ಅಧಿಕಾರಕ್ಕೆ ಪಕ್ಷೇತರರ ಮನ ಒಲಿಸಲು ಜೆಡಿಎಸ್ ಮಾಸ್ಟರ್ ಪ್ಲಾನ್

By Kannadaprabha News  |  First Published Oct 12, 2020, 4:01 PM IST

ಅಧಿಕಾರ ಸೂತ್ರ ಪಕ್ಷೇತರ ಸದಸ್ಯರ ಕೈಯಲ್ಲಿದೆ. ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದಿರುವ ಕಾರಣ ಪಕ್ಷೇತರರು ಯಾರ ಪಕ್ಷದ ಕೈ ಹಿಡಿಯುವರೋ ಆ ಪಕ್ಷ ಅಧಿಕಾರಕ್ಕೆ ಏರಲಿದೆ. 
 


ಮಳವಳ್ಳಿ (ಅ.12): ಪಟ್ಟಣದ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧಿಕಾರ ಸೂತ್ರ ಪಕ್ಷೇತರ ಸದಸ್ಯರ ಕೈಯಲ್ಲಿದೆ. ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದಿರುವ ಕಾರಣ ಪಕ್ಷೇತರರು ಯಾರ ಪಕ್ಷದ ಕೈ ಹಿಡಿಯುವರೋ ಆ ಪಕ್ಷ ಅಧಿಕಾರಕ್ಕೆ ಏರಲಿದೆ. 

ಪುರಸಭೆಯ 23 ಸದಸ್ಯ ಸ್ಥಾನಗಳಗೆ ಮೇ 2019ರಲ್ಲಿ ಚುನಾವಣೆ ನಡೆದಿದ್ದು ಕಳೆದ 18 ತಿಂಗಳಿನಿಂದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಳ್ಳದ ಹಿನ್ನೆಲೆಯಲ್ಲಿ ಸದಸ್ಯರು ನಾಮಮಾತ್ರಕ್ಕೆ ಮಾತ್ರ ಸದಸ್ಯರಾಗಿದ್ದರು. 

Latest Videos

undefined

ರಾಮುಲುನವರ ಆರೋಗ್ಯ ಖಾತೆ ಕಿತ್ತುಕೊಂಡಿದ್ದು ಸಿಎಂ ಏಕಮುಖ ತೀರ್ಮಾನವಲ್ಲ.

ಇದೀಗ ಮೀಸಲಾತಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಬಿಜೆಪಿ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿದೆ. 

ಚುನಾವಣೆಯಲ್ಲಿ 9ಸ್ಥಾನ ಗೆದ್ದಿರುವ ಜೆಡಿಎಸ್ ಅತಿದೊಡ್ಡ ಪಕ್ಷವಾಗಿದೆ. ಇನ್ನು ಕಾಂಗ್ರೆಸ್  5, ಬಿಜೆಪಿ 2, ಪಕ್ಷೇತರರು 7 ಮಂದಿ ಗೆಲುವು ಸಾಧಿಸಿದ್ದಾರೆ. ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. 

23 ಸದಸ್ಯರಲ್ಲಿ 11 ಮಂದಿ ಮಹಿಳಾ ಸದಸ್ಯರೇ ಇರುವುದು ವಿಶೇಷ. 

ಅತಂತ್ರಗೊಂಡಿರುವ ಪುರಸಭೆಯಲ್ಲಿ ಅಧಿಕಾರ ಹಿಡಿಯಲು 13 ಸದಸ್ಯರ ಅವಶ್ಯಕತೆ ಇದೆ.  ಈಗಾಗಲೇ 9 ಸ್ಥಾನ ಗೆದ್ದಿರುವ ಜೆಡಿಎಸ್ ಶಾಸಕರ ಮತದೊಂದಿಗೆ 10 ಸದಸ್ಯ ಬಲ ಹೊಂದಿದ್ದು ಅಧಿಕಾರ ಹಿಡಿಯಲು ಬೇಕಾ ಗಿರುವ  ಮೂರು ಸ್ಥಾನಗಳಿಗೆ ಪಕ್ಷೇತರ ಮತ್ತು ಬಿಜೆಪಿ ಸದಸ್ಯರ ಸಹಕಾರ ಪಡೆಯಲು ಹವಣಿಸುತ್ತಿದೆ.  

click me!