ಅಧಿಕಾರಕ್ಕಾಗಿ ಬಿಜೆಪಿ-ಜೆಡಿಎಸ್ ನಡುವೆ ನಡೆಯಿತು ಧರ್ಮಸ್ಥಳದಲ್ಲಿ ಒಪ್ಪಂದ

Suvarna News   | Asianet News
Published : Jan 25, 2021, 11:01 AM ISTUpdated : Jan 25, 2021, 11:02 AM IST
ಅಧಿಕಾರಕ್ಕಾಗಿ ಬಿಜೆಪಿ-ಜೆಡಿಎಸ್ ನಡುವೆ ನಡೆಯಿತು ಧರ್ಮಸ್ಥಳದಲ್ಲಿ ಒಪ್ಪಂದ

ಸಾರಾಂಶ

ಅಧಿಕಾರಕ್ಕಾಗಿ ಧರ್ಮಸ್ಥಳದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಒಪ್ಪಂದ ನಡೆದಿದೆ. ಆಣೆ ಪ್ರಮಾಣದ ಮೂಲಕ ಒಪ್ಪಂದ ಮಾಡಿಕೊಳ್ಳಲಾಗಿದೆ. 

ಚಾಮರಾಜನಗರ (ಜ.25): ರಾಜ್ಯದಲ್ಲಿ ತಿಂಗಳ ಹಿಂದಷ್ಟೆ ನಡೆದಿದ್ದ ಗ್ರಾಮ ಪಂಚಾಯತ್ ಚುನಾವಣೆಯಿಂದ ರಾಜಕೀಯ ರಂಗೇರಿದೆ. ಇದೇ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಗ್ರಾಮ ಪಂಚಾಯತ್ ಅಧಿಕಾರ ಹಂಚಿಕೆಗೆ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಲಾಗಿದೆ. 

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಣ್ಣೂರು ಗ್ರಾಪಂ ಅಧಿಕಾರಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಹಾಗೂ ಜೆಡಿಎಸ್ ನಡುವೆ ಒಪ್ಪಂದ ನಡೆದಿದೆ. 

 ನುಡಿದಂತೆ ನಡೆಯುತ್ತೇವೆಂದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಪ್ರಮಾಣ ಮಾಡಲಾಗಿದೆ.  ನುಡಿದಂತೆ ನಡೆಯದಿದ್ದರೆ ಮನೆ ಹಾಳಾಗುತ್ತೆ ಎಂದು ಎಚ್ಚರಿಕೆ ನೀಡಲಾಗಿದ್ದು, ಇದೀಗ ಆಣೆ ಪ್ರಮಾಣದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಯಡಿಯೂರಪ್ಪ ಸರ್ಕಾರದ ಮೇಲೆ ಬೇಸರ ವ್ಯಕ್ತಪಡಿಸಿದ ದೇವೇಗೌಡ ...

ಮಂಜುನಾಥನ ಸನ್ನಿಧಿಯಲ್ಲಿ ಕರ್ಪೂರ ಹಚ್ಚಿ ಪ್ರಮಾಣ ಮಾಡಿದ್ದು,  ಅಧ್ಯಕ್ಷ ಸ್ಥಾನ ಮೊದಲ ಅವಧಿ 10 ತಿಂಗಳು ಜೆಡಿಎಸ್ ಬೆಂಬಲಿತರಿಗೆ, ಎರಡನೇ ಅವಧಿಗೆ ಬಿಜೆಪಿ ಬೆಂಬಲಿತರಿಗೆ ನೀಡಲು ಒಪ್ಪಂದ ನಡೆದಿದೆ.

ಉಪಾಧ್ಯಕ್ಷ ಸ್ಥಾನ ಮೊದಲ 10 ತಿಂಗಳು ಬಿಜೆಪಿ ಬೆಂಬಲಿತರಿಗೆ, ಎರಡನೇ ಅವಧಿಗೆ ಜೆಡಿಎಸ್ ಬೆಂಬಲಿತರಿಗೆಂದು ಒಪ್ಪಂದ ಮಾಡಿಕೊಳ್ಳಲಾಗಿದೆ.
ಒಟ್ಟು 15 ಸ್ಥಾನದಲ್ಲಿ ಬಿಜೆಪಿ ಬೆಂಬಲಿತ 5, ಜೆಡಿಎಸ್ ಬೆಂಬಲಿತ 5 ಕಾಂಗ್ರೆಸ್ ಬೆಂಬಲಿತ 5 ದೊರಕಿತ್ತು. ಇದೀಗ ಒಪ್ಪಂದದ ಮೂಲಕ ಅಧಿಕಾರಕ್ಕೇರಲು ಜೆಡಿಎಸ್ ಬಿಜೆಪಿ ಸಜ್ಜಾಗಿವೆ.

PREV
click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!