆ. ಇನ್ನು ಸಿಸಿ ನಂಬರ್‌ 596/2015 ರಲ್ಲಿ 3,83,3,0720 ಗಳಷ್ಟು ವಂಚನೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಎಂಎಂಆರ್‌ಡಿ ಆ್ಯಕ್ಟ್ ಹಾಗೂ ಅರಣ್ಯ ಕಾಯ್ದೆಯನ್ನು ಉಲ್ಲಂಘಿಘಿಸಲಾಗಿದೆ.

ಸಿಸಿ ಸಂಖ್ಯೆ 597/2015ರಲ್ಲಿ 1,22,30,534ಗಳನ್ನು ಬೊಕ್ಕಸಕ್ಕೆ ನಷ್ಟಉಂಟು ಮಾಡುವಲ್ಲಿ ಶಾಮೀಲಾಗಿ ಅರಣ್ಯ ಕಾಯ್ದೆಯನ್ನು ಉಲ್ಲಂಘಿಘಿಸಿದ್ದಾರೆ. ಸಿಸಿ ಸಂಖ್ಯೆ 471/2016ರಲ್ಲಿ 2,65,25,936 ನಷ್ಟಅರಣ್ಯ ಇಲಾಖೆಗೆ ನಷ್ಟಉಂಟು ಮಾಡಿದ್ದಾರೆ ಎಂದು ತಿಳಿಸಲಾಗಿದ್ದು, ಒಟ್ಟು 8 ಪ್ರಕರಣಗಳಲ್ಲಿ 23,20,88,469 ಕೋಟಿಗಳನ್ನು ವಂಚನೆ ಮಾಡಿದ್ದಾರೆ ಎಂದು ತಿಳಿದು ಬರುತ್ತದೆ ಎಂದು ಸಚಿವ ಆನಂದಸಿಂಗ್‌ ಅವರ ಮೇಲಿರುವ ವಿವಿಧ ಪ್ರಕರಣಗಳ ಕುರಿತು ದಾಖಲೆ ಸಮೇತವಾಗಿ ವಿವರಣೆ ನೀಡಿದರು.

ಕುರಿ ಕಾಯಲು ತೋಳ ಬಿಟ್ಟಿದ್ದಾರೆ:

ಭ್ರಷ್ಟಾಚಾರ ವಿರುದ್ಧ ಮಾತನಾಡುವ ಬಿಜೆಪಿಯವರು ಅನೇಕ ಪ್ರಕರಣಗಳಲ್ಲಿ ಸರ್ಕಾರಕ್ಕೆ ವಂಚನೆ ಮಾಡಿದ ಆನಂದಸಿಂಗ್‌ ಅವರನ್ನು ಅರಣ್ಯ ಖಾತೆ ಸಚಿವರನ್ನಾಗಿ ಮಾಡಿದ್ದಾರೆ. ಇದು ಹೇಗಿದೆಯೆಂದರೆ ‘ಕುರಿ ಕಾಯಲು ತೋಳ ಬಿಟ್ಟಂತಾಗಿದೆ’ ಎಂದು ಟೀಕಿಸಿದರು.

ಅರಣ್ಯ ಸಂಪತ್ತು ಲೂಟಿ ಮಾಡಿದ ಆನಂದಸಿಂಗ್‌ ವಿರುದ್ಧ ಈಗಾಗಲೇ ಚಾರ್ಜ್ ಶೀಟ್ ಹಾಕಲಾಗಿದೆ. ಮುಂದೆ ಎವಿಡೆನ್ಸ್‌ ನಡೆದರೆ ಅರಣ್ಯ ಇಲಾಖೆ ಅಧಿಖಾರಿಗಳು ಅವರ ವಿರುದ್ಧ ಹೇಳಿಕೆ ನೀಡಲು ಸಾಧ್ಯವಾಗಲಿದೆಯೇ ? ಮುಖ್ಯಮಂತ್ರಿಗಳು ಅರಣ್ಯ ಲೂಟಿಕೋರನಿಗೆ ಅದೇ ಇಲಾಖೆಯನ್ನು ನೀಡಿ ಮತ್ತಷ್ಟು ಮೇಯಲು ಬಿಟ್ಟಿದ್ದಾರೆಯೇ ಎಂದು ವಿ.ಎಸ್‌. ಉಗ್ರಪ್ಪ ಪ್ರಶ್ನಿಸಿದರು.

ಕಾಂಗ್ರೆಸ್‌ ಹಿರಿಯ ಮುಖಂಡರಾದ ಕಲ್ಲುಕಂಬ ಪಂಪಾಪತಿ, ಎಲ್‌. ಮಾರೆಣ್ಣ, ವೆಂಕಟೇಶ್‌ ಹೆಗಡೆ, ಅಸುಂಡಿ ನಾಗರಾಜಗೌಡ, ಬಿ.ಎಂ. ಪಾಟೀಲ್‌, ಅಂಜಿನಪ್ಪ ಕೊಳಗಲ್ಲು ಸುದ್ದಿಗೋಷ್ಠಿಯಲ್ಲಿದ್ದರು.
 

click me!