ಬೆಳಗಾವಿ: ಸಂತ್ರ​ಸ್ತರ ಸಂಕಷ್ಟಆಲಿ​ಸಿದ ಉಮಾ​ಶ್ರೀ

Published : Aug 24, 2019, 01:27 PM IST
ಬೆಳಗಾವಿ: ಸಂತ್ರ​ಸ್ತರ ಸಂಕಷ್ಟಆಲಿ​ಸಿದ ಉಮಾ​ಶ್ರೀ

ಸಾರಾಂಶ

ಮಾಜಿ ಸಚಿವೆ ಉಮಾಶ್ರೀ ಬೆಳಗಾವಿಯಲ್ಲಿ ನೇಕಾರ ಪ್ರದೇಶಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಉಮಾಶ್ರೀ ನೇಕಾರರಿಗೆ ಭರವಸೆ ನೀಡಿದರು.

ಬೆಳಗಾವಿ(ಆ.24): ಮಾಜಿ ಸಚಿವೆ ಉಮಾಶ್ರೀ ಶುಕ್ರವಾರ ವಡಗಾವಿಯ ನೇಕಾರ ಪ್ರದೇಶಗಳಾದ ಸಾಯಿನಗರ, ನೇಕಾರ ಕಾಲೋನಿ, ಕಲ್ಯಾಣ ನಗರ, ಖಾಸಬಾಗ ಹಾಗೂ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸಂತ್ರಸ್ತರ ಸಂಕಷ್ಟಆಲಿಸಿದರು.

ಮಳೆಯಿಂದಾಗಿ ನೇಕಾರರ ಮನೆಗಳು ಬಿದ್ದಿವೆ. ಮನೆಯೊಳಗೆ ನೀರು ನುಗ್ಗಿದ್ದರಿಂದ ವಿದ್ಯುತ್‌ ಮಗ್ಗಗಳು ಜಲಾವೃತಗೊಂಡಿದ್ದು, ನೇಕಾರರಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ನೇಕಾರರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ನೇಕಾರರು ಮನವಿ ಮಾಡಿದರು. ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ನೇಕಾರರಿಗೆ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಉಮಾಶ್ರೀ ನೇಕಾರರಿಗೆ ಭರವಸೆ ನೀಡಿದರು.

ಪ್ರವಾಹ ಹಾನಿ : ಅಧಿಕಾರಿಗಳಿಗೆ ನೂತನ ಸಚಿವೆ ಶಶಿಕಲಾ ಜೊಲ್ಲೆ ವಾರ್ನಿಂಗ್‌

ಈ ಸಂದರ್ಭದಲ್ಲಿ ಜಿಲ್ಲಾ ನೇಕಾರರ ವೇದಿಕೆ ಅಧ್ಯಕ್ಷ ಪರಶುರಾಮ ಢಗೆ, ನಾಗಪ್ಪ ಬಸಕ್ರಿ, ಬಸವರಾಜ ಕಾಮಕರ, ಬಾಬು ದಿವಟೆ, ಶ್ರೀನಿವಾಸ ತಾಳೂಕರ ಮೊದಲಾದವರು ಇದ್ದರು.

PREV
click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ