ನಮಗೆ ಹೈಟೆಕ್, ರಂಗೀಲಾ ಸ್ವಾಮೀಜಿ ಬೇಡ, ವಚನಾನಂದ ಶ್ರೀ ವಿರುದ್ಧ ಹರಿಹಾಯ್ದ ಮಾಜಿ ಶಾಸಕ

By Suvarna NewsFirst Published Jan 25, 2021, 11:32 AM IST
Highlights

ಭಾರಿ ಚರ್ಚೆಗೆ ಗ್ರಾಸವಾದ ಎಚ್. ಎಸ್. ಶಿವಶಂಕರ್ ಹೇಳಿಕೆ| ವಚನಾನಂದ ಶ್ರೀ ವಿರುದ್ಧ  ಕಿಡಿ ಕಾರಿದ ಮಾಜಿ ಶಾಸಕ| ಅಗತ್ಯ ಬಿದ್ದರೆ ಹರಿಹರದಲ್ಲೇ ಮತ್ತೊಂದು ಪ್ರತ್ಯೇಕ ಪೀಠ ಮಾಡುತ್ತೇವೆ: ಶಿವಶಂಕರ್| 

ಹಗರಿಬೊಮ್ಮನಹಳ್ಳಿ(ಜ.25):  ದಾವಣಗೆರೆ ಜಿಲ್ಲೆಯ ಹರಿಹರ ಪೀಠದ ವಚನಾನಂದ ಶ್ರೀ ಹಾಗೂ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಮಧ್ಯೆ ಶೀತಲ ಸಮರ ಜಗಜ್ಜಾಹೀರಾಗಿರುವುದು ಎಲ್ಲರಿಗೂ ತಿಳಿದೇ ಇದೆ.

"

ಏತನ್ಮಧ್ಯೆ ಹರಿಹರದ ವಚನಾನಂದ ಶ್ರೀ ವಿರುದ್ಧ ಮಾಜಿ ಶಾಸಕ ಎಚ್. ಎಸ್. ಶಿವಶಂಕರ್ ಕಿಡಿ ಕಾರಿದ್ದಾರೆ. ಹೌದು, ಇಂದು(ಸೋಮವಾರ) ಬಳ್ಳಾರಿಯ ಹಗರಿಬೊಮ್ಮನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹರಿಹರ ಪೀಠದ ವಚನಾನಂದ ಶ್ರೀಗಳು ಹೈಟೆಕ್ ಶ್ರೀಗಳಾಗಿದ್ದಾರೆ. ಕೂಡಲ ಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಸಮಾಜಕ್ಕಾಗಿ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಇನ್ನೊಬ್ಬ ಶ್ರೀಗಳು ಹೈಟೆಕ್ ಶ್ರೀಗಳಾಗಿದ್ದು  ಅವರು ಫೇಸ್‌ಬುಕ್‌ನಲ್ಲಿ ಬಹಳ ಆ್ಯಕ್ಟಿವ್ ಆಗಿರುತ್ತಾರೆ. ಅವರು ಸ್ಟಾರ್ಸ್‌ಗಳನನ್ನ ಕರೆಸುವ ರಂಗೀಲಾ ಶ್ರೀಗಳಾಗಿದ್ದಾರೆ. ನಮಗೆ ರಂಗೀಲಾ ಶ್ರೀಗಳು ಬೇಡ, ಯೋಗ ಮಾಡುವ ಗುರುಗಳು ನಮಗೆ ಬೇಡ, ಅಗತ್ಯ ಬಿದ್ದರೆ ಹರಿಹರದಲ್ಲೇ ಮತ್ತೊಂದು ಪ್ರತ್ಯೇಕ ಪೀಠ ಮಾಡುತ್ತೇವೆ ಎಂದು ಶಿವಶಂಕರ್ ಹೇಳಿದ್ದಾರೆ. ಸಧ್ಯ ಇವರ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ. 

ಹಗರಿಬೊಮ್ಮನಹಳ್ಳಿಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತಿದ್ದ ಪಾದಯಾತ್ರೆ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ರೂ ವಿರೋಧಿಸದೆ ಜಯಮೃತ್ಯುಂಜಯ ಸ್ವಾಮೀಜಿ ವೇದಿಕೆಯಲ್ಲೆ ಸುಮ್ಮನೆ ಕುಳಿತಿದ್ದರು. 

ಹುಬ್ಬಳ್ಳಿ: ಪಂಚಮಸಾಲಿ ಪೀಠದ ಸ್ವಾಮೀಜಿಗಳ ನಡುವಿನ ಭಿನ್ನಾಭಿಪ್ರಾಯ ಜಗಜ್ಜಾಹೀರು..!

ಇಬ್ಬರು ಸ್ವಾಮೀಜಿ, ಎರಡು ಪೀಠಗಳು ಎರಡು ಕಣ್ಣು ಅಂತ ಹೇಳುತ್ತಾರೆ. ಆದರೆ ಬಹಿರಂಗವಾಗಿ ಈ ರೀತಿ ಮಾತನಾಡಿದರೂ ಜಯಮೃತ್ಯುಂಜಯ ಸ್ವಾಮೀಜಿ ಮಾತ್ರ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಈ ಮೂಲಕ ಇಬ್ಬರೂ ಶ್ರೀಗಳ ಶೀತಲ ಸಮಯ ನಡೆಯುತ್ತಿರುವ ಬಗ್ಗೆ ಮತ್ತಷ್ಟು ರೆಕ್ಕೆಪುಕ್ಕಗಳು ಹುಟ್ಟಿಕೊಂಡಿವೆ.  

2 ಎ  ಮೀಸಲಾತಿಗೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರಿಗೆ ಜಯಮೃತ್ಯುಂಜಯ ಸ್ವಾಮೀಜಿ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಪಾದಯಾತ್ರೆಯಿಂದ ವಚನಾನಂದ ಶ್ರೀಗಳು ಅಂತರವನ್ನ ಕಾಯ್ದುಕೊಂಡಿದ್ದಾರೆ. ಜ. 28 ರಂದು ಹರಿಹರದಲ್ಲಿ ನಡೆಯುವ ಸಮಾವೇಶದಲ್ಲಿ ವಚನಾನಂದ ಶ್ರಿಗಳು ಭಾಗಿಯಾಗ್ತಾರಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.
 

click me!