ಭದ್ರಾವತಿ ಕ್ಷೇತ್ರದ ಮಾಜಿ ಶಾಸಕ ನಿಧನ

Published : Jan 30, 2019, 10:47 AM IST
ಭದ್ರಾವತಿ ಕ್ಷೇತ್ರದ ಮಾಜಿ ಶಾಸಕ ನಿಧನ

ಸಾರಾಂಶ

ಭದ್ರಾವತಿ ಕ್ಷೇತ್ರದ ಮಾಜಿ ಶಾಸಕರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಶಾಸಕ ಸಾಲೇರ ಸಿದ್ಧಪ್ಪ ತಮ್ಮ 80ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. 

ಭದ್ರಾವತಿ: ಕ್ಷೇತ್ರದ ಮಾಜಿ ಶಾಸಕ ಸಾಲೇರ ಎಸ್.ಸಿದ್ದಪ್ಪ (80) ಅವರು ಸೋಮವಾರ ಮಧ್ಯರಾತ್ರಿ ನಿಧನ ಹೊಂದಿದರು. ಸಾಲೇರ ಎಸ್. ಸಿದ್ದಪ್ಪ ಅವರು ಜನ್ನಾಪುರ ನಗರಸಭೆ ಶಾಖಾ (ಎನ್‌ಟಿಬಿ ಲೇಔಟ್) ರಸ್ತೆಯಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. 

ವಯೋ ಸಹಜವಾಗಿ ಅಶಕ್ತರಾಗಿದ್ದ ಅವರು, ಕೆಲ ದಿನಗಳಿಂದ ಹಾಸಿಗೆ ಹಿಡಿದಿದ್ದರು. ಮಕ್ಕಳಾದ ವೈದ್ಯ ಮಲ್ಲಿಕಾರ್ಜುನ ಸಾಲೇರ ಮತ್ತು ಜ್ಯೋತಿ ಸಾಲೇರ ಅವರನ್ನು ಅಗಲಿದ್ದಾರೆ. 

1983 ರ ಚುನಾವಣೆಯಲ್ಲಿ ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಡಿ.ಮಂಜಪ್ಪ ವಿರುದ್ಧ, 1985 ರಲ್ಲಿ ಕಾಂಗ್ರೆಸ್‌ನ ಇಸಾಮಿಯಾ ವಿರುದ್ಧ ಗೆಲುವು ಸಾಧಿಸಿದ್ದರು.

PREV
click me!

Recommended Stories

CM Siddaramaiahಗೆ ಈಶ್ವರಪ್ಪ ವಾರ್ನಿಂಗ್: ಭಗವದ್ಗೀತೆ ಓದಲಿ, ತಾಕತ್ತಿದ್ದರೆ ಕುರಾನ್ ಬಗ್ಗೆ ಮಾತನಾಡಲಿ
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ